Sign In

By signing in or creating an account, you agree with Associated Broadcasting Company's Terms & Conditions and Privacy Policy.

Melukote Bhramotsava: ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ

ರತ್ನಖಚಿತ ವೈರಮುಡಿ ಮೇಲುಕೋಟೆಗೆ ರವಾನಿಸಲಾಗಿದೆ. ರಾತ್ರಿ 8.30ರಿಂದ ಮುಂಜಾನೆ 3ರವರೆಗೂ ಬ್ರಹ್ಮರಥೋತ್ಸವ ನಡೆಯಲಿದೆ.

Melukote Bhramotsava: ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Apr 01, 2023 | 8:51 AM

ಮಂಡ್ಯ: ವಿಶ್ವ ವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮರಥೋತ್ಸವಕ್ಕೆ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಚಾಲನೆ ನೀಡಿದ್ದಾರೆ. ಇಂದು(ಏಪ್ರಿಲ್ 01) ನಡೆಯುವ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಲು ಶ್ರೀಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಜಿಲ್ಲಾಡಳಿತದ ಖಜಾನೆಯಿಂದ ರತ್ನಖಚಿತ ವೈರಮುಡಿ ಮೇಲುಕೋಟೆಗೆ ರವಾನಿಸಲಾಗಿದೆ. ವೈರಮುಡಿ ರವಾನೆಗೂ ಮುನ್ನ ಖಜಾನೆಯಲ್ಲಿ ವೈರಮುಡಿಗೆ ಡಿಸಿ, ಎಸ್ಪಿ, ಎಸಿ, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಪೂಜೆ ಸಲ್ಲಿಸಿ ಬೀಳ್ಕೋಟ್ಟರು. ಪೂಜೆ ವೇಳೆ ಚೆಲುವನಾರಾಯಣಸ್ವಾಮಿಗೆ ಜೈಕಾರದ ಮೊಳಗಿದವು.

ಸ್ಥಾನಿಕ ಅರ್ಚಕರು ಪರಕಾಲ ಮಠದ ವಾಹನದಲ್ಲಿ ಭದ್ರತೆಯೊಂದಿಗೆ ವೈರಮುಡಿ ಕೊಂಡ್ಯೊದರು. ಮಂಡ್ಯ ನಗರದ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವೈರಮುಡಿಗೆ ಮೊದಲ ಪೂಜೆ ನಡೆಯಿತು. ಮಂಡ್ಯ ಶ್ರೀರಂಗಪಟ್ಟಣ ಪಾಂಡವಪುರ ಮಾರ್ಗದಲ್ಲಿ ವೈರಮುಡಿ ಮೇಲುಕೋಟೆ ತಲುಪಿತು. ವೈರಮುಡಿ ಸಾಗುವ ಮಾರ್ಗದ ಪ್ರತಿ ಗ್ರಾಮದಲ್ಲೂ ಗ್ರಾಮಸ್ಥರು ವೈರಮುಡಿಗೆ ಪೂಜೆ ಸಲ್ಲಿಸಿದರು.

ಇನ್ನು ವೈರಮುಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿಸಿ ಗೋಪಾಲಕೃಷ್ಣ, ಜಿಲ್ಲಾಡಳಿತದಿಂದ ರತ್ನಖಚಿತ ವೈರಮುಡಿ ಮೇಲುಕೋಟೆಗೆ ರವಾನಿಸಲಾಗಿದೆ. ರಾತ್ರಿ 8.30ರಿಂದ ಮುಂಜಾನೆ 3ರವರೆಗೂ ಬ್ರಹ್ಮರಥೋತ್ಸವ ನಡೆಯಲಿದೆ. ವೈರಮುಡಿ ದರ್ಶನ ಪಡೆಯಲು ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಇದನ್ನೂ ಓದಿ: Melukote: ಮೇಲುಕೋಟೆ ಪುನಃಶ್ಚೇತನಕ್ಕೆ ಮುಂದಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ, ಕಿಡಿಗೇಡಿಗಳ ಮೂಕರ್ಜಿಯಿಂದ ಮೌನಕ್ಕೆ ಶರಣಾದರು!

ಮಾರ್ಚ್‌ 27ರಂದೇ ‘ಅಂಕುರಾರ್ಪಣ’ ಧಾರ್ಮಿಕ ಕಾರ್ಯಕ್ರಮದ ಮೂಲಕ 10 ದಿನಗಳ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಶನಿವಾರ ರಾತ್ರಿ 8.30ಕ್ಕೆ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಕಿರೀಟ ಧಾರಣೆ ಮಾಡಿಲಾಗುತ್ತದೆ, ನಂತರ ಉತ್ಸವ ಮೂರ್ತಿಯ ಮೆರವಣಿಗೆ ರಾತ್ರಿಯಿಡೀ ನಡೆಯಲಿದೆ. ಉತ್ಸವದ ಅಂಗವಾಗಿ ಇಡೀ ಮೇಲುಕೋಟೆ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ. ಹೋಟೆಲ್‌, ವಸತಿ ಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:51 am, Sat, 1 April 23