AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಂಬೆಳಗ್ಗೆ ಮಂಡ್ಯ ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ IT ದಾಳಿ

10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳು, 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಆಸ್ತಿ ವಿವರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ಮಂಡ್ಯ ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ IT ದಾಳಿ
ಉದ್ಯಮಿ ಅಮಿರುಲ್ ಮುರ್ತುಜಾ ಮತ್ತು ಅವರ ಮನೆ
TV9 Web
| Updated By: sandhya thejappa|

Updated on:Feb 23, 2022 | 11:20 AM

Share

ಮಂಡ್ಯ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು (IT Officials) ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತಿದ್ದಾರೆ. ಉದ್ಯಮಿ ಅಮಿರುಲ್ ಮುರ್ತುಜಾ, ಅಮ್ಜಾ, ಶಹಬಾಜ್, ಶಿರೋಜ್ ನಿವಾಸ, ಕಚೇರಿಗಳಲ್ಲಿ ಐಟಿಯಿಂದ ಶೋಧ ನಡೆಸುತ್ತಿದ್ದಾರೆ. ಉದ್ಯಮ ನಡೆಸುತ್ತಿರುವ ಸಹೋದರರು ಪೌಲ್ಟ್ರಿ ಫಾರಂ, ಹೋಟೆಲ್, ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಆಸ್ತಿ ಹೊಂದಿದ್ದಾರೆ. ನಾಗಮಂಗಲ, ಮೈಸೂರು, ಮಂಡ್ಯ, ಬೆಂಗಳೂರಿನ ಹಲವೆಡೆ ಆಸ್ತಿ ಹೊಂದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳು, 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಆಸ್ತಿ ವಿವರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಕೋಮರ್ಲಾ ಗ್ರೂಪ್ ಮೇಲೆ ಐಟಿ ದಾಳಿ: ಬೆಂಗಳೂರಿನಲ್ಲಿ ಕೋಮರ್ಲಾ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬನಶಂಕರಿ, ಬಸವನಗುಡಿ ಸೇರಿ ಹಲವೆಡೆ ದಾಳಿ ಮಾಡಿದ್ದು, ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ.

ದರೋಡೆ ಮಾಡಿದ್ದ ಆರೋಪಿಗಳ ಬಂಧನ: ಅಂಗಡಿಗೆ ನುಗ್ಗಿ‌ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. 11 ಮೇ 2021 ಕ್ಕೆ ಚಿಕ್ಕಪೇಟೆಯ ಅಂಗಡಿಯಲ್ಲಿ ಕೆಲಸ ಮುಗಿಸಿ ಮೂವರು ಮಲಗಿದ್ದರು. ಬೆಳಗ್ಗೆ 3.30 ಕ್ಕೆ ಅಂಗಡಿಗೆ ನುಗ್ಗಿದ್ದ ಐವರು ಚಾಕುವಿನಿಂದ ಹಲ್ಲೆ ಮಾಡಿ ಚಿನ್ನದ ಸರ, 1 ಕೆಜಿ ಬೆಳ್ಳಿ ಕದ್ದು ಪರಾರಿಯಾಗಿದ್ದರು. ಸಿಟಿ ಮಾರ್ಕೆಟ್ ಪೊಲೀಸರು ಸದ್ಯ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3.77 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಫರ್ಹಾನ್, ನದೀಮ್ ಪಾಷ, ನಯಾಜ್ ಪಾಷ, ಸಲ್ಮಾನ್ ಪಾಷ ಬಂಧಿತ ಆರೋಪಿಗಳು.

ಸುಲಿಗೆ ಮಾಡಿದ್ದ ಆರೋಪಿ ಬಂಧನ: ಜ್ಞಾನಭಾರತಿ ಠಾಣೆ ಪೊಲೀಸರು ಬಾಡಿಗೆ ಮನೆ ಕೇಳುವ ನೆಪದಲ್ಲಿ ಸುಲಿಗೆ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕಿರಣ್ ಕುಮಾರ್ ಬಂಧಿತ ಆರೋಪಿ. ಆರೋಪಿ ಫೆಬ್ರವರಿ 7 ರಂದು ಸರ್.ಎಂ.ವಿ ಲೇಔಟ್​ನ ಮನೆಯೊಂದಕ್ಕೆ ನುಗ್ಗಿದ್ದರು.  ಈ ವೇಳೆ ಮನೆ ಮಾಲೀಕೆಯನ್ನ ಕೆಳಗೆ ಬೀಳಿಸಿ ಮಾರಕಾಸ್ತ್ರ ತೋರಿಸಿದ್ದ. ನಂತರ ಮಹಿಳೆ ಮೈಮೇಲಿದ್ದ 9 ಲಕ್ಷ ಮೌಲ್ಯದ 222 ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದ.

ಇದನ್ನೂ ಓದಿ

Chetan kumar: ‘ಆ ದಿನಗಳು’ ಖ್ಯಾತಿಯ ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

ಕಟ್ಟಡಕ್ಕಾಗಿ 2 ವಿಶ್ವವಿದ್ಯಾಲಯದ ಮಧ್ಯೆ ತಾರಕಕ್ಕೇರಿದ ಫೈಟ್; ವಿವಿ ವಿಭಜನೆಯಾಗಿ 3 ವರ್ಷವಾದ್ರೂ ಮುಸುಕಿನ ಗುದ್ದಾಟ

Published On - 10:58 am, Wed, 23 February 22