ಎಲೆಕ್ಟ್ರಿಕ್ ಬಿಲ್ ಕಟ್ಟಿಲ್ಲ ಅಂದ್ರೆ ಬಿಡಲ್ಲ; ಗಣಿಗಾರಿಕೆಯಲ್ಲಿ ನೂರಾರು ಕೋಟಿ ಕಟ್ಟಿಲ್ಲ ಅಂದರೆ ಏಕೆ ಬಿಡ್ತೀರಿ: ಸಂಸದೆ ಸುಮಲತಾ ಗರಂ

Sumalatha Ambareesh: ಒಂದು ಸಾವಿರ ರೂಪಾಯಿ ಎಲೆಕ್ಟ್ರಿಕ್ ಬಿಲ್ ಕಟ್ಟಿಲ್ಲ ಅಂದರೆ ಬಿಡಲ್ಲ. ಗಣಿಯಲ್ಲಿ ನೂರಾರು ಕೋಟಿ ಕಟ್ಟಿಲ್ಲ ಎಂದರೆ ಏಕೆ ಬಿಡ್ತೀರಿ? ಸರ್ಕಾರದ ಹಣವನ್ನು ನೀವು ಏಕೆ ವಸೂಲಿ‌ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲೆಕ್ಟ್ರಿಕ್ ಬಿಲ್ ಕಟ್ಟಿಲ್ಲ ಅಂದ್ರೆ ಬಿಡಲ್ಲ; ಗಣಿಗಾರಿಕೆಯಲ್ಲಿ ನೂರಾರು ಕೋಟಿ ಕಟ್ಟಿಲ್ಲ ಅಂದರೆ ಏಕೆ ಬಿಡ್ತೀರಿ: ಸಂಸದೆ ಸುಮಲತಾ ಗರಂ
ಸುಮಲತಾ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Aug 18, 2021 | 5:03 PM

ಮಂಡ್ಯ: ಸಕ್ರಮ ಗಣಿಗಾರಿಕೆ ನಿಲ್ಲಿಸಿರುವುದಕ್ಕೆ ಜನರು ಬೈಯ್ಯುತ್ತಿದ್ದಾರೆ. ಜನ ನಮ್ಮನ್ನು, ಸಂಸದರನ್ನು ಕೂಡ ಬೈಯುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ದಿಶಾ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಂಸದೆ ಸುಮಲತಾ ಅಂಬರೀಶ್, ಸಭೆಯಲ್ಲಿ ಗಂಭೀರವಾದ ವಿಷಯದ ಬಗ್ಗೆ ಚರ್ಚೆ ಆಗುತ್ತಿದೆ. ಕೆಲವೊಂದು ಹೇಳಿಕೆಗಳಿಂದ ಪರ್ಸನಲ್ ಆಗುವುದು ಬೇಡ. ನನ್ನ ಹೋರಾಟ ಅಕ್ರಮ ಗಣಿಗಾರಿಕೆ ವಿರುದ್ಧ ಮಾತ್ರ. ಸಕ್ರಮವಾಗಿ ಇರುವ ಗಣಿಗಾರಿಕೆಗೆ ನನ್ನ ತಕರಾರು ಇಲ್ಲ. ಸಕ್ರಮವಾಗಿ ಇರುವ ಗಣಿಗಾರಿಕೆ ನಡೆದುಕೊಂಡು ಹೋಗಲಿ. ಸಕ್ರಮವಾಗಿ ಇರುವುದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಕ್ರಮ ಗಣಿಗಾರಿಕೆ ಮಾಡುವವರ ವಿರುದ್ಧ ಕ್ರಮ ಜರುಗಿಸಿಲ್ಲ. ಯಾರೊಬ್ಬರನ್ನೂ ಜೈಲಿಗೆ ಕಳುಹಿಸುವ ಕೆಲಸವಾಗಿಲ್ಲ ಎಂದು ಗಣಿ ಅಧಿಕಾರಿ ಪದ್ಮಜ ವಿರುದ್ಧ ಸಂಸದೆ ಸುಮಲತಾ, ಶಾಸಕರು ಗರಂ ಆಗಿದ್ದಾರೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಏನು ಕ್ರಮ ಆಗಿದೆ. ಯಾವುದೇ ಸಭೆಯಲ್ಲೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಸರಿಯಾದ ಮಾಹಿತಿ ತೆಗೆದುಕೊಂಡು ಏಕೆ ಸಭೆಗೆ ಬರಲ್ಲ ಎಂದು ಅಧಿಕಾರಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಗರಂ ಆಗಿದ್ದಾರೆ.

ಒಂದು ಸಾವಿರ ರೂಪಾಯಿ ಎಲೆಕ್ಟ್ರಿಕ್ ಬಿಲ್ ಕಟ್ಟಿಲ್ಲ ಅಂದರೆ ಬಿಡಲ್ಲ. ಗಣಿಯಲ್ಲಿ ನೂರಾರು ಕೋಟಿ ಕಟ್ಟಿಲ್ಲ ಎಂದರೆ ಏಕೆ ಬಿಡ್ತೀರಿ? ಸರ್ಕಾರದ ಹಣವನ್ನು ನೀವು ಏಕೆ ವಸೂಲಿ‌ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಮಧ್ಯೆ, ಟ್ರಯಲ್ ಬ್ಲಾಸ್ಟ್‌ಗೆ ಮಂಡ್ಯ ಜೆಡಿಎಸ್ ಶಾಸಕರ ಒತ್ತಾಯ ಮಾಡಿದ್ದಾರೆ. ಕೆಆರ್‌ಎಸ್‌ಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಟ್ರಯಲ್ ಬ್ಲಾಸ್ಟ್ ಮಾಡಿ ಸಮಸ್ಯೆಯನ್ನು ಅರಿಯಬೇಕು. ಬ್ಲಾಸ್ಟ್‌ನಿಂದ ಕೆಆರ್​ಎಸ್​ಗೆ ತೊಂದರೆ ಇದ್ಯಾ, ಇಲ್ವಾ ತಿಳಿಯಬೇಕು. ಎಷ್ಟು ದಿನ ಎಂದು ಈ ವಿಚಾರವನ್ನು ಗೌಪ್ಯವಾಗಿಡುತ್ತೀರಿ. ಗೌಪ್ಯವಾಗಿಟ್ಟು ಏಕೆ ಬ್ಲ್ಯಾಕ್‌ಮೇಲ್ ಮಾಡುತ್ತೀರಿ. ಟ್ರಯಲ್ ಬ್ಲಾಸ್ಟ್ ಬಗ್ಗೆ ಸಭೆಯಲ್ಲಿ ಸ್ಪಷ್ಟ ನಿರ್ಧಾರವಾಗಲಿ ಎಂದು ಮಂಡ್ಯದಲ್ಲಿ ನಡೆಯುತ್ತಿರುವ ದಿಶಾ ಸಭೆಯಲ್ಲಿ ಜೆಡಿಎಸ್ ಶಾಸಕರು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪವಾಗಿದೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಎಂದು ಗಣಿಗಾರಿಕೆ ನಿಲ್ಲಿಸಿದ್ದೀರಿ. ಎಲ್ಲಾ ಅಭಿವೃದ್ದಿ ಕೆಲಸಗಳು ನಿಂತಿವೆ ಮೆಟಿರಿಯಲ್ಸ್​ನ್ನು ಜಿಲ್ಲಾಡಳಿತವೇ ಪೂರೈಕೆ ಮಾಡುತ್ತಾ. ಜಿಲ್ಲೆಯಲ್ಲಿ ಲೀಗಲ್ ಆಗಿ ನಡೆಯುತ್ತಿರೊ ಗಣಿಗಾರಿಕೆ ಎಷ್ಟಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪದ್ಮಜ ಅವರಿಗೆ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಕೇಳಿದ್ದಾರೆ.

ಜಿಲ್ಲೆಯಲ್ಲಿ 95 ಗಣಿಗಾರಿಕೆ ಲೀಗಲ್ ಆಗಿ ನಡೀತಿವೆ ಎಂದು ಅಧಿಕಾರಿ ಪದ್ಮಜ ಸಭೆಗೆ ಉತ್ತರಿಸಿದ್ದಾರೆ. ಜಿಲ್ಲೆಯಲ್ಲಿ 95 ಗಣಿಗಾರಿಕೆ ಕಾನೂನಾತ್ಮಕವಾಗಿ ನಡೀತಿವೆ ಎಂದ ಮೇಲೆ ಯಾವ ಆಧಾರದ ಮೇಲೆ ಗಣಿಗಾರಿಕೆ ನಿಲ್ಲಿಸಿದ್ದೀರಿ ಎಂದು ಶಾಸಕರು ಮರುಪ್ರಶ್ನೆ ಹಾಕಿದ್ದಾರೆ. ಇಲ್ಲ ಸರ್, ಕಾನೂನಾತ್ಮಕವಾಗಿ ನಡೀತಿರೊ ಗಣಿಗಾರಿಕೆ ನಾವು ನಿಲ್ಲಿಸಿಲ್ಲ ಎಂದು ಅಧಿಕಾರಿ ಪದ್ಮಜ ಉತ್ತರಿಸಿದ್ದಾರೆ. ನಾಗಮಂಗಲದಲ್ಲಿ 33 ಗಣಿಗಾರಿಕೆಗಳು ಲೀಗಲ್ ಇವೆ. ಶ್ರೀರಂಗಪಟ್ಟಣದಲ್ಲಿ 16 ಗಣಿಗಾರಿಕೆ ಲೀಗಲ್ ಆಗಿ ಇವೆ ಎಂದು ಅಧಿಕಾರಿ ಪದ್ಮಜ ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯ: ದಿಶಾ ಸಭೆ ಆರಂಭದಲ್ಲೇ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್, ಸುಮಲತಾ ಸಿಬ್ಬಂದಿ ವಿರುದ್ಧ ಗರಂ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅಪಸ್ವರ

Published On - 5:01 pm, Wed, 18 August 21