ವೈದ್ಯರ ಯಡವಟ್ಟಿನಿಂದ ವಿಕಲಚೇತನ ಯುವತಿ ಸಾವು ಆರೋಪ; ಆಸ್ಪತ್ರೆ ಮುಂದೆ ಪೋಷಕರ ಕಣ್ಣೀರು, ಆರೋಪ ತಳ್ಳಿ ಹಾಕಿದ ವೈದ್ಯರು
ಮಿಸ್ ಮ್ಯಾಚ್ ರಕ್ತ ಹಾಕಿ ಮಗಳನ್ನು ವೈದ್ಯರು ಕೊಂದಿದ್ದಾರೆ ಅಂತ ಪೋಷಕರು ಗದಗನ ಬೆಟಗೇರಿಯ ಖಾಸಗಿ ಆಸ್ಪತ್ರೆ ಆವರಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಆ ಯುವತಿ ವಿಕಲಚೇತನ ಆದ್ರೂ ಕೂಡಾ ಪೋಷಕರು ಅವಳನ್ನು ಚನ್ನಾಗಿ ನೋಡಿಕೊಂಡಿದ್ರು. 21 ವರ್ಷಗಳ ಕಾಲ ಪೋಷಣೆ ಮಾಡಿದ್ರು.
ಗದಗ: ವೈದ್ಯರ ಯಡವಟ್ಟಿನಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂಬ ಆರೋಪ ಗದಗದ ಬೆಟಗೇರಿಯ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿ ಬಂದಿದೆ. ಮೈಮುನಾ ತಬಸುಮ್ ಎಂಬ 21 ವರ್ಷದ ಯುವತಿ ವೈದ್ಯರ ಯಡವಟ್ಟಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಆ ಯುವತಿಯನ್ನು ಕಳೆದ 21 ವರ್ಷಗಳ ಕಾಲ ಪೋಷಕರು ಸಾಕಿ ಸಲುಗಿದ್ರು. ಕೈಲಾದಷ್ಟು ವಿಕಲಚೇತನ ಮಗಳನ್ನು ಚನ್ನಾಗಿಯೇ ನೋಡಿಕೊಂಡಿದ್ರು. ಆದ್ರೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ಈ ವೇಳೆ ರಕ್ತ ಹಾಕುವಂತೆ ವೈದ್ಯರು ಹೇಳಿದ್ರು. ಪೋಷಕರು ಕೂಡಾ ರಕ್ತ ತಂದು ವೈದ್ಯರಿಗೆ ನೀಡಿದ್ದಾರೆ. ಆದ್ರೆ ಈ ವೇಳೆ ವೈದ್ಯರು ಮಿಸ್ ಮ್ಯಾಚ್ ರಕ್ತ ಹಾಕಿದ್ದು, ರಕ್ತ ಹಾಕಿದ ಮೇಲೆ ಯುವತಿ ಸಾವನ್ನಪ್ಪಿದ್ದಾಳೆ. ವೈದ್ಯರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಅಂತ ಪೋಷಕರು ಆರೋಪ ಮಾಡಿದ್ದಾರೆ. ಆ ಕಡೇ ಖಾಸಗಿ ಆಸ್ಪತ್ರೆಯ ವೈದ್ಯರು ರಕ್ತ ಮೀಸ್ ಮ್ಯಾಚ್ ಆಗಿಲ್ಲಾ ಅಂತಾ ಹೇಳ್ತಾಯಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: 777 Charlie: ಸುದ್ದಿಗೋಷ್ಠಿಗೆ ಚಾರ್ಲಿ ಶ್ವಾನಕ್ಕೆ ನೋ ಎಂಟ್ರಿ; ‘ಮನಸ್ಸು ಬದಲಾಗ್ಬೇಕು’ ಎಂದ ರಕ್ಷಿತ್ ಶೆಟ್ಟಿ
ಮಿಸ್ ಮ್ಯಾಚ್ ರಕ್ತ ಹಾಕಿ ಮಗಳನ್ನು ವೈದ್ಯರು ಕೊಂದಿದ್ದಾರೆ ಅಂತ ಪೋಷಕರು ಗದಗನ ಬೆಟಗೇರಿಯ ಖಾಸಗಿ ಆಸ್ಪತ್ರೆ ಆವರಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಆ ಯುವತಿ ವಿಕಲಚೇತನ ಆದ್ರೂ ಕೂಡಾ ಪೋಷಕರು ಅವಳನ್ನು ಚನ್ನಾಗಿ ನೋಡಿಕೊಂಡಿದ್ರು. 21 ವರ್ಷಗಳ ಕಾಲ ಪೋಷಣೆ ಮಾಡಿದ್ರು. ಆದ್ರೆ ಅನಾರೋಗ್ಯ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಮಿಸ್ ಮ್ಯಾಚ್ ರಕ್ತ ಹಾಕಿದ್ದಕ್ಕೆ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಗದಗ ತಾಲೂಕಿನ ಹರ್ಲಾಪುರ ಗ್ರಾಮದ ನಿವಾಸಿಯಾದ ಜೀವನಸಾಬ್ ಹಾಗೂ ಅಮೀದಾಬೇಗಂ ಎನ್ನುವವರ ಮಗಳಾದ ಮೈಮುನಾ ತಬಸುಮ್ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಜೂನ್ 2 ರಂದು ಅನಾರೋಗ್ಯದಿಂದ ಖಾಸಗಿ ಜರ್ಮನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತುರ್ತಾಗಿ ರಕ್ತ ಹಾಕಬೇಕು ಎಂದು ವೈದ್ಯರು ಹೇಳಿದ್ದಾರೆ. ಈ ವೇಳೆ ಪೋಷಕರು ರಕ್ತವನ್ನು ತೆಗೆದುಕೊಂಡು ಬಂದಿದ್ದಾರೆ. ಆದ್ರೆ ಈ ವೇಳೆ ವೈದ್ಯರು ಬೇರೆ ರಕ್ತವನ್ನು ಹಾಕಿದ್ದಾರೆ. ಹೀಗಾಗಿ ನನ್ನ ಮಗಳು ಸಾನ್ನಪ್ಪಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ರು. ಈ ವೇಳೆ ಡಿವೈಎಸ್ಪಿ ಶಿವಾನಂದ, ಬೆಟಗೇರಿ ಸಿಪಿಐ ಸೇರಿದಂತೆ ಪೊಲೀಸ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯ ಹಾಗೂ ಮಿಸ್ ಮ್ಯಾಚ್ ರಕ್ತದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಬೆಟಗೇರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮಗಳನ್ನು ಕಳೆದುಕೊಂಡ ಹೆತ್ತಮ್ಮ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡೆಸಿದ್ದಾಳೆ. ಸಾವಿಗೆ ವೈದ್ಯರ ಯಡವಟ್ಟು ಕಾರಣ ಎಂದು ಕಣ್ಣೀರು ಹಾಕಿದ್ದಾಳೆ. ಮೈಮುನಾ ತಬಸುಮ್ ಅವಳಿಗೆ ಎಬಿ ನೆಗೆಟಿವ್ ರಕ್ತ ಬೇಕು ಅಂತಾ ಹೇಳಿದ್ರು, ಎ ಪಾಸಿಟಿವ್ ರಕ್ತವನ್ನು ಹಾಕಿದ್ದಾರೆ ಎಂದು ಕುಟುಂಬ ಆರೋಪ ಮಾಡಿದ್ದಾರೆ. ವೈದ್ಯರು ಯಡವಟ್ಟು ಮಾಡಿದ್ದು, ರಕ್ತವನ್ನು ಹಾಕಿದ ಮೇಲೆಯೇ ಮಗಳು ಸಾವನ್ನಪ್ಪಿದ್ದಾಳೆ ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ತಾಯಿ ಆರೋಪಿಸಿದ್ದಾರೆ. ಇನ್ನೂ ಗದಗ ಖಾಸಗಿ ಆಸ್ಪತ್ರೆಯ ಅಧಿಕ್ಷಕರಾದ ಡಾ ಅಂಜಯ್ ರಾಜು ಮಾತನಾಡಿ, ಯುವತಿಗೆ ಬೇಕಾಗಿದ್ದು, ಎ ಪಾಸಿಟಿವ್ ರಕ್ತ, ಪೋಷಕರು ಎರಡು ಬಾಟಲ್ ಎ ಪಾಸಿಟಿವ್ ರಕ್ತವನ್ನು ತಂದು ಕೊಟ್ಟಿದ್ದಾರೆ, ನಾವು ಎರಡು ಬಾಟಲ್ ಎ ಪಾಸಿಟಿವ್ ರಕ್ತವನ್ನು ಹಾಕಿದ್ದೇವೆ. ಯಾವುದೇ ಮಿಸ್ ಮ್ಯಾಚ್ ಆಗಿಲ್ಲಾ ಅಂತಾ ವೈದ್ಯರು ಸ್ಪಷ್ಟ ಪಡೆದಿದ್ದಾರೆ. ಯುವತಿಯು ನಿಮೋನಿಯಾದಿಂದ ಸಾವನ್ನಪ್ಪಿದ್ದಾಳೆ ಎಂದು ಖಾಸಗಿ ವೈದ್ಯರು ಹೇಳ್ತಾರೆ. ಇದನ್ನೂ ಓದಿ: SL vs AUS: ಲಂಕಾ ವಿರುದ್ಧದ ಮೊದಲ ಟಿ20ಗೆ ಆಸೀಸ್ ತಂಡ ಪ್ರಕಟ; ಐಪಿಎಲ್ ಫ್ಲಾಪ್ ಸ್ಟಾರ್ಗಳಿಗೆ ತಂಡದಲ್ಲಿ ಸ್ಥಾನ
ರಕ್ತವನ್ನು ಹಾಕಿದ ಐದು ನಿಮಿಷದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ. ಮೊದಲು ಎಬಿ ನೆಗೆಟಿವ್ ರಕ್ತ ಬೇಕು ಅಂತಾ ಹೇಳಿದ್ರು, ಎ ಪಾಸಿಟಿವ್ ರಕ್ತವನ್ನು ಹಾಕಿದ್ದಾರೆ ಎಂದು ಕುಟುಂಬಸ್ಥರು ಹೇಳ್ತಾಯಿದ್ದಾರೆ. ವೈದ್ಯರು ಯುವತಿ ಎ ಪಾಸಿಟಿವ್ ರಕ್ತ ಬೇಕಾಗಿತ್ತು. ಅದನ್ನೆ ಹಾಕಿದ್ದೇವೆ ಅಂತಾ ಸ್ಪಷ್ಟಪಡೆಸಿದ್ದಾರೆ. ಬೆಟಗೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಕೂಲಂಕುಷವಾಗಿ ತನಿಖೆ ಮಾಡಿದ ಮೇಲೆ ಅಸಲಿ ಸತ್ಯ ಬಹಿರಂಗವಾಗಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಕನ್ನಡ ಗದಗ
Published On - 3:44 pm, Mon, 6 June 22