AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ಹವಾ ಕ್ರಿಯೇಟ್​ ಮಾಡಲು ಯುವಕನ ಮೇಲೆ ಮಚ್ಚು ಬೀಸಿದ ಪುಡಿ ರೌಡಿಗಳು; ಕೇಸ್​ ಬುಕ್

ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಪುಡಿ ರೌಡಿಗಳ ಅಟ್ಟಹಾಸ‌ ಜೋರಾಗಿದೆ. ತಮ್ಮ ಹವಾ‌ ಸೃಷ್ಟಿಸಿಕೊಳ್ಳಲು ಹಾಡು ಹಗಲಲ್ಲೇ ನಡು ರಸ್ತೆಯಲ್ಲಿ ನಿಂತಿದ್ದ ಯುವಕನ ಮೇಲೆ ಲಾಂಗ್​ನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.

ಮಂಡ್ಯದಲ್ಲಿ ಹವಾ ಕ್ರಿಯೇಟ್​ ಮಾಡಲು ಯುವಕನ ಮೇಲೆ ಮಚ್ಚು ಬೀಸಿದ ಪುಡಿ ರೌಡಿಗಳು; ಕೇಸ್​ ಬುಕ್
ಹಲ್ಲೆಗೊಳಗಾದ ಯುವಕ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2023 | 11:41 AM

ಮಂಡ್ಯ, ಆ.4: ತಮ್ಮ ಹವಾ‌ ಸೃಷ್ಟಿಸಿಕೊಳ್ಳಲು ಹಾಡು ಹಗಲಲ್ಲೇ ನಡು ರಸ್ತೆಯಲ್ಲಿ ನಿಂತಿದ್ದ ಯುವಕನ ಮೇಲೆ ಲಾಂಗ್​ನಿಂದ ಹಲ್ಲೆ ಮಾಡಿದ ಘಟನೆ ಮಂಡ್ಯ(Mandya) ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಮೂಲಕ ಪುಡಿ ರೌಡಿಗಳ ಅಟ್ಟಹಾಸ‌ ಜೋರಾಗಿದೆ. ಶಾರಂತ್ (29) ಪುಡಿ ರೌಡಿಗಳ ಅಟ್ಟಹಾಸದಲ್ಲಿ ಲಾಂಗ್ ಏಟು ತಿಂದ ಯುವಕ. ಹೊಳಲು ಗ್ರಾಮದ ಮಾದ ಅಲಿಯಾಸ್ ಮಾದಪ್ಪ ಆಂಡ್ ಗ್ಯಾಂಗ್​ನಿಂದ ಈ ಕೃತ್ಯ ಎಸಗಲಾಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಹಲ್ಲೆ ಮಾಡಿದ ಮಾದಪ್ಪ, ಚಿಂಟು, ತರುಣ್, ಸುಶಾಂತ್, ಚಂದನ್ ಅವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

ಬೈಕ್​ನಲ್ಲಿ ಬಂದ ಐವರಿಂದ ಹಲ್ಲೆ

ಇನ್ನು ಬರ್ತಡೇ‌ ಹಿನ್ನಲೆ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟೂರಿಗೆ ಬಂದಿದ್ದ ಶಾರಂತ್. ಗ್ರಾಮದ ಸರ್ಕಲ್ ಒಂದರಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತಿದ್ದ. ಈ ವೇಳೆ ಎರಡು ಬೈಕ್​ನಲ್ಲಿ ಬಂದ ಐವರು ಕ್ಯಾತೆ ತೆಗೆದಿದ್ದಾರೆ. ಏಕಾಏಕಿ ಶಾರಂತ್ ಮೇಲೆ ಮಾದ ಅಂಡ್ ಗ್ಯಾಂಗ್ ಲಾಂಗು, ಡ್ರ್ಯಾಗರ್​ನಿಂದ ಹಲ್ಲೆ ನಡೆಸಿದ್ದಾರೆ. ಲಾಂಗ್ ಬೀಸಿದ್ದರಿಂದ ಯುವಕನಿಗೆ ಕಣ್ಣಿನ ಉಬ್ಬು, ಬಾಯಿಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಹಾಡಹಗಲೇ ಕಾಲೇಜು ವಿದ್ಯಾರ್ಥಿ ಮೇಲೆ ಲಾಂಗ್​ನಿಂದ ಹಲ್ಲೆ! ಘಟನೆಗೆ ಕಾರಣವಾಯ್ತಾ ಹುಡುಗಿ ವಿಚಾರ?

ಗಾಯಾಳು ಶಾರಂತ್​ಗೆ 16 ಸ್ಟಿಚ್

ಇನ್ನು ಲಾಂಗ್​ ದಾಳಿ ತೀವ್ರ ಗಾಯಗೊಂಡ ಗಾಯಾಳು ಶಾರಂತ್​ಗೆ ಮಂಡ್ಯದ ಮಿಮ್ಸ್ ವೈದ್ಯರು 16 ಸ್ಟಿಚ್ ಹಾಕಿದ್ದಾರೆ. ಇನ್ನು ಅಷ್ಟೇ ಅಲ್ಲ, ಈ‌ ಹಿಂದೆ ಮಾದಪ್ಪನಿಗೆ ಬಾಸ್ ಎನ್ನುವಂತೆ ಮಾದನ ಸ್ನೇಹಿತರು ಅವಾಜ್ ಹಾಕಿದ್ದರಂತೆ. ಆ ವೇಳೆ ಅವನ್ಯಾವನೋ ಬಾಸ್ ಎಂದು ಶಾರಂತ್ ಟಾಂಗ್ ಕೊಟ್ಟಿದ್ದ. ಅಂದು ಗಲಾಟೆ ನಡೆದು ತಣ್ಣಗಾಗಿತ್ತು. ಅದೇ ದ್ವೇಷ ಇಟ್ಟುಕೊಂಡು ಬರ್ತ್ ಡೇ ದಿನವೇ ಶಾರಂತ್ ಮೇಲೆ ಕ್ಯಾತೆ ತೆಗೆದು ಮಾದಪ್ಪ ಅಂಡ್ ಟೀಂ‌ ಲಾಂಗ್​ನಿಂದ ಗಂಭೀರ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಕಿರಾತಕರು ಎಸ್ಕೇಪ್ ಆಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ