AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಿ ಕಾಯಕ ಪ್ರಶಸ್ತಿ ಪ್ರದಾನ ದಿನವೇ ಕೆ ಶ್ರೀನಿವಾಸ ಮನೆ ಮೇಲೆ ಎಸಿಬಿ ದಾಳಿ; ಅಂಬರೀಶ್ ಅಭಿಮಾನಿಗಳ ಸಂಘ ಹೇಳಿದ್ದೇನು?

ಅಂಬಿ ಕಾಯಕ ಪ್ರಶಸ್ತಿ ಸ್ವೀಕಾರ ಮಾಡುವ ದಿನವೇ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಹೇಮಾವತಿ ಎಡದಂಡೆ ನಾಲೆ ಯೋಜನೆಯ ಕಾರ್ಯರ್ನಿಹಕ ಇಂಜಿನಿಯರ್ ಆಗಿರುವ ಕೆ ಶ್ರೀನಿವಾಸ ರವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.

ಅಂಬಿ ಕಾಯಕ ಪ್ರಶಸ್ತಿ ಪ್ರದಾನ ದಿನವೇ ಕೆ ಶ್ರೀನಿವಾಸ ಮನೆ ಮೇಲೆ ಎಸಿಬಿ ದಾಳಿ; ಅಂಬರೀಶ್ ಅಭಿಮಾನಿಗಳ ಸಂಘ ಹೇಳಿದ್ದೇನು?
ಎಸಿಬಿ ದಾಳಿ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Nov 25, 2021 | 11:31 AM

Share

ಮಂಡ್ಯ: ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ನಿನ್ನೆ (ನ.24) ಒಂದೇ ದಿನ ಸುಮಾರು 15 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೀರೆ, ನೀರಿನ ಪೈಪ್​ಗಳಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಭ್ರಷ್ಟ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. 15 ಸರ್ಕಾರಿ ಅಧಿಕಾರಿಗಳ ಪೈಕಿ ಕೆಆರ್ ಪೇಟೆಯಲ್ಲಿ ಇಂಜಿನಿಯರ್ ಆಗಿರುವ ಕೆ ಶ್ರೀನಿವಾಸ ಕೂಡ ಒಬ್ಬರು. ನಿನ್ನೆ ಇಂಜಿನಿಯರ್ ಕೆ ಶ್ರೀನಿವಾಸ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದೇ ದಿನವೇ ಕೆ ಶ್ರೀನಿವಾಸ ಅವರು ಅಂಬಿ ಕಾಯಕ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ  ಸ್ಪಷ್ಟತೆ ನೀಡಿದೆ. 

ಅಂಬಿ ಕಾಯಕ ಪ್ರಶಸ್ತಿ ಸ್ವೀಕಾರ ಮಾಡುವ ದಿನವೇ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಹೇಮಾವತಿ ಎಡದಂಡೆ ನಾಲೆ ಯೋಜನೆಯ ಕಾರ್ಯರ್ನಿಹಕ ಇಂಜಿನಿಯರ್ ಆಗಿರುವ ಕೆ ಶ್ರೀನಿವಾಸ ರವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಮಂಡ್ಯದಲ್ಲಿ ನಿನ್ನೆ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ರೈತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೈರಾಗಿದ್ದರು ಎಂದು ಹೇಳಲಾಗುತಿತ್ತು. ಆದರೆ ಈ ಬಗ್ಗೆ ಸ್ಪಷ್ಟತೆ ನೀಡಿರುವ ಸಂಘ, ನಿನ್ನೆ ನಡೆದ ಅಂಬಿ ಕಾಯಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಂಜಿಯರ್ ಶ್ರೀನಿವಾಸ ರವರಿಗೆ ಸನ್ಮಾನ‌ ಮಾಡಿಲ್ಲ. ರೈಲ್ವೆ ನೌಕರರಾದ ಶ್ರೀನಿವಾಸ್ ರವರಿಗೆ ಸೇವಾ ಕ್ಷೇತ್ರದಲ್ಲಿ ಅಂಬಿ ಕಾಯಕ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದೆ.

ವಿವಿಧ ಕ್ಷೇತ್ರಗಳ ಹತ್ತು ಜನರಿಗೆ ಅಂಬಿ ಕಾಯಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.

8ರಿಂದ 10 ಎಸಿಬಿ ಅಧಿಕಾರಿಗಳು ಕೆ ಶ್ರೀನಿವಾಸಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ನಂಜನಗೂಡಿನಲ್ಲಿರುವ ತೋಟದ ಮನೆ ಮೇಲೂ ದಾಳಿ ನಡೆಸಿದ್ದಾರೆ ಎಂಬ ಮಾಹಿರಿ ತಿಳಿದುಬಂದಿದೆ.

ಅಪಾರ ಆಸ್ತಿ ಪತ್ತೆ ಕೆಆರ್ ಪೇಟೆ ಹೇಮಾವತಿ ಜಲಾಶಯದ ಇಂಜಿನಿಯರ್ ಶ್ರೀನಿವಾಸ ಮನೆಯಲ್ಲಿ ಎಸಿಬಿ ಕಾರ್ಯಾಚರಣೆಯಲ್ಲಿ ಅಪಾರ ಆಸ್ತಿ ಪತ್ತೆಯಾಗಿದೆ. ಬರೋಬ್ಬರಿ‌ 3.5 ಕೋಟಿಯ ಆಸ್ತಿ ಪತ್ತೆಯಾಗಿದೆ. ಒಂದು‌ ಫಾರಂ ಹೌಸ್, ಎಂಟು‌ ಫ್ಲ್ಯಾಟ್‌ನ ಒಂದು ಅಪಾರ್ಟ್‌ಮೆಂಟ್, 2.5 ಎಕರೆ‌ ಹಾಗೂ 1.5 ಎಕರೆ ಜಮೀನು ಪತ್ತೆಯಾಗಿದೆ. ಸುಮಾರ 1.5 ಕೆಜಿ ಚಿನ್ನ 5.5 ಕೆಜಿ ಬೆಳ್ಳಿ ಪದಾರ್ಥಗಳು ದಾಳಿ ವೇಳೆ ಸಿಕ್ಕಿವೆ. 32 ಲಕ್ಷ ರೂಪಾಯಿ ನಗದು ಸೇರಿ ಹಲವು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಂಜಿನಿಯರ್ ಕೆ ಶ್ರೀನಿವಾಸ

ಇದನ್ನೂ ಓದಿ

ಮೇಘಾಲಯದಲ್ಲಿ ಕಾಂಗ್ರೆಸ್​​ಗೆ ಬಿಗ್​ ಶಾಕ್​; ಮಾಜಿ ಸಿಎಂ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್​​ಗೆ

ರಮೇಶ್ ಜಾರಕಿಹೊಳಿ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

Published On - 8:55 am, Thu, 25 November 21

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ