ಮಂಡ್ಯ: ಕಿಚ್ಚು ಹಾಯ್ದು ಎಡವಿ ಬಿದ್ದ ರೈತ, ತುಳಿಯದೇ ಆತನ ಮೇಲೆ ಜಿಗಿದು ಹೋದ ಎತ್ತು
ರಾಜ್ಯಾದ್ಯಂತ ಸೋಮವಾರ ಮಕರ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಯಿತು. ಸಂಕ್ರಮಣದ ನಿಮಿತ್ತ ಕರ್ನಾಟಕದ ಹಲವು ಗ್ರಾಮಗಳಲ್ಲಿ ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆ ನಡೆಯಿತು. ಮಂಡ್ಯ ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆ ನಡೆಯಿತು.
ಮಂಡ್ಯ, ಜನವರಿ 16: ರಾಜ್ಯಾದ್ಯಂತ ಸೋಮವಾರ ಮಕರ ಸಂಕ್ರಾಂತಿಯನ್ನು (Sankaranti) ಸಡಗರದಿಂದ ಆಚರಿಸಲಾಯಿತು. ಸಂಕ್ರಮಣದ ನಿಮಿತ್ತ ಕರ್ನಾಟಕದ ಹಲವು ಗ್ರಾಮಗಳಲ್ಲಿ ಎತ್ತುಗಳ ಕಿಚ್ಚು ಹಾಯುವ ಆಚರಣೆ ನಡೆಯಿತು. ಇದೇ ರೀತಿಯ ಆಚರಣೆ ಮಂಡ್ಯ (Mandya) ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ನಡೆದಿದೆ. ಬಿದರಕೋಟೆ ಯುವ ರೈತ ಮಹೇಶ್ ಹಬ್ಬದ ನಿಮಿತ್ತ ದ್ಯಾಪಸಂದ್ರ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ದ್ಯಾಪಸಂದ್ರದಲ್ಲಿ ನಡೆದ ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆಯಲ್ಲಿ ಮಹೇಶ್ ಕೂಡ ಭಾಗಿಯಾಗಿದ್ದರು. ರೈತ ಮಹೇಶ್ ಎತ್ತನ್ನು ಹಿಡಿದುಕೊಂಡು ಕಿಚ್ಚು ಹಾಯ್ದಿದ್ದಾರೆ. ಕಿಚ್ಚು ಹಾಯ್ದ ಬಳಿಕ ಮಹೇಶ್ ಎಡವಿ ಬಿದ್ದಿದ್ದಾರೆ. ಎತ್ತು ಮುಂದೆ ಓಡಿ ಹೋಗಿದೆ. ಬಿದ್ದ ರೈತ ಮಹೇಶ್ ಅವರ ಹಿಂದೆಯೇ ಬರುತ್ತಿದ್ದ ಮತ್ತೊಂದು ಎತ್ತು, ಆತನನ್ನು ತುಳಿಯದೆ ಜಿಗಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನುಷ್ಯ ಎಡವಿದರೂ ಪ್ರಾಣಿ ಎಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.