ಮಂಡ್ಯ: ಸಾಲಬಾಧೆಗೆ ವಿಷ ಸೇವಿಸಿ ದಂಪತಿ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Aug 30, 2023 | 12:44 PM

ಮಂಡ್ಯದಲ್ಲಿ ವಿಷ ಸೇವಿಸಿ ರಾಜೇಶ್(45), ಸುಧಾ(40) ಎಂಬ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ಹಿನ್ನೆಲೆ ದಂಪತಿ ಮನೆಯಲ್ಲಿ ವಿಷ(Poison) ಸೇವಿಸಿ ಪ್ರಾಣಬಿಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ: ಸಾಲಬಾಧೆಗೆ ವಿಷ ಸೇವಿಸಿ ದಂಪತಿ ಆತ್ಮಹತ್ಯೆ
ರಾಜೇಶ್, ಸುಧಾ
Follow us on

ಮಂಡ್ಯ, ಆ.30: ಸಾಲಬಾಧೆಗೆ ದಂಪತಿ ಆತ್ಮಹತ್ಯೆ(Death) ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಎನ್.ಇ.ಎಸ್. ಬಡಾವಣೆಯಲ್ಲಿ ನಡೆದಿದೆ. ವಿಷ ಸೇವಿಸಿ ರಾಜೇಶ್(45), ಸುಧಾ(40) ಎಂಬ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ಹಿನ್ನೆಲೆ ದಂಪತಿ ಮನೆಯಲ್ಲಿ ವಿಷ(Poison) ಸೇವಿಸಿ ಪ್ರಾಣಬಿಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್​ನಿಂದ ಆಯತಪ್ಪಿ ಬಿದ್ದು ನಿರ್ವಾಹಕ ಈರಯ್ಯ ಸಾವು

ಇನ್ನು ಮತ್ತೊಂದೆಡೆ ಮಂಗಳೂರು ನಗರದ ನಂತೂರು ವೃತ್ತದಲ್ಲಿ ಖಾಸಗಿ ಬಸ್​ನಿಂದ ಆಯತಪ್ಪಿ ಬಿದ್ದು ನಿರ್ವಾಹಕ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಮೂಲದ ಈರಯ್ಯ(23) ಮೃತ ನಿರ್ವಾಹಕ. ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಬಸ್​ ತೆರಳುತ್ತಿತ್ತು. ಸರ್ಕಲ್ ಬಳಿ ತಿರುವು ಪಡೆಯುವಾಗ ಬಸ್​ನ ಬಾಗಿಲು ಬಳಿ ನಿಂತಿದ್ದ ಈರಯ್ಯ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಟ್ರಾಫಿಕ್ ಪೊಲೀಸರು ಮತ್ತು ಸ್ಥಳೀಯರು ಈರಯ್ಯನವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಾರೊಂದರ ಡ್ಯಾಷ್ ಬೋರ್ಡ್ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಸುರತ್ಕಲ್​ನ ತಡಂಬೈಲ್​ನಲ್ಲಿ ಮೃತ ಈರಯ್ಯ ವಾಸವಾಗಿದ್ದರು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮಡಿಕೇರಿ ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ; ವಿಷ ಕುಡಿದು KSRTC ನೌಕರ ಆತ್ಮಹತ್ಯೆಗೆ ಯತ್ನ

ಆಸ್ತಿ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ಅಣ್ಣ, ಅತ್ತಿಗೆಯ ಬರ್ಬರ ಕೊಲೆ

ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಜೋಡಿ ಕೊಲೆಗಳಾಗಿವೆ. ಮಚ್ಚಿನಿಂದ ಕೊಚ್ಚಿ ತಮ್ಮನೇ ಅಣ್ಣ ಹಾಗೂ ಅತ್ತಿಗೆಯ ಬರ್ಬರ ಕೊಲೆ ಮಾಡಿದ್ದಾನೆ. ಪತಿ ಶಿವಲಿಂಗೇಗೌಡ(55), ಪತ್ನಿ ಭಾರತಿ(47) ಕೊಲೆಯಾದ ದಂಪತಿ. ಶಿವಲಿಂಗೇಗೌಡ ಸೋದರ ಹನುಮಂತೇಗೌಡ(50) ಕೊಲೆ ಆರೋಪಿ.

ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶಿವಲಿಂಗೇಗೌಡ, ಭಾರತಿ ಮೇಲೆ ಹನುಮಂತೇಗೌಡ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಹನುಮಂತೇಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ