AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಪ್ರಧಾನಿಯನ್ನ ಸಿಎಂ ಸೌಜನ್ಯ ದೃಷ್ಟಿಯಿಂದ ಭೇಟಿ ಮಾಡಿದ್ದಾರೆ- ಶಾಸಕ ಪ್ರೀತಂಗೌಡ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ ತಿರುಗೇಟು

ಆಲೂರು, ಸಕಲೇಶಪುರ ಭಾಗದಲ್ಲಿ ಭಾರಿ ಮಳೆಯಾಗಿದೆ. ಸತತ 4 ವರ್ಷದಿಂದ ಭಾರಿ ಮಳೆಯಿಂದ ಹಾನಿಯಾಗಿದೆ. ಜಿಲ್ಲಾಡಳಿತ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಟ್ಟಿದೆ. ಜಿಲ್ಲೆಯಲ್ಲಿ ಸುಮಾರು 300 ಕೋಟಿಯಷ್ಟು ಹಾನಿಯಾಗಿದೆ. ಆದರೆ ರಾಜ್ಯ ಸರ್ಕಾರ 20 ಕೋಟಿ ಕೊಟ್ಟಿರಬಹುದಷ್ಟೇ.

ಮಾಜಿ ಪ್ರಧಾನಿಯನ್ನ ಸಿಎಂ ಸೌಜನ್ಯ ದೃಷ್ಟಿಯಿಂದ ಭೇಟಿ ಮಾಡಿದ್ದಾರೆ- ಶಾಸಕ ಪ್ರೀತಂಗೌಡ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ ತಿರುಗೇಟು
HK Kumaraswamy said CM had met former Prime Minister with courtesy
TV9 Web
| Edited By: |

Updated on: Aug 08, 2021 | 11:51 AM

Share

ಹಾಸನ: ಮಾಜಿ ಪ್ರಧಾನಿಯನ್ನ ಮುಖ್ಯಮಂತ್ರಿ ಸೌಜನ್ಯ ದೃಷ್ಟಿಯಿಂದ ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದೆ ಪಕ್ಷ ಬರೋದಿಲ್ಲ. ಈ ರೀತಿಯಲ್ಲಿ ಪ್ರಶ್ನೆ ಮಾಡೋದು ಸಣ್ಣ ತನ. ಇದು ಅನುಭವದ ಕೊರತೆಯ ಮಾತು ಅಂತ ಶಾಸಕ ಪ್ರೀತಂಗೌಡ (Preetham Gowda) ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ (HK Kumaraswamy) ತಿರುಗೇಟು ನೀಡಿದ್ದಾರೆ. ದ್ವೇಶ ಬಿಟ್ಟಾಗ ಮಾತ್ರ ಸಮಾಜದಲ್ಲಿ ಮುಂದೆ ಬರೋಕೆ ಸಾಧ್ಯ. ಸಿಎಂ ಅವರು ಈ ರೀತಿಯ ಒತ್ತಡಗಳಿಗೆ ಬಲಿಯಾಗಬಾರದು. ಹಾಸನ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದ ಬಗ್ಗೆ ನಮಗೂ ಬೇಜಾರಿದೆ. ಕೊಡಗಿನಲ್ಲಿ ಬೋಪಯ್ಯ ಎಷ್ಟು ಹಿರಿಯರಿದ್ದಾರೆ. ಅವರಿಗೂ ಮಂತ್ರಿ ಸ್ಥಾನ ಸಿಗಬೇಕಿತ್ತು ಅಂತ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಅಭಿಪ್ರಾಯಪಟ್ಟಿದ್ದಾರೆ.

ಆಲೂರು, ಸಕಲೇಶಪುರ ಭಾಗದಲ್ಲಿ ಭಾರಿ ಮಳೆಯಾಗಿದೆ. ಸತತ 4 ವರ್ಷದಿಂದ ಭಾರಿ ಮಳೆಯಿಂದ ಹಾನಿಯಾಗಿದೆ. ಜಿಲ್ಲಾಡಳಿತ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಟ್ಟಿದೆ. ಜಿಲ್ಲೆಯಲ್ಲಿ ಸುಮಾರು 300 ಕೋಟಿಯಷ್ಟು ಹಾನಿಯಾಗಿದೆ. ಆದರೆ ರಾಜ್ಯ ಸರ್ಕಾರ 20 ಕೋಟಿ ಕೊಟ್ಟಿರಬಹುದಷ್ಟೇ. ಸರ್ಕಾರ ವರದಿ ತರಿಸಿಕೊಳ್ಳುತ್ತೆ ಪರಿಹಾರ ಕೊಡುವುದಿಲ್ಲ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ಹೆಚ್.ಕೆ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹಾಸನ ಜಿಲ್ಲೆಗೆ ಕೊರೊನಾ ಲಸಿಕೆ ಕೂಡ ಸರಿಯಾಗಿ ಬರ್ತಿಲ್ಲ. ಸಿಎಂ ಬೊಮ್ಮಾಯಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ರು. ಅದೇ ರೀತಿ ಹಾಸನ ಜಿಲ್ಲೆಯ ಬೆಳೆ ಹಾನಿ ಪ್ರದೇಶಕ್ಕೆ ಬರಲಿ. ಸಿಎಂ ಮಳೆ ಹಾನಿ ಪ್ರದೇಶ ಪರಿಶೀಲಿಸಲಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ 13 ಜಿಲ್ಲೆಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಕೇವಲ ಮೂವರು ದಲಿತರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದಾರೆ. ಈಗಿರುವ ಮಂತ್ರಿಮಂಡಲ ಮಹಿಳಾ, ದಲಿತ ವಿರೋಧಿಯಾಗಿದೆ. ದಲಿತ, ಮಹಿಳೆಯರನ್ನ ಕಡೆಗಣಿಸಿರುವುದಕ್ಕೆ ಇದು ಉದಾಹರಣೆ ಅಂತ ಶಾಸಕಿ ಪೂರ್ಣಿಮಾ ಪರ ಹೆಚ್.ಕೆ.ಕುಮಾರಸ್ವಾಮಿ ಬ್ಯಾಟಿಂಗ್ ಬೀಸಿದ್ದಾರೆ. ವಿಧಾನಸಭಾ ಕ್ಷೇತ್ರ ಜನಸಂಖ್ಯೆ ಆಧಾರದಲ್ಲಿ ಆಗಬಾರದು. ಭೌಗೋಳಿಕ ವಿಸ್ತೀರ್ಣ ಆಧಾರದಲ್ಲಿ ಕ್ಷೇತ್ರ ವಿಂಗಡಿಸಬೇಕು ಎಂದು ಹೇಳಿದರು.

ದೇಶದ ಬೇರೆ ಭಾಗದಲ್ಲಿ 30,000ಕ್ಕೆ ಒಬ್ಬರು ಶಾಸಕರಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಈ ಸಮಸ್ಯೆಯನ್ನು ಸರಿಪಡಿಸಬೇಕು. ತಕ್ಷಣವೇ ಇದನ್ನು ಮಾಡುವುದಕ್ಕೆ ಆಗಲ್ಲವೆಂದು ಗೊತ್ತಿದೆ. ಆದರೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಒತ್ತಾಯಿಸಿದ್ದಾರೆ.

ಇದನ್ನೂ ಓದಿ

ಸರ್ಕಾರಿ ಕಾರ್ಯಕ್ರಮಕ್ಕೆ ನಿರೂಪಕರನ್ನು ಬದಲಿಸಿ; ಸಿಎಂ ನಿವಾಸದ ಬಳಿ ಏಕಾಂಗಿಯಾಗಿ ಮಹಿಳೆ ಪ್ರತಿಭಟನೆ

ಕೇಳಿದ ಖಾತೆ ನೀಡಿಲ್ಲವೆಂದು ಆನಂದ್ ಸಿಂಗ್ ಅಸಮಾಧಾನ; ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಸಚಿವ

(HK Kumaraswamy said CM had met former Prime Minister with courtesy)