ಮಂಡ್ಯ: ಮಾಸ್ಕ್, ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರ ಜತೆ ಕಿರಿಕ್ ಮಾಡಿಕೊಂಡು ಕರ್ತವ್ಯನಿರತ ಎಎಸ್‌ಐ ಮೇಲೆ ಹಲ್ಲೆಗೆ ವ್ಯಕ್ತಿ ಮುಂದಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ. ಪಾಂಡವಪುರ ಠಾಣೆ ASI ಮಹೇಶ್ ಪ್ರಭು ಮೇಲೆ ಶಾಂತಿನಗರ ನಿವಾಸಿ ನಾಗೇಶ್ ಹಲ್ಲೆಗೆ ಯತ್ನಿಸಿದ್ದಾರೆ. ಮಾಸ್ಕ್ ಧರಿಸದ್ದಕ್ಕೆ ದಂಡ ಪಾವತಿಸಲು ಹೇಳಿದ ಹಿನ್ನೆಲೆಯಲ್ಲಿ ಎಎಸ್‌ಐ ಕಾಲರ್ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಪಾಂಡವಪುರ ಪಟ್ಟಣ ಠಾಣೆಯಲ್ಲಿ ನಾಗೇಶ್ ವಿರುದ್ಧ ಕೇಸ್ ದಾಖಲಾಗಿದೆ.
ಮಂಡ್ಯದಲ್ಲಿ ದಿನೇ ದಿನೇ ಪುಡಿ ರೌಡಿಗಳ ಹಾವಳಿ ಹೆಚ್ಚಾಗ್ತಿದೆ. ಕರ್ತವ್ಯನಿರತ ಪೊಲೀಸರ ಮೇಲೆಯೇ ಪುಂಡರು ಹಲ್ಲೆಗೆ ಮುಂದಾಗ್ತಿದ್ದಾರೆ. ಮಾಸ್ಕ್, ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ASI ಮಹೇಶ್ ಪ್ರಭು ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಾಗೇಶ್ ಹಲ್ಲೆಗೆ ಯತ್ನಿಸಿದ್ದಾನೆ. ಮಾಸ್ಕ್ ಧರಿಸದ ಜನರಿಂದ ದಂಡ ವಸೂಲಿ ಮಾಡ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಪೊಲೀಸರು ಪಟ್ಟಣದ ರಾಜಾ ಮೆಡಿಕಲ್ ಬಳಿ ಮಾಸ್ಕ್ ಕಾರ್ಯಚರಣೆ ನಡೆಸ್ತಿದ್ದರು. ಈ ವೇಳೆ ನಾಗೇಶ್ ಎಂಬಾತ ಮಾಸ್ಕ್ ಧರಿಸದೆ ಬಂದಿದ್ದರಿಂದ ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದ್ದರು. ಆಗ ದಂಡ ವಿಧಿಸಲು ಮುಂದಾದ ASI ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲರ್ ಹಿಡಿದು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾನೆ. ಸದ್ಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಂಡವಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧಿಕಾರಿ ಮೇಲೆಯೇ ಹಲ್ಲೆಗೆ ಮುಂದಾದ ರೈತ ಸಂಘದ ತಾಲೂಕು ಅಧ್ಯಕ್ಷ
ಇನ್ನು ಮತ್ತೊಂದು ಕಡೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆಯೇ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಹಲ್ಲೆಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಫಜಲಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸುಲ್ಪಿ ಮೇಲೆ ಅಫಜಲಪುರ ರೈತ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ್ ಜಮಾದಾರ್ ಹಲ್ಲೆಗೆ ಯತ್ನಿಸಿದ್ದಾರೆ. ಮಹಾಂತೇಶ್ ಜಮಾದಾರ್, ಪಿಡಿಓ ವಿರುದ್ಧ ಕೆಲ ತಿಂಗಳ ಹಿಂದೆ ದೂರು ನೀಡಿದ್ದರು. ಈ ವಿಚಾರವಾಗಿ ರಮೇಶ್ ಸುಲ್ಪಿ ಮತ್ತು ಮಹಾಂತೇಶ್ ಜಮಾದಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಮಹಾಂತೇಂಶ, ತಾನು ಕುಳಿತಿದ್ದ ಕುರ್ಚಿ ಎತ್ತಿ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ದೂರು ನೀಡಲು ಅಧಿಕಾರಿ ರಮೇಶ್ ಸುಲ್ಪಿ ಮುಂದಾಗಿದ್ದು ರೈತ ಸಂಘದ ಅಧ್ಯಕ್ಷ ಮಹಾಂತೇಶ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ವಿರುದ್ಧ ರವೀನಾ ಟಂಡನ್ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್ 2’ ನಟಿ
Published On - 8:24 am, Sun, 6 February 22