ಮಂಡ್ಯ: ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮುಖ್ಯ ಶಿಕ್ಷಕ ಅಮಾನತು

| Updated By: ಆಯೇಷಾ ಬಾನು

Updated on: Dec 17, 2022 | 1:50 PM

ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಡಾ.ಆರ್.ವಿಶಾಲ್ ಆದೇಶ ಹೊರಡಿಸಿದ್ದಾರೆ.

ಮಂಡ್ಯ: ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮುಖ್ಯ ಶಿಕ್ಷಕ ಅಮಾನತು
ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿ ಸಸ್ಪೆಂಡ್
Follow us on

ಮಂಡ್ಯ: ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿ ಅಮಾನತುಗೊಳಿಸಿ ಆದೇಶಿಸಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಡಾ.ಆರ್.ವಿಶಾಲ್ ಆದೇಶ ಹೊರಡಿಸಿದ್ದಾರೆ.

ಆರೋಪಿ ಮುಖ್ಯ ಶಿಕ್ಷಕನ ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪೊಲೀಸರು FIR ದಾಖಲಿಸಿದ್ದಾರೆ. ಹಾಗೂ ಶಿಕ್ಷಕನಿಗೆ ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತು ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಕೊಡಗು: ಕ್ಷುಲ್ಲಕ ಕಾರಣಕ್ಕೆ ಜಗಳ, ವಿರಾಜಪೇಟೆ ಬಳಿ ಕಾರು ಹರಿಸಿ ಮೀನು ವ್ಯಾಪಾರಿಯೊಬ್ಬನ ಕೊಲೆ!

ಘಟನೆ ಹಿನ್ನೆಲೆ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಪ್ರೌಢಶಾಲೆ ಮುಖಶಿಕ್ಷಕನಾಗಿದ್ದ ಚಿನ್ಮಯಾನಂದ ಮೂರ್ತಿಯನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ದೊಣ್ಣೆ, ಕೋಲುಗಳಿಂದ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದರು. ಆರೋಪಿ ಚಿನ್ಮಯಾನಂದ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡ್ತಿದ್ನಂತೆ. ಇವನ ಕಿರುಕುಳವನ್ನ ಇಷ್ಟದಿನ ಸಹಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ಗುಂಪು ಗುಂಪಾಗಿ ಸೇರಿ ಹಲ್ಲೆ ಮಾಡಿದ್ದರು. ಪಾಠ ಹೇಳಿಕೊಡುತ್ತಿದ್ದ ಶಿಕ್ಷಕನಿಗೆಯೇ ಕೈಯಲ್ಲಿ ದೊಣ್ಣೆ, ಕೋಲು ಹಿಡಿದು ಪಾಠ ಕಲಿಸಿದ್ರು.

ಹೆಡ್‌ಮಾಸ್ಟರ್‌ ಮೊಬೈಲ್‌ನಲ್ಲಿ ತುಂಬಿವೆ ಹಸಿಬಿಸಿ ದೃಶ್ಯ

ಆರೋಪಿ ಚಿನ್ಮಾಯಾನಂದ ಮೂರ್ತಿ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ. ಜತೆಗೆ ಹಾಸ್ಟೆಲ್ನ ಇನ್‌ಚಾರ್ಜ್‌ ಕೂಡಾ ಆಗಿದ್ದ. ಈ ಕಾರಣಕ್ಕೆ ಹಾಸ್ಟೆಲ್‌ನಲ್ಲೇ ಕಚೇರಿ ಹೊಂದಿದ್ದವನು ಕತ್ತಲಾಗ್ತಿದ್ದಂತೆ ಆಟ ಶುರು ಮಾಡ್ತಿದ್ದ. ಹೊಟ್ಟೆಗೆ ಎಣ್ಣೆ ಬಿಟ್ಕೊಂಡು ಬರ್ತಿದ್ದವನು ವಿದ್ಯಾರ್ಥಿನಿಯರಿಗೆ ಮೊಬೈಲ್‌ನಲ್ಲಿ ಹಸಿಬಿಸಿ ದೃಶ್ಯ ತೋರಿಸಿ ಪ್ರಚೋದಿಸುತ್ತಿದ್ದನಂತೆ. ತನ್ನ ಸಹಶಿಕ್ಷಕಿಯರ ಬಗ್ಗೆಯೂ ಕೆಟ್ಟದಾಗಿ ಮಾತನಾಡ್ತಿದ್ನಂತೆ. ಸದ್ಯ ಇವನ ಆಟಕ್ಕೆ ವಿದ್ಯಾರ್ಥಿಗಳೇ ಚೆನ್ನಾಗಿ ತದುಕಿ ಬುದ್ದಿ ಕಲಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ