22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ವೀರ ಯೋಧನಿಗೆ ಭರ್ಜರಿ ಸ್ವಾಗತ; ಪುಷ್ಪಾರ್ಚನೆ, ಜೈಕಾರ ಕೂಗಿದ ಜನ

ಹಾನುಬಾಳು ಹೋಬಳಿಯ ಹುನುಮನಹಳ್ಳಿ ಗ್ರಾಮದ ಹೆಚ್‌.ಕೆ. ಲಕ್ಷ್ಮಣಗೌಡ ಅವರ ಪುತ್ರ ಹೆಚ್‌.ಎಲ್‌. ಹಿರಣ್ಣಯ್ಯ ಬಿಎಸ್‌ಎಫ್‌ ನಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ನೆನ್ನೆ ತವರಿಗೆ ಹಿಂದಿರುಗಿದರು. ಬರೊಬ್ಬರಿ 22 ವರ್ಷ ಭಾರತೀಯ ಸೇನೆಯಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿ ತವರಿಗೆ ಬರೋದು ಅಂದ್ರೆ ಮರು ಹುಟ್ಟು ಪಡೆದಂತೆ ಹಾಗಾಗಿಗೇ ಅವರ ಆಗಮನ ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು.

22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ವೀರ ಯೋಧನಿಗೆ ಭರ್ಜರಿ ಸ್ವಾಗತ; ಪುಷ್ಪಾರ್ಚನೆ, ಜೈಕಾರ ಕೂಗಿದ ಜನ
22 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ವೀರ ಯೋಧನಿಗೆ ಭರ್ಜರಿ ಸ್ವಾಗತ
Follow us
TV9 Web
| Updated By: ಆಯೇಷಾ ಬಾನು

Updated on: Aug 08, 2021 | 9:53 AM

ಹಾಸನ: ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಹಿಂತಿರುಗಿದ ವೀರ-ಯೋಧನಿಗೆ ಜನರು ಭವ್ಯ ಸ್ವಾಗತ ಕೋರಿದ್ದಾರೆ. ವೀರ ಯೋಧನ ಪರ ಘೋಷಣೆ ಮೊಳಗಿಸುತ್ತಾ ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಮಾಡಿ ಸಂಭ್ರಮಿಸಿದರು. ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮಕ್ಕೆ ನಿನ್ನೆ ಆಗಮಿಸಿದ ಯೋಧ ಹೆಚ್.ಎಲ್ ಹಿರಣ್ಣಯ್ಯ ಕಂಡು ಊರಿಗೆ ಊರೇ ಸಂಭ್ರಮಿಸಿತ್ತು.

ಹಾನುಬಾಳು ಹೋಬಳಿಯ ಹುನುಮನಹಳ್ಳಿ ಗ್ರಾಮದ ಹೆಚ್‌.ಕೆ. ಲಕ್ಷ್ಮಣಗೌಡ ಅವರ ಪುತ್ರ ಹೆಚ್‌.ಎಲ್‌. ಹಿರಣ್ಣಯ್ಯ ಬಿಎಸ್‌ಎಫ್‌ ನಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ನೆನ್ನೆ ತವರಿಗೆ ಹಿಂದಿರುಗಿದರು. ಬರೊಬ್ಬರಿ 22 ವರ್ಷ ಭಾರತೀಯ ಸೇನೆಯಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿ ತವರಿಗೆ ಬರೋದು ಅಂದ್ರೆ ಮರು ಹುಟ್ಟು ಪಡೆದಂತೆ ಹಾಗಾಗಿಗೇ ಅವರ ಆಗಮನ ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು. ಗ್ರಾಮದ ಜನರು ಬಂಧುಗಳು, ಸ್ನೇಹಿತರೆಲ್ಲಾ ಸೇರಿ ಭವ್ಯ ಸ್ವಾಗತ ಕೋರಿ ವೀರ ಸೇನಾನಿಯ ಸೇವೆಯನ್ನ ಕೊಂಡಾಡಿದ್ರು. ಇನ್ನು 22 ವರ್ಷ ಮನೆಯಿಂದ ದೂರವಿದ್ದು ದೇಶಕ್ಕಾಗಿ ಬದುಕಿದ್ದ ಮನೆ ಮಗ ಮನೆಗೆ ಬಂದಾಗ ಮನೆಯಲ್ಲಿ ಸಂಭ್ರಮ‌ ಸಡಗರ ಮೇಳೈಸಿತ್ತು. ಎಲ್ಲೆಲ್ಲೂ ಹೂವ ಚೆಲ್ಲಿ ಭಾರತ್ ಮಾತಾಕಿ‌ ಜೈ ಎಂದು ಕೊಂಡಾಡಿ ಮನೆಗೆ ಬರಮಾಡಿಕೊಂಡರು.

ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಸಕಲೇಶಪುರದಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದ ಹಿರಣ್ಣಯ್ಯ ರವರು 2000 ನೇ ಇಸವಿಯಲ್ಲಿ ಬಿಎಸ್ಎಫ್ ಗಡಿ‌ಭದ್ರತಾಪಡೆಗೆ ಸೇರಿದ್ರು, ಬಹುತೇಕ‌ ಸಮಯ ಉಗ್ರರ‌ ಕರಿನೆರಳಿನಲ್ಲೇ‌ ಕೆಲಸ ಮಾಡಿ ದುಷ್ಟರ ಸಂಹಾರ ಮಾಡಿ ವಿಜಯಿಯಾಗಿ ಈಗ ತವರಿಗೆ ಮರಳಿದ್ದಾರೆ. ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ್, ಪಂಜಾಬ್‌, ಗುಜರಾತ್‌, ರಾಜಸ್ತಾನ್‌, ದೆಹಲಿ, ಮಣಿಪುರ ಗಳಲ್ಲಿ ಸೇವೆ ಸಲ್ಲಿಸಿ ಈಗ ಹುಟ್ಟೂರಿಗೆ ಮರಳಿದ್ದಾರೆ.

bsf soldier

ಗ್ರಾಮದ ಜನರು ಬಂಧುಗಳು, ಸ್ನೇಹಿತರೆಲ್ಲಾ ಸೇರಿ ಭವ್ಯ ಸ್ವಾಗತ ಕೋರಿ ವೀರ ಸೇನಾನಿಯ ಸೇವೆಯನ್ನ ಕೊಂಡಾಡಿದ್ರು

bsf soldier

ಹೆಚ್‌.ಎಲ್‌. ಹಿರಣ್ಣಯ್ಯ ಬಿಎಸ್‌ಎಫ್‌ ನಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ನೆನ್ನೆ ತವರಿಗೆ ಹಿಂದಿರುಗಿದರು

ಇದನ್ನೂ ಓದಿ: Pulwama Encounter: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಪುಲ್ವಾಮಾ ದಾಳಿಯ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ