AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಉತ್ಸವದಲ್ಲಿ ಅಡ್ಡಪಲ್ಲಕ್ಕಿ ಹೊತ್ತು ಮಹಿಳೆಯರ ಕ್ರಾಂತಿ; ಹೊಸ ಸಂಪ್ರದಾಯಕ್ಕೆ ನಾಂದಿ

ಈ ಮೂಲಕ ಮಹಿಳೆಯರು ತಾವು ಧಾರ್ಮಿಕ ಕಾರ್ಯಕ್ಕೂ ಸೈ ಎನ್ನುವುದನ್ನು ಸಾಬೀತುಮಾಡಿದ್ದಾರೆ. ಸಮಿತಿಯ ಸದಸ್ಯರು ಕೂಡ ಮಹಿಳೆಯರಿಗೆ ಸಾಥ್ ನೀಡುವ ಮೂಲಕ ಬೆಂಬಲ ನೀಡಿದ್ದಾರೆ.

ಹಾಸನ: ಉತ್ಸವದಲ್ಲಿ ಅಡ್ಡಪಲ್ಲಕ್ಕಿ ಹೊತ್ತು ಮಹಿಳೆಯರ ಕ್ರಾಂತಿ; ಹೊಸ ಸಂಪ್ರದಾಯಕ್ಕೆ ನಾಂದಿ
ಪಲ್ಲಕ್ಕಿ ಹೊತ್ತ ಮಹಿಳೆಯರು
TV9 Web
| Edited By: |

Updated on: Aug 08, 2021 | 9:26 PM

Share

ಹಾಸನ: ಸಮಾಜದಲ್ಲಿ ಮಹಿಳೆಯರು ಎಷ್ಟೇ ಎತ್ತರಕ್ಕೇರಿದ್ರೂ ಕೆಲವೊಂದು ಧಾರ್ಮಿಕ ಕಾರ್ಯಮಾಡಲು ಅವರಿಗೆ ಕಟ್ಟಳೆಗಳಿವೆ. ಕೆಲವು ಧಾರ್ಮಿಕ ವಿಧಿವಿಧಾನಗಳಲ್ಲಿ ಮಹಿಳೆಯರು ಭಾಗವಹಿಸುವುದು ನಿಷಿದ್ಧ. ಆದರೆ, ಅದನ್ನೂ ಮೀರಿ ಕ್ರಾಂತಿ ಮಾಡೋ ಕೆಲವರು ತಾವೂ ಯಾರಿಗು ಕಡಿಮೆಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಾರೆ.

ದೇವರ ಉತ್ಸವಗಳಲ್ಲಿ ಅಡ್ಡಪಲ್ಲಕ್ಕಿ ಹೊರುವುದು ಸಾಮಾನ್ಯವಾಗಿ ಪುರುಷರು. ಆದರೆ, ಹಾಸನ‌ ಜಿಲ್ಲೆ ಅರಕಲಗೂಡು ತಾಲ್ಲೂಕಿನ‌ ಕೊಣನೂರಿನಲ್ಲಿ ಮಹಿಳೆಯರೇ ಶಿವ ಪಾರ್ವತಿಯರ ಅಡ್ಡಪಲ್ಲಕ್ಕಿ ಹೊತ್ತು ಗಮನ ಸೆಳೆದಿದ್ದಾರೆ. ಕೊಣನೂರಿನ ಆರ್ಯವೈಶ್ಯ ಮಂಡಳಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿತ್ತು.

ಈ ವೇಳೆ‌ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಭಕ್ತರು ಭಾಗಿಯಾಗಿದ್ದಾರೆ. ಆದರೆ, ಗಿರಿಜಾ ಕಲ್ಯಾಣ ನೆರವೇರಿದ ಬಳಿಕ ನಡೆಯೋ ಅಡ್ಡ ಪಲ್ಲಕ್ಕಿ ಉತ್ಸವ ಈಬಾರಿ ಮಾಮೂಲಿನಂತರಲಿಲ್ಲ. ಇದೇ ಮೊದಲ ಬಾರಿಗೆ ಅಡ್ಡ ಪಲ್ಲಕ್ಕಿಗೆ ಮಹಿಳೆಯರು ಹೆಗಲು ಕೊಟ್ಟಿದ್ದಾರೆ. ತಾವೇ ಶಿವ ಪಾರ್ವತಿಯರ ಉತ್ಸವ ಮೂರ್ತಿಗಳನ್ನ ಹೊತ್ತು ಊರ ಬೀದಿ ಬೀದಿಯಲ್ಲಿ ಮೆರವಣಿಗೆ ನಡೆಸಿದ್ದಾರೆ.

ಈ ಮೂಲಕ ಮಹಿಳೆಯರು ತಾವು ಧಾರ್ಮಿಕ ಕಾರ್ಯಕ್ಕೂ ಸೈ ಎನ್ನುವುದನ್ನು ಸಾಬೀತುಮಾಡಿದ್ದಾರೆ. ಸಮಿತಿಯ ಸದಸ್ಯರು ಕೂಡ ಮಹಿಳೆಯರಿಗೆ ಸಾಥ್ ನೀಡುವ ಮೂಲಕ ಬೆಂಬಲ ನೀಡಿದ್ದಾರೆ.

ವರದಿ: ಮಂಜುನಾಥ್ ಕೆಬಿ, ಹಾಸನ

ಇದನ್ನೂ ಓದಿ: ಹಾಸನ: ಕೇರಳ ಮೂಲದ 102 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ದೃಢ

Corona Vaccine Shortage: ಕೊವಿಡ್ ಲಸಿಕೆ ಸಿಗದೆ ರೊಚ್ಚಿಗೆದ್ದ ಸಾರ್ವಜನಿಕರು, ಹಾಸನ ಡಿಸಿ ಮನೆಗೆ ಮುತ್ತಿಗೆ

(Hassan Womans participate in Adda Pallakki Uthsava Festival in Hassan)