Mandya News: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ, ಕೊಲೆಯಲ್ಲಿ ಅಂತ್ಯ

|

Updated on: May 26, 2023 | 11:01 AM

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ, ತೀವ್ರ ಹಲ್ಲೆಗೊಳಗಾಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೋರಾಪುರದ ಬಳಿ ನಡೆದಿದೆ. ಪುನೀತ್​ ಮೃತ ರ್ದುದೈವಿ.

Mandya News: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ, ಕೊಲೆಯಲ್ಲಿ ಅಂತ್ಯ
ಮಂಡ್ಯ
Follow us on

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ, ತೀವ್ರ ಹಲ್ಲೆಗೊಳಗಾಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮದ್ದೂರು (Maddur) ತಾಲೂಕಿನ ಬೋರಾಪುರದ ಬಳಿ ನಡೆದಿದೆ. ಪುನೀತ್​ ಮೃತ ರ್ದುದೈವಿ. ಹೌದು ಹಣದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಚಿಕ್ಕರಸಿನಕೆರೆ ಗ್ರಾಮದ ನಿವಾಸಿ ಪುನೀತ್ ಮೇಲೆ ಸ್ನೇಹಿತರು ತೀವ್ರ ಹಲ್ಲೆ ನಡೆಸಿದ್ದರು. ಈ ವೇಳೆ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಬಳಿಕ ಆತನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಪುನೀತ್ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಹತ್ಯೆ

ಬೆಂಗಳೂರಿನ ಮಹದೇವಪುರದಲ್ಲಿ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನನ್ನ ಹತ್ಯೆ ಮಾಡಲಾಗಿದೆ. ರೇಣುಕುಮಾರ್​(24) ಹತ್ಯೆಯಾದ ಯುವಕ. ಏರಿಯಾದಲ್ಲಿ ನಿಂದು ಜಾಸ್ತಿ ಆಗಿದೆ ಎಂದು ಮೃತ ಯುವಕನ ಜೊತೆ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಚಾಕುವಿನಿಂದ ಪ್ರಶಾಂತ್, ಶ್ರೀಕಾಂತ್, ವಸಂತ್​ ಕುಮಾರ್ ಎಂಬುವವರು ಇರಿದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Belgaum: ಘಟಪ್ರಭಾ ನದಿಯಲ್ಲಿ ಈಜಲು ಹೋಗಿ ನಾಲ್ವರು ಯುವಕರು ಸಾವು

ಇನ್ನು ಮೃತ ರೇಣುಕುಮಾರ್ 7 ಕೇಸ್​ನಲ್ಲಿ ಅರೋಪಿಯಾಗಿದ್ದ. ಇದರಲ್ಲಿ ಕೊಲೆ ಯತ್ನ, ರಾಬರಿ, ಹಲ್ಲೆ ಕೇಸ್​ಗಳು ಇವೆ. ಇನ್ನು ಮೃತ ಯುವಕ, ಶ್ರೀಕಾಂತ್ ಮತ್ತು ಪ್ರಶಾಂತ್​ಗೆ ನೀವು ನನ್ನ ಜೊತೆಗೆ ಇರ್ಬೇಕು ನೋಡು ಎಂದು ಬೆದರಿಕೆ ಹಾಕಿದ್ದನಂತೆ. ಒಂಟಿಯಾಗಿ ಏನಾದ್ರು ಕೆಲಸ ಮಾಡಿದ್ರೆ, ನಿಮ್ಮನ್ನ ಬಿಡುವುದಿಲ್ಲ. ನಾನು ಜೈಲಿಗೆ ಹೋಗಿ ಬಂದಿದ್ದೆನೆ, ನಾನೇ ಬಾಸ್ ಎಂದು ಹೆದರಿಸಿದ್ದನಂತೆ. ಈ ಹಿನ್ನಲೆ ಶ್ರೀಕಾಂತ್, ಪ್ರಶಾಂತ್ ಆತನನ್ನ ಹೊಡೆದು ಮುಗಿಸಬೇಕು ಎಂದು ಪ್ಲಾನ್ ಮಾಡಿದ್ದಾರೆ. ಇದರ ಜೊತೆಗೆ ಬಂಗಾರಪೇಟೆ ಮೂಲದ ಗೆಳೆಯ ವಸಂತ್​ನನ್ನು ಜೊತೆಗೆ ಸೇರಿಸಿಕೊಂಡು ರೆಣುಕುಮಾರ್​ನನ್ನು ಇರಿದು ಕೊಲೆ ಮಾಡಿದ್ದಾರೆ.

ಲಾರಿ ವ್ಯವಹಾರದ ವಿಚಾರವಾಗಿ ಯುವಕನ ಬರ್ಬರ ಕೊಲೆ

ರಾಮನಗರ: ಲಾರಿ ವ್ಯವಹಾರದ ವಿಚಾರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಬೆಂಗಳೂರು ಮೂಲದ ಮಂಜು(27) ಎಂಬುವವನನ್ನ ಕೊಲೆ ಮಾಡಲಾಗಿದೆ. ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ನಿನ್ನೆ (ಮೇ.25) ಮಂಜು ಹಾಗೂ ಲಾರಿ ಮಾಲೀಕ ರವಿ ನಡುವೆ ಗಲಾಟೆ‌ ನಡೆದು, ವ್ಯವಹಾರದ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿತ್ತು. ಇದೇ ವಿಚಾರವಾಗಿ ಮಂಜು ಕೊಲೆ ನಡೆದಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಸ್ಥಳಕ್ಕೆ ಬಿಡದಿ ಠಾಣೆ ಪೊಲೀಸರ ‌ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ