AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಭೀಕರ ಅಪಘಾತ: ಅರ್ಧ ಹೆಲ್ಮೆಟ್​ ಹಾಕಿದ್ದ ಯುವತಿ ಸಾವು, ಫುಲ್ ಹೆಲ್ಮೆಟ್​ ಧರಿಸಿದ್ದ ಯುವಕ ಬಚಾವ್

ಸುಲೋಚನಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಸುಲೋಚನ ಹಾಲ್ಫ್ ಹೆಲ್ಮೆಡ್ ಧರಿಸಿದ್ದರು. ಅವರ ತಲೆಗೆ ಗಂಭೀರ ಗಾಯವಾಗಿತ್ತು.

ಬೆಂಗಳೂರಿನಲ್ಲಿ ಭೀಕರ ಅಪಘಾತ: ಅರ್ಧ ಹೆಲ್ಮೆಟ್​ ಹಾಕಿದ್ದ ಯುವತಿ ಸಾವು, ಫುಲ್ ಹೆಲ್ಮೆಟ್​ ಧರಿಸಿದ್ದ ಯುವಕ ಬಚಾವ್
ಸುಲೋಚನಾ
ಆಯೇಷಾ ಬಾನು
|

Updated on:Apr 03, 2023 | 11:30 AM

Share

ಬೆಂಗಳೂರು: ಬೈಕ್​ ಓಡಿಸುವಾಗ ಹೆಲ್ಮೆಟ್ ಧರಿಸಬೇಕು ಎಂದು ಎಷ್ಟೇ ಹೇಳಿದರೂ ಜನ ಕೇಳಲ್ಲ. ಹೇರ್ ಸ್ಟೈಲ್ ಹಾಳಾಗುತ್ತೆ, ಅದೂ ಇದೂ ಅಂತ ನೆಪ ಹೇಳುತ್ತಾರೆ. ಅದೇ ಟ್ರಾಫಿಕ್ ಪೊಲೀಸ್ ಕಂಡ ತಕ್ಷಣ ಹೆಲ್ಮೆಟ್ ಧರಿಸಿ ಮತ್ತೆ ಬಿಚ್ಚಿಡುತ್ತಾರೆ. ಆದ್ರೆ ಈ ಹೆಲ್ಮೆಟ್​ಗಳು ಸವಾರನ ಪ್ರಾಣ ಉಳಿಸುವ ಸಾಧನಗಳು. ಹೆಲ್ಮೆಟ್ ಧರಿಸಿದ್ದ ಕಾರಣಕ್ಕೆ ಅದೆಷ್ಟೂ ಜೀವಗಳು ಬದುಕುಳಿದಿರುವ ಉದಾಹರಣೆ ಇದೆ. ನಿನ್ನೆ ನಡೆದ ಅಪಘಾತದಲ್ಲೂ ಇದು ನಿಜವಾಗಿದೆ. ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ಬಳಿ ಏಪ್ರಿಲ್ 2ರ ಸಂಜೆ ನಡೆದ ಅಪಘಾತದಲ್ಲಿ ಗಾಯಗೊಂಡು ಯುವಕ-ಯುವತಿ  ಇಬ್ಬರೂ ಆಸ್ಪತ್ರೆ ಸೇರಿದ್ದರು. ಆದ್ರೆ ಇಂದು ಸುಲೋಚನಾ ಎಂಬ ಯುವತಿ ಮೃತಪಟ್ಟಿದ್ದು ಆನಂದ್ ಜೀವ ಭಯದಿಂದ ಪಾರಾಗಿದ್ದಾರೆ.

ಟೈರ್ ಸ್ಫೋಟಗೊಂಡು ಬೈಕ್‌ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದ ಆನಂದ್‌, ಸುಲೋಚನಾ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಸುಲೋಚನಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಸುಲೋಚನ ಹಾಲ್ಫ್ ಹೆಲ್ಮೆಡ್ ಧರಿಸಿದ್ದರು. ಅವರ ತಲೆಗೆ ಗಂಭೀರ ಗಾಯವಾಗಿತ್ತು. ಹಾಘೂ ಫುಲ್ ಹೆಲ್ಮೆಟ್ ಧರಿಸಿದ್ದ ಆನಂದ್ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸುಲೋಚನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದ ಸುಲೋಚನ, ಆನಂದ್ ನಿನ್ನೆ ಕೆಲಸ ಮುಗಿಸಿ ಕೋರಮಂಗಲದಿಂದ ಸ್ಕೂಟರ್ ನಲ್ಲಿ ತೆರಳಿದ್ರು. ಈ ವೇಳೆ ಅಪಘಾತ ಸಂಭವಿಸಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Bangarpet: ಎರಡು ಬೈಕ್​ಗಳ ನಡುವೆ ಅಪಘಾತ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಲಾರಿ ಹರಿದು ಮಹಿಳೆ ಸಾವು; ವೃದ್ಧೆ ಎರಡು ಕಾಲು ಕಟ್, ಮಗು ಬಚಾವ್

ಏಪ್ರಿಲ್ 2ರ ಮಧ್ಯಾಹ್ನ 2 ಗಂಟೆಯ ವೇಳೆ ನಾಯಂಡಹಳ್ಳಿ ರಸ್ತೆ ರಣಾಂಗಣವಾಗಿತ್ತು. ಅತ್ತಿಗುಪ್ಪೆ ನಿವಾಸಿ ಅನುಷಾ ಆಕೆಯ ತಾಯಿ ವನಜಾಕ್ಷಿ ಮತ್ತು ಏಳು ವರ್ಷದ ಪುತ್ರ ತಮ್ಮ ಸುಜುಕಿ ಆ್ಯಕ್ಸಿಸ್ ಸ್ಕೂಟರ್ ನಲ್ಲಿ ಮನೆಯಿಂದ ನಾಯಂಡಹಳ್ಳಿ ಕಡೆಗೆ ಹೊರಡ್ತಿದ್ರು. ಭಾನುವಾರ ಇದ್ದಿದ್ದರಿಂದ ಗ್ಲೋಬಲ್ ಮಾಲ್ ಗೆ ಕಡೆಗೆ ಮಗುವನ್ನ ಕರೆದುಕೊಂಡು ತೆರಳ್ತಿದ್ರು. ಈ ವೇಳೆ ನಾಯಂಡಹಳ್ಳಿ ಬ್ರಿಡ್ಜ್ ಇಳಿತಾ ಇದ್ದಂತೆ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ಬೈಕ್ ಮೇಲೆ ಹರಿದಿತ್ತು. ಚಕ್ರ ಅನುಷಾ ತಲೆ ಮೇಲೆ ಹರಿದಿದ್ದರಿಂದ ತಲೆ ನಜ್ಜುಗುಜ್ಜಾಗಿ ಸಾವನ್ನಪ್ಪಿದ್ದರು. ಅನುಷಾ ತಾಯಿ ವನಜಾಕ್ಷಿಯ ಎರಡೂ ಕಾಲು ಕಟ್ ಆಗಿದ್ದು ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಇನ್ನೂ ಏಳು ವರ್ಷದ ಮಗುಗೆ ತಲೆ ಹಾಗೂ ಕೈಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿತ್ತು.

ಅಪಘಾತವಾಗ್ತಿದ್ದಂತೆ ಲಾರಿ ಚಾಲಕ, ಲಾರಿ ಮೂವ್ಮೆಂಟ್ ನಲ್ಲಿ ಇದ್ದಂತೆ ಬಿಟ್ಟು ಪರಾರಿಯಾಗಿದ್ದ. ಮುಂದೆ ಮುಂದೆ ಬಂದ ಲಾರಿ ಕೆಎಸ್ ಆರ್ ಟಿ‌ಸಿ ಬಸ್ ಗೆ ಡಿಕ್ಕಿಯಾಗಿ ನಿಂತಿತ್ತು. ಇಲ್ಲದಿದ್ದರೆ ಮತ್ತಷ್ಟು ಸಾವು ನೋವು ಸಂಭವಿಸೊ ಸಾಧ್ಯತೆ ಕೂಡ ಇತ್ತು. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಮತ್ತು ಕುಟುಂಬಸ್ಥರು ಸಿಮೆಂಟ್ ಮೂಟೆ ರಸ್ತೆಗೆ ಅಡ್ಡಲಾಗಿ ಇಟ್ಟು ಪ್ರತಿಭಟನೆ ನಡೆಸಿದ್ದರು. ಲಾರಿ ಗಾಜನ್ನ ಪುಡಿ ಪುಡಿ ಮಾಡಿದ್ರು. ಇದರಿಂದಾಗಿ ನಾಯಂಡಹಳ್ಳಿ ಮತ್ತು ದೀಪಾಂಜಲಿನಗರ ಮಾರ್ಗವಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಗುಂಪು ಚದುರಿಸಲು ಬ್ಯಾಟರಾಯನಪುರ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:30 am, Mon, 3 April 23