ಇದು ಪ್ರತಿಯೊರ್ವ ಬಸುರಿ ಹೆಂಗಸು ನೋಡಬೇಕಾದ ಸ್ಟೋರಿ.. ಸ್ಕ್ಯಾನಿಂಗ್ ಎಂದು ಹೋಗುವ ಗರ್ಭಿಣಿಯರೇ (Pregnant) ಈ ತಂಡದ ಟಾರ್ಗೆಟ್.. ಆ ಒಂದು ಸ್ಕ್ಯಾನಿಂಗ್ ಸೆಂಟರ್ ಮಾಡಿದ ಯಡವಟ್ಟಿನಿಂದ ಈಗ ಒಂದು ಕುಟುಂಬವೇ ಪರಿತಪಿಸುವಂತಾಗಿದೆ.. ಮಾಡಿದ ತಪ್ಪಿಗೆ ಗ್ರಾಹಕರ ವೇದಿಕೆ (Consumer Court) ಈಗ ಸ್ಕ್ಯಾನಿಂಗ್ ಸೆಂಟರ್ ಗೆ ತಕ್ಕ ಪಾಠ ಕಲಿಸಿದೆ..
ಪ್ರಪಂಚದ ಅರಿವೇ ಇಲ್ಲದಂತೆ ಓಡಾಡುತ್ತಿರೊ ಕಂದಮ್ಮ .. ಮಗುವನ್ನ ಕೈಯಲ್ಲಿ ಹಿಡಿದು ಸಂತೈಸುತ್ತಿರೊ ತಾಯಿ.. ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು.. ಮಂಡ್ಯ ಜಿಲ್ಲೆ ಮದ್ದೂರು (Mandya, Maddur) ತಾಲೂಕಿನ ಗೋರವನಹಳ್ಳಿಯಲ್ಲಿ.. ಹೌದು ಸ್ಕ್ಯಾನಿಂಗ್ ಸೆಂಟರ್ (Scanning Center) ಮಾಡಿದ ಯಡವಟ್ಟಿನಿಂದ ಒಂದಿಡೀ ಕುಟುಂಬವೇ ನರಳುವಂತಾಗಿದೆ.
ಸಿಂಧುಶ್ರೀ ಐದು ತಿಂಗಳ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ಮದ್ದೂರಿನ ಡಿ2 ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಅವರಿಗೆ ಸ್ಕ್ಯಾನಿಂಗ್ ಮಾಡಲಾಗಿತ್ತು. ಈ ವೇಳೆ ಸ್ಕ್ಯಾನಿಂಗ್ ನಡೆಸಿದ ಸಿಬ್ಬಂದಿ ಮಗುವಿಗೆ ಯಾವುದೇ ಖಾಯಿಲೆ ಇಲ್ಲವೆಂದು ವರದಿ ನೀಡಿತ್ತು. ಆದ್ರೆ ಮಗು ಜನನದ ಬಳಿಕ ಮಗುವಿಗೆ ಡೌನ್ ಸಿಂಡ್ರೊಮ್ ಎಂಬ ಕಾಯಿಲೆ ಹಾಗೂ ಹೃದಯದಲ್ಲಿ ಮೂರು ಹೋಲ್ ಇರೋದು ತಿಳಿದು ಬಂದಿದೆ ಎನ್ನುತ್ತಾರೆ ಸಿಂಧುಶ್ರೀ ಅವರ ತಾಯಿ.
ಇನ್ನು ಮಗು ರುಚಿತ ಜನನದ ಬಳಿಕ ಹೃದಯದಲ್ಲಿ ಮೂರು ಹೋಲ್ ಗಳಿದ್ದು ಜೊತೆಗೆ ಡೌನ್ ಸಿಂಡ್ರೋಮ್ ಎಂಬ ಖಾಯಿಲೆ ಇರೋದು ಸ್ಪಷ್ಟವಾಗಿದೆ. ಈ ಕುರಿತು ಪೋಷಕರಾದ ಮಹೇಶ್ ಹಾಗೂ ಸಿಂಧುಶ್ರಿ ಗ್ರಾಹಕರ ವೇದಿಕೆ ಕೋರ್ಟ್ ಗೆ ಹೋಗಿದ್ದಾರೆ. ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಡಿ2 ಡಯಾಗ್ನೆಟಿಕ್ ಸೆಂಟರ್ ಗೆ 15 ಲಕ್ಷ ರೂಪಾಯಿ ದಂಡವನ್ನ ವಿಧಿಸಿ ಆದೇಶವನ್ನ ಹೊರಡಿಸಿದೆ. ಸದ್ಯ, ಮಾಡಿದ ಯಡವಟ್ಟಿಗೆ ಈಗ ಡಯಾಗ್ನೆಟಿಕ್ ಸೆಂಟರ್ ದಂಡ ತೆರುವಂತಾಗಿದೆ.
ಒಟ್ಟಾರೆ ಡಯಾಗ್ನೆಟಿಕ್ ಸೆಂಟರ್ ಮಾಡಿದ ಯಡವಟ್ಟಿನಿಂದ ಈಗ ಒಂದು ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮಾಡಿದ ಯಡವಟ್ಟಿಗೆ ಡಯಾಗ್ನೆಟಿಕ್ ಸೆಂಟರ್ ಗೆ ಗ್ರಾಹಕರ ವೇದಿಕೆ ತಕ್ಕ ಶಾಸ್ತಿ ಮಾಡಿದ್ದು ಮುಂದಿನ ದಿನಗಳಲ್ಲಿ ಬೇರೊಬ್ಬ ಪೋಷಕರಿಗೆ ಈ ರೀತಿ ಅನ್ಯಾಯವಾಗದಂತೆ ಕೋರ್ಟ್ ಬುದ್ದಿ ಕಲಿಸಿದೆ. ( ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ)
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ