Sign In

By signing in or creating an account, you agree with Associated Broadcasting Company's Terms & Conditions and Privacy Policy.

Melukote: ಮೇಲುಕೋಟೆ ಪುನಃಶ್ಚೇತನಕ್ಕೆ ಮುಂದಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ, ಕಿಡಿಗೇಡಿಗಳ ಮೂಕರ್ಜಿಯಿಂದ ಮೌನಕ್ಕೆ ಶರಣಾದರು!

Infosys sudha murthy: ಉದಾತ್ತ ಉದ್ದೇಶದೊಂದಿಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಕಾರ್ಯ ಸಾಕಷ್ಟು ಜನ ಮನ್ನಣೆ ಸಂಪಾದಿಸಿತ್ತು. ಭಕ್ತಗಣ ಹಾಗೂ ಸ್ಥಳೀಯರು ಸುಧಾಮೂರ್ತಿಯವರ ಕೆಲಸವನ್ನ ಮೆಚ್ಚಿದ್ದರು. ಆದ್ರೆ ಕೆಲ ಕಿಡಿಗೇಡಿಗಳು ಮೂಕ ಅರ್ಜಿ ಬರೆದುಬಿಟ್ಟಿದ್ದಾರೆ.

Melukote: ಮೇಲುಕೋಟೆ ಪುನಃಶ್ಚೇತನಕ್ಕೆ ಮುಂದಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ, ಕಿಡಿಗೇಡಿಗಳ ಮೂಕರ್ಜಿಯಿಂದ ಮೌನಕ್ಕೆ ಶರಣಾದರು!
ಮೇಲುಕೋಟೆ ಪುನಃಶ್ಚೇತನಕ್ಕೆ ಮುಂದಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 20, 2023 | 2:24 PM

ಒಂದೊಳ್ಳೆ ಕೆಲಸಕ್ಕೆ ನೂರೆಂಟು ವಿಘ್ನ ಅನ್ನೋ ಹಾಗೇ ಮೇಲುಕೋಟೆ ಪುರಾಣ ಪ್ರಸಿದ್ಧ ದೇಗುಲದ (Melukote) ಜೀರ್ಣೊದ್ಧಾರದ ಕಾರ್ಯಕ್ಕೆ (renovation) ಕೈ ಹಾಕಿದ್ದ ಇನ್ಫೋಸಿಸ್ ಕಂಪನಿಯ ಸಂಸ್ಥೆಗೆ ಕೆಲ ಕಿಡಿಗೇಡಿಗಳು ಬರೆದ ಮೂಕರ್ಜಿ ಈಗ ವಿಘ್ನ ತಂದಿದೆ. 50 ಕೋಟಿ ರೂಪಾಯಿ ವೆಚ್ಚದಲ್ಲಿ ಪುರಾಣ ಪ್ರಸಿದ್ದ ಮೇಲುಕೋಟೆಯ ಪುನಶ್ಚೇತನಕ್ಕೆ ಮುಂದಾಗಿದ್ದ ಸಂಸ್ಥೆಗೆ ಕೆಲವರು ಅಡ್ಡಿಪಡಿಸಿದ್ದು ಕಳೆದ ಏಳೆಂಟು ವರ್ಷಗಳಿಂದ ನಡೆಯಬೇಕಿದ್ದ ಅಭಿವೃದ್ಧಿ ಕಾರ್ಯವೀಗ ಸ್ಥಗಿತಗೊಂಡಿದೆ. ಕಿಡಿಗೇಡಿಗಳು ಬರೆದ ಮೂಕರ್ಜಿಯಿಂದ ಜೀರ್ಣೊದ್ದಾರಕ್ಕೆ ತಡೆ..!! ಮಂಡ್ಯ ಜಿಲ್ಲೆಯ ಹೆಮ್ಮೆ ಅಂದ್ರೆ ಅದು ಮೇಲುಕೋಟೆ. ಚಲುವನಾರಾಯಣನ (cheluvarayaswamy temple) ದರ್ಶನಕ್ಕೆ ಹೊರ ರಾಜ್ಯ ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಗಣ ಆಗಮಿಸುತ್ತಾರೆ. ಇಂತ ಪುರಾಣ ಪ್ರಸಿದ್ದ ಮೇಲುಕೋಟೆಯ ಅಭಿವೃದ್ಧಿಗೆ/ ಜಿರ್ಣೊದ್ದಾರಕ್ಕೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ (Infosys foundation chairperson sudha murthy) ಮುಂದಾಗಿದ್ದರು. ಬರೋಬ್ಬರಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಪುರಾತನ ದೇವಾಲಯದ ಕಟ್ಟಡಗಳು ಹಾಗೂ ಕಲ್ಯಾಣಿಗಳ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ರು. ಭಾಗಶಃ ಶೇಕಡ 50 ಪರ್ಸೆಂಟ್ ಕಾರ್ಯಗಳು ಸಹ ಮುಗಿದಿದ್ದವು. ಕಲ್ಯಾಣಿಗಳ ಪುನಃಶ್ಚೇತನ ಸಹ ಸಾಂಗೋಪಾಂಗವಾಗಿ ನಡೆದಿತ್ತು. ಆದ್ರೆ ಕೆಲ ಕಿಡಿಗೇಡಿಗಳು ಮಾಡಿದ ಯಡವಟ್ಟಿನಿಂದ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ಮೊಟಕುಗೊಂಡಿವೆ.

ಉದಾತ್ತ ಉದ್ದೇಶದೊಂದಿಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಕಾರ್ಯ ಸಾಕಷ್ಟು ಜನ ಮನ್ನಣೆ ಸಂಪಾದಿಸಿತ್ತು. ಭಕ್ತಗಣ ಹಾಗೂ ಸ್ಥಳೀಯರು ಸುಧಾಮೂರ್ತಿಯವರ ಕೆಲಸವನ್ನ ಮೆಚ್ಚಿದ್ದರು. ಆದ್ರೆ ಕೆಲ ಕಿಡಿಗೇಡಿಗಳು ಮೂಕ ಅರ್ಜಿಯೊಂದನ್ನ ಬರೆದಿದ್ದಾರೆ. ಸುಧಾಮೂರ್ತಿಯವರು ಕಳಿಸುತ್ತಿರುವ ಫಂಡ್ ಮಿಸ್ ಯ್ಯೂಸ್ ಆಗ್ತಾಯಿದೆ ಎಂದು ಆರೋಪಿಸಿದ್ದಾರೆ.

ಪದೇ ಪದೇ ಸುಳ್ಳು ಮೂಕರ್ಜಿಯನ್ನ ಬರೆದ ಪರಿಣಾಮ ಮನನೊಂದ ಸುಧಾಮೂರ್ತಿಯವರು ಜೀರ್ಣೊದ್ದಾರ ಕೆಲಸವನ್ನ ಅರ್ಧಕ್ಕೆ ಕೈ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ ಅರ್ಧಕ್ಕೆ ನೆನೆಗುದಿಗೆ ಬಿದ್ದಿದೆ. ಒಂದೊಳ್ಳೆ ಕೆಲಸಕ್ಕೆ ನೂರು ವಿಘ್ನ ಅನ್ನೋ ರೀತಿ ಕಿಡಿಗೇಡಿಗಳ ಈ ಕಾರ್ಯಕ್ಕೆ ಪುರಾಣ ಪ್ರಸಿದ್ದ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮೊಟಕು ಗೊಂಡಿದೆ.

ಇದನ್ನೂ ಓದಿ:

Melukote: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾದ ತಂಗಿ ಕೊಳ, ಮೇಲುಕೋಟೆಯಲ್ಲಿ ಭಕ್ತರಿಗೆ ಭಾರಿ ನಿರಾಸೆ

ಒಂದು ವೇಳೆ ಜೀರ್ಣೊದ್ದಾರ ಕಾರ್ಯ ಸಂಪೂರ್ಣಗೊಂಡಿದ್ದರೆ ಮೇಲುಕೋಟೆಯ ಹಳೆಯ ಕಟ್ಟಡಗಳು, ಕಲ್ಯಾಣಿ ಹಾಗೂ ಉದ್ಯಾನವನ ಎಲ್ಲವೂ ಪುನಃಶ್ಚೇತನಗೊಂಡು ಮತ್ತಷ್ಟು ಜನಾಕರ್ಷಕವಾಗಿರುತ್ತಿತ್ತು. ಯಾರೋ ಮಾಡಿದ ಯಡವಟ್ಟಿನಿಂದ ಪುರಾಣ ಪ್ರಸಿದ್ದ ಮೇಲುಕೋಟೆಯ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡು ಏಳೆಂಟು ವರ್ಷಗಳೇ ಕಳೆದಿವೆ. ಮತ್ತದು ಉದ್ಧಾರ ಆಗೋದು ಯಾವಾಗಲೋ, ಏನೋ ಎಂಬಂತಾಗಿದೆ.

ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ

ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ