ಪರ್ಸೆಂಟೇಜ್ ಭೂತ! ಮಾಮೂಲು ನೀಡುವಂತೆ ಪಿಡಿಒಗಳಿಗೆ EO ಕಿರುಕುಳ? ಪರ್ಸೆಂಟೇಜ್ ಕೇಳುವ ವಿಡಿಯೋ ವೈರಲ್

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಭೈರಪ್ಪ ಯೋಜನೆಗೆ ಇಂತಿಷ್ಟು ಹಣ ಅಂತ ಮೊದಲೆ ಫಿಕ್ಸ್ ಮಾಡಿಕೊಳ್ಳುತ್ತಿದ್ದರಂತೆ. ಅಷ್ಟು ಹಣ ಕೊಟ್ರೆ ಅದು ನನಗೆ ಸಾಲಲ್ಲ ಅನ್ನೋ ಕಿರಿಕ್ ಬೇರೆ ಮಾಡ್ತಿದ್ದಾರಂತೆ.

ಪರ್ಸೆಂಟೇಜ್ ಭೂತ! ಮಾಮೂಲು ನೀಡುವಂತೆ ಪಿಡಿಒಗಳಿಗೆ EO ಕಿರುಕುಳ? ಪರ್ಸೆಂಟೇಜ್ ಕೇಳುವ ವಿಡಿಯೋ ವೈರಲ್
ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ
Follow us
TV9 Web
| Updated By: ಆಯೇಷಾ ಬಾನು

Updated on:Feb 03, 2022 | 11:24 AM

ಮಂಡ್ಯ: ಪರ್ಸೆಂಟೇಜ್ ನೀಡುವಂತೆ ಪಿಡಿಒಗಳಿಗೆ EO ಕಿರುಕುಳ? ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ವಿರುದ್ಧ ಶ್ರೀರಂಗಪಟ್ಟಣ ತಾಲೂಕಿನ ಪಿಡಿಒಗಳು ಆರೋಪ ಮಾಡಿದ್ದಾರೆ. EO ಭೈರಪ್ಪ ವಿರುದ್ಧ ಜಿ.ಪಂ. ಸಿಇಒಗೆ PDOಗಳಿಂದ ದೂರು ಸಲ್ಲಿಸಲಾಗಿದೆ. ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಶೇಕಡಾ 30ರಷ್ಟು ಪರ್ಸೆಂಟೇಜ್ ಕೇಳುತ್ತಾರೆಂದು ಪಿಡಿಒಗಳು ಆರೋಪ ಮಾಡಿದ್ದಾರೆ. ಇ-ಸ್ವತ್ತು ಮಾಡಿಸುವವರಿಂದ ಹಣ ಪಡೆದು ನನಗೆ ನೀಡಿ ಎಂದು ಪಿಡಿಒಗಳ ಬಳಿ ಪರ್ಸೆಂಟೇಜ್ ಕೇಳುತ್ತಾರೆ. ನೇರವಾಗಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಕೇಳಿದಷ್ಟು ಪರ್ಸೆಂಟೇಜ್ ನೀಡಲೇಬೇಕೆಂದು ಕಿರುಕುಳ ಮಾಡುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಭೈರಪ್ಪ ಯೋಜನೆಗೆ ಇಂತಿಷ್ಟು ಹಣ ಅಂತ ಮೊದಲೆ ಫಿಕ್ಸ್ ಮಾಡಿಕೊಳ್ಳುತ್ತಿದ್ದರಂತೆ. ಅಷ್ಟು ಹಣ ಕೊಟ್ರೆ ಅದು ನನಗೆ ಸಾಲಲ್ಲ ಅನ್ನೋ ಕಿರಿಕ್ ಬೇರೆ ಮಾಡ್ತಿದ್ದಾರಂತೆ. ಹೀಗಾಗಿ ಭೈರಪ್ಪರ ಕಿರುಕುಳಕ್ಕೆ ಬೇಸತ್ತು ಪಿಡಿಓಗಳು ಸಿಇಓಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿ ಒಂದೂವರೆ ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಾಕ್ಷಿಗಳಿದ್ರು ಕ್ರಮ ಏಕಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.

ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಶೇಕಡಾ 30ರಷ್ಟು ಪರ್ಸೆಂಟೇಜ್ ಕೇಳುತ್ತಾರೆ. ಇ-ಸ್ವತ್ತು ಮಾಡಿಸುವವರಿಂದ ಹಣ ಪಡೆದು ನನಗೆ ನೀಡಿ ಎಂದು ಪಿಡಿಒಗಳ ಬಳಿ ಪರ್ಸೆಂಟೇಜ್ ಕೇಳುತ್ತಾರೆ. ನೇರವಾಗಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಕೇಳಿದಷ್ಟು ಪರ್ಸೆಂಟೇಜ್ ನೀಡಲೇಬೇಕೆಂದು ಕಿರುಕುಳ ನೀಡುತ್ತಾರೆ ಎಂದು ಪಿಡಿಒಗಳು ಆರೋಪಿಸಿದ್ದು EO ಕಿರುಕುಳಕ್ಕೆ ಬೇಸತ್ತು EO ಪರ್ಸೆಂಟೇಜ್ ಕೇಳುವ ಆಡಿಯೋ, ವಿಡಿಯೋವನ್ನು ವೈರಲ್ ಮಾಡಿದ್ದಾರೆ.

ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ -ಸಿಇಓ ದಿವ್ಯಾ ಪ್ರಭು ಇನ್ನು ಈ ಬಗ್ಗೆ ಮಂಡ್ಯ ಜಿ.ಪಂ ಸಿಇಓ ದಿವ್ಯಾ ಪ್ರಭು ಮಾತನಾಡಿದ್ದು, ಪಿಡಿಓಗಳು ಈ ಬಗ್ಗೆ ದೂರು ಕೊಟ್ಟಿದ್ದಾರೆ. ಅದರ‌ ಕುರಿತು ಪರಿಶೀಲನೆ ನಡೆಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಿದ್ವಿ. ಇದೀಗಾ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದಾರೆ. ಮೇಲ್ನೋಟಕ್ಕೆ ಇಓ ಒತ್ತಡ ಹಾಕಿದ್ದಾರೆ ಎಂದು ವರದಿ ಕೊಟ್ಟಿದ್ದಾರೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೆ. ಆಡಿಯೋ ವೀಡಿಯೋ ಸಾಕ್ಷಿ ಎಲ್ಲವನ್ನು ಸೇರಿ ವರದಿ ಕೊಡಲಾಗುವುದು. ಸರ್ಕಾರಕ್ಕೆ ಅಮಾನತು ಮಾಡುವಂತೆ ವರದಿ‌ ಕೊಡುತ್ತೇವೆ. ಸಿಇಓ ಬಗ್ಗೆಯು ಆಡಿಯೋದಲ್ಲಿ ಆರೋಪ ಮಾಡಿದ್ದಾರೆ. ಸೋಲರ್ ದೀಪದ ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಸಮಯದಲ್ಲಿ ಯಾವುದೇ ಯೋಜನೆ ಆಗಿಲ್ಲ. ನಾನು ಜಿಲ್ಲೆಗೆ ಬಂದಾಗಿನಿಂದಲು ಅಭಿವೃದ್ಧಿ ಬಗ್ಗೆ ಕೆಲಸ‌ ಮಾಡಿದ್ದೇನೆ‌. ನನ್ನ ವಿರುದ್ದದ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ಗ್ರೂಪ್‌ ಎ ಹಂತದ ಅಧಿಕಾರಿಯಾಗಿದ್ರಿಂದ ನಾನು ಕ್ರಮ ತೆಗೆದುಕೊಳ್ಳಲು ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಹಾದಿಯೇ ತೋರಿದ ಹಾದಿ ; ಬೀದಿಯನ್ನೇ ನೋಡದ ಮಂಡ್ಯದ 105ರ ನಿಂಗಮ್ಮ ಬೀದಿಯಲ್ಲಿಯೇ ಬದುಕುವಂತಾಯಿತು

Published On - 10:53 am, Thu, 3 February 22

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ