ಮಂಡ್ಯ: ಸ್ಕ್ಯಾನಿಂಗ್ ಸೆಂಟರ್ ಮಹಾ ಎಡವಟ್ಟು; ಮಗಳ ಸ್ಥಿತಿ ನೋಡಿ ಕಣ್ಣೀರು ಹಾಕುತ್ತಿರುವ ಪೋಷಕರು
ಮಗುವಿನ ಸ್ಕ್ಯಾನಿಂಗ್ ವೇಳೆ ಸುಳ್ಳು ವರದಿ ಕೊಟ್ಟಿದ್ದ ಡಿಟು ಡಯಾಗ್ನೆಸ್ಟಿಕ್ ಸೆಂಟರ್, ಮಗು ಜನನವಾದ ಬಳಿಕ ಡೌನ್ ಸಿಂಡ್ರೋಮ್ ಹಾಗೂ ಹೃದಯ ಖಾಯಿಲೆ ಇರುವುದು ಪತ್ತೆಯಾಗಿದೆ.
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಗೋರವನಹಳ್ಳಿಯ ತಾಯಿ ಸಿಂಧುಶ್ರೀ ಗರ್ಭಿಣಿಯಿದ್ದಾಗ ಡಿಟು ಡಯಾಗ್ನೆಸ್ಟಿಕ್ ಸೆಂಟರ್ನಲ್ಲಿ ಮಗುವಿನ ಸ್ಕ್ಯಾನಿಂಗ್ ಮಾಡಿಸಿದ್ದರು. ಸ್ಕ್ಯಾನಿಂಗ್ನಲ್ಲಿ ಮಗು ಆರೋಗ್ಯವಾಗಿದೆ ಎಂದು ರಿಪೋರ್ಟ್ ಕೊಟ್ಟಿದ್ದಾರೆ. ಆದರೆ ಜನನವಾದ ಬಳಿಕ ಮಗುವಿಗೆ ಡೌನ್ ಸಿಂಡ್ರೋಮ್ ಹಾಗೂ ಹೃದಯ ಖಾಯಿಲೆ ಇರುವುದು ಬೆಳಕಿಗೆ ಬಂದಿದೆ. ಇದೀಗ ಡಯಾಗ್ನೆಸ್ಟಿಕ್ ಸೆಂಟರ್ ನೀಡಿದ ಸುಳ್ಳು ವರದಿಯಿಂದ ಮಗುವಿನ ತಂದೆ ತಾಯಿ ಪರಿತಪಿಸುವಂತಾಗಿದೆ.
ಇನ್ನು ಈ ಕುರಿತು ಮಗುವಿನ ದಂಪತಿಗಳು ಡಯಾಗ್ನೆಸ್ಟಿಕ್ ಸೆಂಟರ್ ವಿರುದ್ದ ಗ್ರಾಹರ ವೇದಿಕೆ ಮೊರೆ ಹೋಗಿದ್ದರು, ವಿಚಾರಣೆ ವೇಳೆ ಡಯಾಗ್ನೆಸ್ಟಿಕ್ ಸೆಂಟರ್ನ ಕಳ್ಳಾಟ ಬೆಳಕಿಗೆ ಬಂದಿದ್ದು, ಗ್ರಾಹಕರ ವೇದಿಕೆ ಡಯಾಗ್ನೆಸ್ಟಿಕ್ ಸೆಂಟರ್ಗೆ 15 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ತನ್ನ ಮೂರು ವರ್ಷದ ಮಗು ರುಚಿತಾಳ ಸ್ಥಿತಿ ನೋಡಿ ಕಣ್ಣೀರಾಕುತ್ತಿದ್ದಾರೆ ಪೋಷಕರು.
ನರಗುಂದ ಪಟ್ಟಣದಲ್ಲಿ ನೇಣು ಬಿಗಿದುಕೊಂಡು 4 ತಿಂಗಳ ಗರ್ಭಿಣಿ ಆತ್ಮಹತ್ಯೆ
ಗದಗ: ನರಗುಂದ ಪಟ್ಟಣದ 4 ತಿಂಗಳ ಗರ್ಭಿಣಿ ದೀಪಾ(22)ಅಲಿಯಾಸ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳನ್ನು ಕೊಲೆಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ. ಪತಿ ವಿನೋದ್, ಮಾವ ಯಲ್ಲಪ್ಪ, ಅತ್ತೆ ಯಲ್ಲವ್ವ ಸೇರಿ ನಾಲ್ವರ ವಿರುದ್ಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೃತ ದೀಪಾ ಮದುವೆ ಆಗಿ ಕೇವಲ ಎರಡೂವರೆ ವರ್ಷವಾಗಿದ್ದು, ಒಂದೂವರೆ ವರ್ಷದ ಮಗು ಕೂಡ ಇದೆ. ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ಏಕಾಎಕಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಳ ಪಾಲಕರು ವರದಕ್ಷಿಣೆ ಕಿರುಕುಳ ನೀಡಿದ್ದರು. ಇದೀಗ ಮಗಳನ್ನು ಹೊಡೆದು ಕೊಲೆಮಾಡಿ ನೇಣು ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪತಿ ವಿನೋದ, ಮಾವ ಯಲ್ಲಪ್ಪ, ಅತ್ತೆ ಯಲ್ಲವ್ವ ಸೇರಿ ನಾಲ್ಕು ಜನರ ಮೇಲೆ ಮೃತ ಕುಟುಂಬದಿಂದ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Mon, 5 December 22