ಮಂಡ್ಯ: ಸಿದ್ದರಾಮಯ್ಯಗೆ RSS ಕಾರ್ಯಕರ್ತರಿಂದ ಚಡ್ಡಿ ಪಾರ್ಸಲ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jun 06, 2022 | 3:47 PM

ಚಡ್ಡಿ ಸುಟ್ಟು ಹಾಕುತ್ತೇವೆಂದು ಹೇಳಿಕೆ ಹಿನ್ನೆಲೆ ಜಿಲ್ಲೆಯ K.R.ಪೇಟೆಯ RSS ಕಾರ್ಯಕರ್ತರಿಂದ ಸಿದ್ದರಾಮಯ್ಯಗೆ ಚಡ್ಡಿ ಪಾರ್ಸಲ್​ ಮಾಡಲಾಗಿದೆ.

ಮಂಡ್ಯ: ಸಿದ್ದರಾಮಯ್ಯಗೆ RSS ಕಾರ್ಯಕರ್ತರಿಂದ ಚಡ್ಡಿ ಪಾರ್ಸಲ್​
RSS activist
Follow us on

ಮಂಡ್ಯ: ಆರ್​ಎಸ್​ಎಸ್ (RSS)​ ಚಡ್ಡಿ ಸುಡುವ ಅಭಿಯಾನಕ್ಕೆ ಕಾಂಗ್ರೆಸ್​ ಕರೆ ಹಿನ್ನೆಲೆ, ಜಿಲ್ಲೆಯ ಕೆ.ಆರ್ ಪೇಟೆ ಆರ್​ಎಸ್​ಎಸ್​ ಕಾರ್ಯಕರ್ತರು ಮನೆಮನೆಗೆ ತೆರಳಿ ಚಡ್ಡಿ ಸಂಗ್ರಹಿಸಿ, ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಚಡ್ಡಿ ಪಾರ್ಸಲ್ ಮಾಡಲಾಗಿದೆ. ಚಡ್ಡಿ ಸುಟ್ಟು ಹಾಕುತ್ತೇವೆಂದು ಹೇಳಿಕೆ ಕೊಟ್ಟಿದ್ದ ಸಿದ್ದರಾಮಯ್ಯ, ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಆರ್​ಎಸ್​​ಎಸ್​ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದು, ಜೀವನ ಪೂರ್ತಿ ಕಾಲ ಕಳೆದ್ರು ನಮ್ಮ ಚಡ್ಡಿ ಸುಟ್ಟಾಕಲು ಆಗೊಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಪ್ರಕರಣ; ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣೆ

ಆರ್​​ಎಸ್​​ಎಸ್​ ಬಗ್ಗೆ ನಿಮಗೆ ಏನೂ, ಅದರ ಮೂಲ ಏನೂ ಅಂತ ಗೊತ್ತಿಲ್ಲ. ನೀವು ಒಂದು ಚಡ್ಡಿ ಸುಟ್ಟರೆ ಸಾವಿರಾರು ಚಡ್ಡಿಗಳನ್ನು ನಿಮಗೆ ಕಳುಹಿಸುತ್ತೇವೆ. ಚಡ್ಡಿ ಸುಡುವುದಕ್ಕೂ ಮುಂಚೆ ಅದರ ಮಹತ್ವ ಅರ್ಥ ಮಾಡಿಕೊಳ್ಳಿ. ಮಹಾರಾಷ್ಟ್ರದಿಂದ ಹಿಡಿದು ಕರ್ನಾಟಕದ ಪ್ರತಿ ಹಳ್ಳಿಯಲ್ಲೂ ಆರ್​ಎಸ್​ಎಸ್​​​​​ ಇದೆ. ಸ್ವಲ್ಪ ಗೌರವದಿಂದ ಮಾತನಾಡುವುದನ್ನ ಕಲಿತುಕೊಳ್ಳಿ. ಈ ದೇಶದಲ್ಲಿ ಕೊಟ್ಯಂತರ ಜನ ಆರ್​ಎಸ್​​ಎಸ್​​ ಸ್ವಯಂಸೇವಕರಿದ್ದಾರೆ. ಸಂಘದ ಬಗ್ಗೆ ತಿಳಿಯದೆ, ಅದರ ಸಿದ್ಧಾಂತದ ಬಗ್ಗೆ ತಿಳಿಯದೆ ಕೇವಲ ರಾಜಕೀಯಕ್ಕಾಗಿ ಸಂಘವನ್ನ ಟೀಕೆ ಮಾಡುವುದು ಖಂಡನಿಯ ಎಂದು ಮಂಡ್ಯ ಕೆ. ಆರ್. ಪೇಟೆ ಆರ್​ಎಸ್​ಎಸ್​ ಕಾರ್ಯಕರ್ತರು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯಗೆ  ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ

ಬೆಂಗಳೂರು: ಆರ್​ಎಸ್​​ಎಸ್​  ಚಡ್ಡಿ ಸುಡುವ ಅಭಿಯಾನದ ಬಗ್ಗೆ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ  ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಆರ್​ಎಸ್​ಎಸ್​ ತಂಟೆಗೆ ಬಂದರೆ ಹುಷಾರ್ ಎಂದಿರುವ ಅಶೋಕ್, ಈ ರೀತಿ ಸುಡೋರೆಲ್ಲ ಮನೆ ಸುಟ್ಟಿಕೊಂಡಿದ್ದಾರೆ. ಹನುಮಂತನ ಬಾಲಕ್ಕೆ ಬೆಂಕಿ ಬಿದ್ದು ಲಂಕೆಯೇ ಸುಟ್ಟೋಯ್ತು. ಆರ್​ಎಸ್​ಎಸ್​ ಶಕ್ತಿ ಏನು ಎಂದು ಇಡೀ ಪ್ರಪಂಚಕ್ಕೆ ಗೊತ್ತು. ಪ್ಯಾಂಟು, ಚಡ್ಡಿ ಸುಡುವುದನ್ನೆಲ್ಲಾ ಬಿಟ್ಟು ಬಿಡಿ. ಆರ್​ಎಸ್​ಎಸ್​​ ತಂಟೆಗೆ ಬಂದರೆ ನೀವು ಸುಟ್ಟು ಹೋಗುತ್ತೀರಿ ಎಂದರು.

ನೀವೇ ಬಾದಾಮಿ ಕ್ಷೇತ್ರದಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ. ಈಗ ಆರ್​ಎಸ್​ಎಸ್​​ ಬಗ್ಗೆ ಟೀಕಿಸಿದ್ರೆ ಚುನಾವಣೆಯಲ್ಲಿ ಸೋಲುತ್ತೀರಿ. ಕೇವಲ ಸೋನಿಯಾ ಗಾಂಧಿಯನ್ನ ಮೆಚ್ಚಿಸುವುದಕ್ಕೆ ಹೋಗಿ, ನೀವೇ ಚುನಾವಣೆಯಲ್ಲಿ ಸುಟ್ಟು ಹೋಗುತ್ತೀರಿ ಹುಷಾರ್ ಎಂದು ಸಿದ್ದರಾಮಯ್ಯಗೆ ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:17 pm, Mon, 6 June 22