ಹಿಜಾಬ್​ಗಾಗಿ ವರ್ಷದ ಶಿಕ್ಷಣವನ್ನೆ ಬಲಿಕೊಟ್ಟ ಮುಸ್ಕಾನ್; ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಬಳಿಕ ಕಾಲೇಜಿನತ್ತ ಮುಖವೇ ಹಾಕಿಲ್ಲ

| Updated By: ಆಯೇಷಾ ಬಾನು

Updated on: Apr 07, 2022 | 7:49 AM

ಮುಸ್ಕಾನ್ ಹಿಜಾಬ್ಗಾಗಿ ವರ್ಷದ ಶಿಕ್ಷಣವನ್ನೆ ಬಲಿಕೊಟ್ಟಿದ್ದಾಳೆ. ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಬಳಿಕ, ಆಕೆ ವೈರಲ್ ಆಗುತ್ತಿದ್ದಂತೆ ಮುಸ್ಕಾನ್ ಕಾಲೇಜಿಗೆ ಗೈರಾಗಿದ್ದಾಳೆ. ಮುಸ್ಕಾನ್ ಕಾಲೇಜಿನಲ್ಲಿ ಹಿಜಾಬ್ ಗಾಗಿ ಅವಕಾಶ ಕೇಳಿದ್ದಳು.

ಹಿಜಾಬ್​ಗಾಗಿ ವರ್ಷದ ಶಿಕ್ಷಣವನ್ನೆ ಬಲಿಕೊಟ್ಟ ಮುಸ್ಕಾನ್; ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಬಳಿಕ ಕಾಲೇಜಿನತ್ತ ಮುಖವೇ ಹಾಕಿಲ್ಲ
ವಿದ್ಯಾರ್ಥಿನಿ ಮುಸ್ಕಾನ್
Follow us on

ಮಂಡ್ಯ: ಕರುನಾಡಿಗೆ ಕರುನಾಡನ್ನೇ ಹೊತ್ತಿ ಉರಿಯುವಂತೆ ಮಾಡಿ, ಶಾಲೆ ಕಾಲೇಜುಗಳಲ್ಲಿ ಧರ್ಮ ಸಂಘರ್ಷದ ಕಿಡಿ ಹೊತ್ತಿಸಿದ ಹಿಜಾಬ್ ಗದ್ದಲದಲ್ಲಿ ಮಂಡ್ಯದ ವಿದ್ಯಾರ್ಥಿನಿಗೆ ಮುಸ್ಕಾನ್ ಹೆಸರು ಹೆಚ್ಚಾಗಿ ಕೇಳಿ ಬಂದಿತ್ತು. ಈಕೆಯ ಘೋಷಣೆ ಕೂಗು ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೆ ಅಚ್ಚರಿ ಎಂಬಂತೆ ಮೊಸ್ಟ್ ವಾಟೆಂಡ್ ಉಗ್ರನೊಬ್ಬ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯಲ್ಲಿ ಮೂಗು ತೂರಿಸಿ, ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಅಂತಾ ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದ. ಆದ್ರೆ ಈ ವಿವಾದದಿಂದಾಗಿ ಮುಸ್ಕಾನ್ ಭವಿಷ್ಯ ಅತಂತ್ರವಾಗಿದೆ.

ಮುಸ್ಕಾನ್ ಹಿಜಾಬ್ಗಾಗಿ ವರ್ಷದ ಶಿಕ್ಷಣವನ್ನೆ ಬಲಿಕೊಟ್ಟಿದ್ದಾಳೆ. ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಬಳಿಕ, ಆಕೆ ವೈರಲ್ ಆಗುತ್ತಿದ್ದಂತೆ ಮುಸ್ಕಾನ್ ಕಾಲೇಜಿಗೆ ಗೈರಾಗಿದ್ದಾಳೆ. ಮುಸ್ಕಾನ್ ಕಾಲೇಜಿನಲ್ಲಿ ಹಿಜಾಬ್ ಗಾಗಿ ಅವಕಾಶ ಕೇಳಿದ್ದಳು. ಹಿಜಾಬ್ಗೆ ಅವಕಾಶ ಸಿಗದಿದ್ದಕ್ಕೆ ಪರೀಕ್ಷೆಗೂ ಗೈರಾಗಿದ್ದಾಳೆ. ಮುಂದೆ ಹಿಜಾಬ್ ಅವಕಾಶ ಇರುವ ಕಾಲೇಜಿಗೆ ಸೇರುವ ಪ್ಲಾನ್ ಮಾಡಿಕೊಂಡಿದ್ದಾಳೆ. ಸದ್ಯ ಶಿಕ್ಷಣದಿಂದ ವಂಚಿತಳಾಗಿ ಮನೆಯಲ್ಲೆ ಕುಳಿತಿದ್ದಾಳೆ. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಕಾರ ಮಾಡುತ್ತಿರುವ ಮುಸ್ಕಾನ್ನ ಘೋಷಣೆಗೆ ಅಲ್ ಕೈದಾ ಉಗ್ರ ಸಂಘಟನೆ ಮುಖಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

ಸದ್ಯ ಅಲ್ ಕೈದಾ ಉಗ್ರ ಸಂಘಟನೆ ಮುಖಂಡನ ಹೇಳಿಕೆ ಸಂಬಂಧ ಮಾತನಾಡಿರುವ ಮುಸ್ಕಾನ್ ತಂದೆ, ಈ ರೀತಿ ಹೇಳಿಕೆಯನ್ನ ಕೊಟ್ಟಿರುವುದು ತಪ್ಪು. ನಾವು ಇಲ್ಲಿ ಅಣ್ಣತಮ್ಮಂದಿರ ರೀತಿ ಬದುಕುತ್ತಿದ್ದೇವೆ. ನಮ್ಮ ನಮ್ಮಲ್ಲಿ ಜಗಳ ತಂದಿಡಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ನಮ್ಮ ದೇಶದಲ್ಲಿ ನಾವು ನೆಮ್ಮದಿಯಾಗಿದ್ದೇವೆ. ಅವರ ದೇಶ ಅವರು ನೋಡಿಕೊಳ್ಳಲ್ಲಿ. ನಮಗೆ ಯಾವ ಅಲ್ ಕೈದಾ ಸಂಘಟನೆಯು ಗೊತ್ತಿಲ್ಲ ಎಂದು ಮುಸ್ಕಾನ್ ತಂದೆ ಮೊಹಮದ್ ಹುಸೇನ್ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದ ಮುಸ್ಕಾನ್ಗೆ ಅಲ್-ಖೈದಾ ಉಗ್ರನ ಬಹುಪರಾಕ್
ಜಗತ್ತಿನ ಮೋಸ್ಟ್ ವಾಂಟೆಡ್ ಅಲ್-ಖೈದಾ ಸಂಘಟನೆಯ ಮುಖ್ಯಸ್ಥ ಮುಸ್ಕಾನ್ನನ್ನ ಹೊಗಳಿ ಕವಿತೆಯನ್ನೆ ಬರೆದಿದ್ದಾನೆ. ಬಿನ್ ಲಾಡೆನ್ ಹತ್ಯೆ ಬಳಿಕ ಅಲ್ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾದ ಅಯ್ಮಾನ್ ಅಲ್ ಜವಾಹಿರಿ ಒಟ್ಟು 8 ನಿಮಿಷದ ವಿಡಿಯೋ ಬಿಟ್ಟಿದ್ದಾನೆ. ಭಾರತದ ಪ್ರಜಾಪ್ರಭತ್ವ ಅನ್ಯ ಧರ್ಮ ಸಹಿಸಿಕೊಳ್ಳದ ಫೇಕ್ ಡೆಮಾಕ್ರಸಿ ಎಂದಿದ್ದಾನೆ. ತಾನು ಸಾಹಿತಿ ಅಲ್ಲ. ಆದ್ರೂ ಮುಸ್ಕಾನ್ ಅಲ್ಲಾ ಹು ಅಕ್ಬರ್ ಅಂತಾ ಕೂಗಿದ್ದನ್ನ ನೋಡಿ, ಕವನ ಬರೆಯುತ್ತಿದ್ದೇ ಅಂತಾ ಹೇಳಿರೋ ಈ ಪಾಪಿ. ಮುಸ್ಕಾನ್ ಇಸ್ಲಾಂನ ಮಗಳು. ಮುಸ್ಲಿಮರ ಹೆಮ್ಮೆ ಎಂದಿದ್ದಾನೆ.

ಆಕೆಯ ಕೂಗು ಅನೈತಿಕತೆಯ ಹೊಲಸಿನಲ್ಲಿ ಮುಗಳುತ್ತಿರೋ ಜಗತ್ತಿನಲ್ಲಿ ನೈತಿಕ ಶಿಖರವಂತೆ. ಮುಸ್ಕಾನ್ ಕೂಗು ನಾಸ್ತಿಕರಿಗೆ ಸಾವಿನ ಗಂಟೆ. ಮುಸ್ಕಾನ್ ಮೂರ್ತಿಗಳನ್ನ ಧ್ವಂಸ ಮಾಡುವ ಕೊಡಲಿ, ವಕ್ರಗಳನ್ನ ಸರಿಪಡಿಸೋ ಕತ್ತಿಯಂತೆ.

ಇದನ್ನೂ ಓದಿ: ಹಲಾಲ್ ವಿವಾದ ಬೆನ್ನಲ್ಲೆ ಹಿಂದೂಪರ ಸಂಘಟನೆಗಳಿಂದ ಮತ್ತೊಂದು ಪ್ಲಾನ್; ಕಾನೂನು ಸಮರಕ್ಕೆ ರೂಪುರೇಷೆ ಸಿದ್ಧ

ನಾವೆಲ್ಲ ಮೊದಲಿನ ಹಾಗೆಯೇ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಜೀವಿಸೋಣ ಎಂದರು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್

Published On - 7:43 am, Thu, 7 April 22