ಹಿಂದೂ ಬಾಲಕಿ ಜೊತೆ ಅನ್ಯ ಧರ್ಮಿಯ ಯುವಕ ಪರಾರಿ: ಲವ್​ ಜಿಹಾದ್​​ ಆರೋಪ

ಯುವಕ ಸೈಯದ್ ತಬ್ರೀಜ್ (19 ವರ್ಷ) ಜೊತೆ 15 ವರ್ಷದ ಅಪ್ರಾಪ್ತ ಹಿಂದೂ ಬಾಲಕಿ ಓಡಿಹೋಗಿದ್ದು, ಲವ್​ ಜಿಹಾದ್​​ ನಡೆದಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿವೆ. ಯುವಕ ಮತ್ತು ಬಾಲಕಿ ಕೆ.ಆರ್.ಪೇಟೆ ಪಟ್ಟಣದ ನಿವಾಸಿಗಳು ಎಂದು ತಿಳಿದು ಬಂದಿದೆ.

ಹಿಂದೂ ಬಾಲಕಿ ಜೊತೆ ಅನ್ಯ ಧರ್ಮಿಯ ಯುವಕ ಪರಾರಿ: ಲವ್​ ಜಿಹಾದ್​​ ಆರೋಪ
ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ
Edited By:

Updated on: Jan 15, 2024 | 11:48 AM

ಮಂಡ್ಯ, ಜನವರಿ 15: ಯುವಕ ಸೈಯದ್ ತಬ್ರೀಜ್ (19 ವರ್ಷ) ಜೊತೆ 15 ವರ್ಷದ ಅಪ್ರಾಪ್ತ ಹಿಂದೂ ಬಾಲಕಿ ಓಡಿಹೋಗಿದ್ದು, ಲವ್​ ಜಿಹಾದ್ (Love Jihad)​​ ನಡೆದಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿವೆ. ಯುವಕ ಮತ್ತು ಬಾಲಕಿ ಕೆ.ಆರ್.ಪೇಟೆ (KR Pete) ಪಟ್ಟಣದ ನಿವಾಸಿಗಳು ಎಂದು ತಿಳಿದು ಬಂದಿದೆ. ಯುವಕ ಸೈಯದ್​ ತಬ್ರೀಜ್​ ಮತ್ತು ಬಾಲಕಿ ಜನವರಿ 12 ರಂದು ಓಡಿ ಹೋಗಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಬಾಲಕಿ ಪೋಷಕರು ಕೆ.ಆರ್​ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಸಿದ್ದರು. ದೂರಿನ ಬಳಿಕ ಪೊಲೀಸರು ಇಬ್ಬರಿಗಾಗಿ ಕಾರ್ಯಾಚರಣೆ ನಡೆಸಿದ್ದು, ಜನವರಿ 13 ರಂದು ಬಾಲಕಿ ಹಾಗೂ ಯುವಕನನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಬಾಲಕಿಯನ್ನು ಕರೆದೊಯ್ದ ಅಪ್ರಾಪ್ತ ಬಾಲಕನ ವಿರುದ್ಧ ಪೊಲೀಸರು ಪೋಸ್ಕೋ ಪ್ರಕರಣ ದಾಖಲಿಸಿದ್ದರೆ.

ಇದನ್ನೂ ಓದಿ: ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ: ಲವ್‌ ಜಿಹಾದ್‌ ಆರೋಪ

ಲವ್​ ಜಿಹಾದ್​ ವಾಸನೆ

ಇನ್ನು ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್​ ಠಾಣೆ ಎದರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಕೆಆರ್​ ಪೇಟೆ ಪಟ್ಟಣದಲ್ಲೂ ಅನ್ಯಧರ್ಮೀಯರಿಂದ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅನ್ಯ ಕೋಮಿನವರು ಲವ್ ಜಿಹಾದ್​ಗೆ ಪ್ರಚೋದನೆ ನೀಡುತ್ತಿದ್ದಾರೆ. ಪ್ರಕರಣವನ್ನು ಎನ್​ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ