ಅಯ್ಯೋ ವಿಧಿಯೇ…ಬೈಕ್ ಮೇಲೆ ಬಿದ್ದ ಮರ, ಮಗನ ಬರ್ತ್​ಡೇಗೆ ಕೇಕ್ ತರಲು ಹೋದ ತಂದೆ ದುರಂತ ಸಾವು

ಮಗನ ಬರ್ತ್​ಡೇಗೆ ಕೇಕ್ ತರಲು ಹೋದ ತಂದೆ ದುರಂತ ಅಂತ್ಯಕಂಡಿದ್ದಾರೆ. ಪತ್ನಿ ಹಾಗೂ ಪುತ್ರನ ಕಣ್ಣೆದುರೇ ಅಸುನೀಗಿದ್ದಾರೆ.

ಅಯ್ಯೋ ವಿಧಿಯೇ...ಬೈಕ್ ಮೇಲೆ ಬಿದ್ದ ಮರ, ಮಗನ ಬರ್ತ್​ಡೇಗೆ ಕೇಕ್ ತರಲು ಹೋದ ತಂದೆ ದುರಂತ ಸಾವು
Updated By: ರಮೇಶ್ ಬಿ. ಜವಳಗೇರಾ

Updated on: Feb 10, 2023 | 9:24 PM

ಮಂಡ್ಯ: ಈ ಸಾವು ಅನ್ನುವುದು ಯಾರ ಜೀವನದಲ್ಲಿ ಯಾವಾಗ ಹೇಗೆ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಅಲ್ಲದೇ  ಸಾವು ಹೇಗೆ ಎಲ್ಲಿ ಬರುತ್ತೆ ಅಂತೆಲ್ಲಾ ಊಹೆ ಮಾಡೋಕು ಆಗಲ್ಲ. ನಿಜ…ವ್ಯಕ್ತಿಯೋರ್ವ ತನ್ನ ಮಗನ ಬರ್ತ್​ ಡೇ ಕೇಕ್​ ತರಲು ಹೋಗುತ್ತಿದ್ದಾಗ ರಸ್ತೆ ಪಕ್ಕದ ಮರ (Tree) ತಲೆ ಮೇಲೆ ಬಿದ್ದು ದುರಂತ ಅಂತ್ಯಕಂಡಿದ್ದಾರೆ. ಹೌದು..ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಮಾಡಲು ಕೇಕ್​ ತರಲು ಹೋದ ವ್ಯಕ್ತಿ ತಲೆ ಮೇಲೆ ಮರ ಬಿದ್ದು ದುರಂತ ಸಾವನ್ನಪ್ಪಿದ್ದಾರೆ. ಈ ಘಟನೆ ಇಂದು(ಫೆಬ್ರವರಿ 10) ಮಂಡ್ಯ(Mandya) ನಗರದ ತಾವರಗೆರೆಯ ಚಲುವಯ್ಯ ಪಾರ್ಕ್ ಬಳಿ ನಡೆದಿದೆ. ಉದಯ್ ಕುಮಾರ್ ಮೃತ ದುರ್ವೈವಿ.

ಇದನ್ನೂ ಓದಿ: ಲಾರಿ ಡಿಕ್ಕಿ, ವಿವಾಹ ಆಮಂತ್ರಣ ಕೊಡಲು ತೆರಳಿದ್ದ ಮದುಮಗ ಸ್ಥಳದಲ್ಲೇ ಸಾವು: ಮದುವೆ ಮನೆಯಲ್ಲಿ ನೀರವಮೌನ

ಇಂದು ಪುತ್ರ ದಿಕ್ಷಿತ್ ನ 7ನೇ ವರ್ಷದ ಹುಟ್ಟು ಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಉದಯ್ ಕುಮಾರ್, ಬೈಕ್​ನಲ್ಲಿ ಪತ್ನಿ ಧನಲಕ್ಷ್ಮೀ ಜೊತೆ ಕೇಕ್​ ತರಲು ಹೋಗಿದ್ದಾರೆ. ಆದ್ರೆ, ಮಾರ್ಗ ಮಧ್ಯ ಚಲುವಯ್ಯ ಪಾರ್ಕ್ ಬಳಿ ಬರುತ್ತಿದ್ದಂತೆ ಮರ ಉದಯ್ ಕುಮಾರ್ ಬೈಕ್​ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಘಟನೆಯಲ್ಲಿ ಪೌರ ಕಾರ್ಮಿಕನಾಗಿದ್ದ ಉದಯ್​ ಕುಮಾರ್ ಮೃತಪಟ್ಟಿದ್ದಾರೆ. ಇನ್ನು ಪತ್ನಿ ಧನಲಕ್ಷ್ಮೀ ಹಾಗೂ ಪುತ್ರ ದಿಕ್ಷಿತ್​ಗೆ ಗಾಯಗಳಾಗಿವೆ.

ಮರ ನೇರವಾಗಿ ತಲೆ ಮೇಲೆ ಬಿದ್ದಿದ್ದರಿಂದ ಉದಯ್ ಕುಮಾರ್ ಸ್ಥಳದಲ್ಲೇ ಅಸುನೀಗಿದ್ದಾರೆ. ಬೈಕ್ ಸವಾರನ ಮೇಲೆ ಮರ ಉರಳಿ ಬೀಳುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರ ಆರೋಪಿಸಿದ್ದು, ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ.

Published On - 9:18 pm, Fri, 10 February 23