ಮಂಡ್ಯ, ಜನವರಿ 11: ಕೆಆರ್ಎಸ್ ಡ್ಯಾಂ (KRS Dam) ಸ್ಥಿತಿಗತಿ ಬಗ್ಗೆ ಅಧ್ಯಯನಕ್ಕೆ ಸಂಸದೀಯ ಸಮಿತಿ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಲಾಗಿದೆ. ಕೇಂದ್ರ ಜಲಸಂಪನ್ಮೂಲ ಸ್ಥಾಯಿ ಸಮಿತಿ ಅಧ್ಯಕ್ಷ, ಸಂಸದ ಪರ್ಬಾತ್ ಭಾಯ್ ಸವಾಬಾಯಿ ಪಟೇಲ್ ನೇತೃತ್ವದ ತಂಡ ಭೇಟಿ ನೀಡಿದ್ದು, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕೆಆರ್ಎಸ್ ಡ್ಯಾಂ ವೀಕ್ಷಿಸಿದ್ದಾರೆ.
ಸಂಸದೀಯ ಸಮಿತಿಯನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸ್ವಾಗತಿಸಿದ್ದಾರೆ. ಸಂಸದೀಯ ಸಮಿತಿ ಭೇಟಿ ವೇಳೆ ಸ್ಥಳೀಯ ಸಂಸದೆ ಸುಮಲತಾ ಗೈರಾಗಿದ್ದರು. ಜಲಸಂಪನ್ಮೂಲ ಸ್ಥಾಯಿ ಸಮಿತಿಯ 17 ಸದಸ್ಯರ ಪೈಕಿ 14 ಜನ ಭೇಟಿ ನೀಡಿದ್ದರು.
ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಡ್ಯಾಂಗೆ ತೊಂದರೆಯಾಗುತ್ತಿದೆ ಎಂಬ ಕೂಗು ಈ ಹಿಂದೆ ಬಲವಾಗಿ ಕೇಳಿಬಂದ ಬೆನ್ನಲ್ಲೇ ಅಣೆಕಟ್ಟಿನ ಸಮೀಪ ಕಲ್ಲುಗಳು ಕುಸಿದಿದ್ದು, ಜಲಾಶಯದಿಂದ ಮೇಲ್ಭಾಗಕ್ಕೆ ತೆರಳಲು ರಸ್ತೆಯಂತಿರುವ ಪ್ರದೇಶದಲ್ಲಿ ಘಟನೆ ಸಂಭವಿಸಿತ್ತು. ಡ್ಯಾಂ ನಿರ್ಮಾಣದ ನಂತರ ಕಲ್ಲುಗಳು ಮೊದಲ ಬಾರಿಗೆ ಕುಸಿದಿತ್ತು.
ಇದನ್ನೂ ಓದಿ: KRS Dam: ಕೆಆರ್ಎಸ್ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ; ಆತಂಕ ಬೇಡ ಎಂದ ಅಧಿಕಾರಿಗಳು
ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದರು. ಆದರೆ, ಗಾರ್ಡನ್ಗೆ ಹೋಗುವ ರಸ್ತೆಯಲ್ಲಿ ಕುಸಿದಿರುವ ಕಲ್ಲುಗಳಿಂದ ಡ್ಯಾಂ ಸುರಕ್ಷತೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಆತಂಕ ಅಗತ್ಯವಿಲ್ಲ ಎಂದು ಹೇಳಿದ್ದರು.
ಕೆಆರ್ಎಸ್ ಜಲಾಶಯ ರಾಜ್ಯದ ಜನರ ಜೀವನಾಡಿ. ಮಂಡ್ಯ, ಮೈಸೂರು, ಬೆಂಗಳೂರು ಸೇರಿ ಹಲವು ನಗರಗಳಿಗೆ ಕುಡಿಯುವ ನೀರನ್ನ ಓದಗಿಸುವ ಜಲಾಶಯ. ಆದರೆ ಈ ಬಾರಿ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರನ್ನ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಮಾಡಿತ್ತು.
ಆದೇಶಕ್ಕೆ ಮಣಿದು ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಸಹಾ ಹರಿಸುತ್ತಿದೆ. ಇದರಿಂದ ಜಲಾಶಯ ಸಂಪೂರ್ಣವಾಗಿ ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಮುಖ ನಗರಗಳಿಗೆ ಜಲಕ್ಷಾಮ ಎದುರಾಗಲಿದೆ. ಹಾಗಾದರೆ ಜಲಾಶಯದ ನೀರಿನ ಮಟ್ಟ ಎಷ್ಟು, ಕುಡಿಯಲು, ವ್ಯವಸಾಯಕ್ಕೆ ಎಷ್ಟು ನೀರು ಬೇಕು. ಇದರಿಂದ ಕೆಲ ಜಿಲ್ಲೆಗಳಿಗೂ ತೊಂದರೆ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.