ನಾಗಮಂಗಲ: ತಿಪ್ಪೆ ಪಕ್ಕ ನವಜಾತ ಹಸುಗೂಸು ಪತ್ತೆ
ತಿಪ್ಪೆ ಪಕ್ಕದಲ್ಲಿ ಮಗು ಅಳುತ್ತಿದ್ದ ಧ್ವನಿ ಕೇಳಿ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿಯಲ್ಲಿ ತಿಪ್ಪೆ ಪಕ್ಕದಲ್ಲಿ ನವಜಾತ ಹಸುಗೂಸು ಪತ್ತೆಯಾಗಿದೆ. ಯಾರೂ ನಿಷ್ಕರುಣಿಗಳು 2 ದಿನಗಳ ಹಿಂದೆಯಷ್ಟೆ ಜನಿಸಿರುವ ನವಜಾತ ಹೆಣ್ಣುಶಿಶುವನ್ನು ತಿಪ್ಪೆ ಬಳಿ ಬ್ಯಾಗ್ನಲ್ಲಿ ಇಟ್ಟುಹೋಗಿದ್ದಾರೆ. ತಿಪ್ಪೆ ಪಕ್ಕದಲ್ಲಿ ಮಗು ಅಳುತ್ತಿದ್ದ ಧ್ವನಿ ಕೇಳಿ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಗ್ರಾಮದ ದರ್ಶನ್ ಹಾಗೂ ವರದರಾಜು ಎಂಬುವವರು ಹಸುಗೂಸು ರಕ್ಷಣೆ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಹಸುಗೂಸನ್ನು ತೆಗೆದುಕೊಂಡು ಹೋಗಿದ್ದು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು: ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸಾವು; ಮೃತದೇಹ ಇಟ್ಟು ಗ್ರಾಮಸ್ಥರ ಪ್ರತಿಭಟನೆ
ಅಡಕೆ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ಇಬ್ಬರು ದುರ್ಮರಣ
ದಾವಣಗೆರೆ ತಾಲೂಕಿನ ಬಾಡಾ ಗ್ರಾಮದ ಬಳಿ ಅಡಕೆ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮಲ್ಲಿಕಾರ್ಜುನ್(65), ಕತ್ತಕಗೆರೆ ಚಂದ್ರಪ್ಪ(45) ಮೃತ ದುರ್ದೈವಿಗಳು. ಅಡಕೆ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ದುರ್ಘಟನೆ ನಡೆದಿದೆ.
ಪಂಪ್ಸೆಟ್ ಆನ್ ಮಾಡುವಾಗ ಮದರ್ ಬೋರ್ಡ್ಗೆ ವಿದ್ಯುತ್ ಪ್ರವಹಿಸಿ ಮಾಲೀಕ ಮಲ್ಲಿಕಾರ್ಜುನ ನೆಲಕ್ಕುರುಳಿ ಬಿದಿದ್ದು ರಕ್ಷಣೆಗೆ ಹೋದ ಕಾರ್ಮಿಕ ಚಂದ್ರಪ್ಪನಿಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:37 pm, Mon, 20 February 23