ಪ್ರೀತಂಗೌಡ ಒಮ್ಮೆ ಶಾಸಕರಾದ ತಕ್ಷಣವೇ ದೇವರಲ್ಲ, ನಾನು ಕೂಡ ದೇವೇಗೌಡರ ಮನೆಗೆ ಹೋಗಿದ್ದೆ: ಸಚಿವ ಸೋಮಣ್ಣ

| Updated By: shivaprasad.hs

Updated on: Aug 10, 2021 | 11:40 AM

Preetham Gowda: ಶಾಸಕ ಪ್ರೀತಮ್ ಗೌಡ ತಮ್ಮ ಇತಿಮಿತಿಯನ್ನು ಅರಿತು ನಡೆಯಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. ಜೊತೆಗೆ ಆಗಸ್ಟ್ 15ರಂದು ಹೊಸ ಯೋಜನೆಯೊಂದನ್ನು ಘೋಷಿಸುವ ಸುಳಿವೊಂದನ್ನೂ ಅವರು ನೀಡಿದ್ದಾರೆ.

ಪ್ರೀತಂಗೌಡ ಒಮ್ಮೆ ಶಾಸಕರಾದ ತಕ್ಷಣವೇ ದೇವರಲ್ಲ, ನಾನು ಕೂಡ ದೇವೇಗೌಡರ ಮನೆಗೆ ಹೋಗಿದ್ದೆ: ಸಚಿವ ಸೋಮಣ್ಣ
ವಿ.ಸೋಮಣ್ಣ
Follow us on

ಪ್ರೀತಂಗೌಡ ಒಮ್ಮೆ ಶಾಸಕರಾದ ತಕ್ಷಣವೇ ದೇವರಲ್ಲ ಎಂದು ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ‘‘ನಾನು ಮೊದಲ ಬಾರಿಗೆ ಸಚಿವನಾದಾಗ ಪ್ರೀತಂ ಹುಟ್ಟಿರಲಿಲ್ಲ. ಎಚ್​.ಡಿ.ದೇವೇಗೌಡ ಕುಟುಂಬಕ್ಕೆ 50 ವರ್ಷದ ರಾಜಕೀಯ ಇತಿಹಾಸವಿದೆ. ನಾನು ಕೂಡ ಹೆಚ್.ಡಿ.ದೇವೇಗೌಡರ ಮನೆಗೆ ಹೋಗಿದ್ದೆ. ರಾಷ್ಟ್ರದ ಪ್ರಧಾನಿಗಳಾಗಿದ್ದವರು ಅವರು. ಶಾಸಕ ಪ್ರೀತಂಗೌಡ ಇತಿಮಿತಿಯಲ್ಲಿ ಇರಬೇಕು. ಒಂದು ಸಾರಿ ಎಂಎಲ್​ಎ ಆದ ತಕ್ಷಣ ದೇವರಲ್ಲ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಶಾಸಕ ಪ್ರೀತಂ ಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಮೇಲೆ ಎಚ್​.ಡಿ.ದೇವೇಗೌಡ ಅವರನ್ನು ಹೋಗಿ ಭೇಟಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘‘ಹೊಂದಾಣಿಕೆ ರಾಜಕೀಯ ಮಾಡುವುದಕ್ಕೆ ನಾನು ಬಿಡುವುದಿಲ್ಲ. ಆದರೂ ಹೊಂದಾಣಿಕೆ ರಾಜಕೀಯ ಮಾಡಿದರೆ ನಾನು ಮತದಾರನಾಗಿ ಮನೆಯಲ್ಲಿಯೇ ಇದ್ದುಬಿಡುತ್ತೇನೆ. ಇಲ್ಲವೇ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ. ಸಿಎಂ ನಡೆಯಿಂದ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ’’ ಎಂದು ಪ್ರೀತಂಗೌಡ ಹೇಳಿಕೆ ನೀಡಿದ್ದರು.

ಹೊಸ ಯೋಜನೆ ಘೋಷಿಸುವ ಬಗ್ಗೆ ವಿ.ಸೋಮಣ್ಣ ಸುಳಿವು:

‘‘ಸ್ವಾತಂತ್ರ್ಯ ದಿನಾಚರಣೆಯ ದಿನ ಹೊಸ ಯೋಜನೆ ಘೋಷಣೆ ಮಾಡುತ್ತಾರೆ. ಯಾರೂ ಯೋಚಿಸದ ರೀತಿಯಲ್ಲಿ ಜನಪರ ಯೋಜನೆಯನ್ನು ಘೋಷಿಸುತ್ತಾರೆ. 15-20 ದಿನದಲ್ಲಿ ಸರ್ಕಾರ ಟೇಕಾಫ್ ಆದ ಭಾವನೆ ಬರುತ್ತೆ’’ ಎಂದು ಇದೇ ವೇಳೆ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಖಾತೆ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುದ್ಧಿವಂತರಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಜೆಡಿಎಸ್​ ಜತೆ ಹೊಂದಾಣಿಕೆ ರಾಜಕೀಯ ಮಾಡಿದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ: ಶಾಸಕ ಪ್ರೀತಂಗೌಡ ಕಿಡಿಕಿಡಿ

ಮಾಜಿ ಪ್ರಧಾನಿಯನ್ನ ಸಿಎಂ ಸೌಜನ್ಯ ದೃಷ್ಟಿಯಿಂದ ಭೇಟಿ ಮಾಡಿದ್ದಾರೆ- ಶಾಸಕ ಪ್ರೀತಂಗೌಡ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ ತಿರುಗೇಟು

(MLA Preetham Gowda is not God says Karnataka Minister V Somanna)

Published On - 11:26 am, Tue, 10 August 21