ಬಾಲಮಂದಿರದಲ್ಲಿ ಬಾಲಕಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ಕುಖ್ಯಾತ ರೌಡಿ ಅಶೋಕ್ ಪೈ ಪೊಲೀಸರ ವಶಕ್ಕೆ
ಆಗಸ್ಟ್ 31ರಂದು ಮಂಡ್ಯದ ಕಲ್ಲಹಳ್ಳಿ ಬಾಲ ಮಂದಿರದಲ್ಲಿ ಡೆತ್ ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಡೆತ್ ನೋಟ್ನಲ್ಲಿ ರೌಡಿ ಅಶೋಕ್ ಪೈ ಸೇರಿದಂತೆ ಮೂವರ ಹೆಸರನ್ನು ನಮೂದಿಸಲಾಗಿತ್ತು. ಬಾಲಕಿ ಬರೆದ ಡೆತ್ ನೋಟ್ ಆಧಾರದ ಮೇಲೆ ಅಶೋಕ್ ಪೈನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ: ಬಾಲ ಮಂದಿರದಲ್ಲಿ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಕುಖ್ಯಾತ ರೌಡಿ ಅಶೋಕ್ ಪೈನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಗಸ್ಟ್ 31ರಂದು ಮಂಡ್ಯದ ಕಲ್ಲಹಳ್ಳಿ ಬಾಲ ಮಂದಿರದಲ್ಲಿ ಡೆತ್ ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಡೆತ್ ನೋಟ್ನಲ್ಲಿ ರೌಡಿ ಅಶೋಕ್ ಪೈ ಸೇರಿದಂತೆ ಮೂವರ ಹೆಸರನ್ನು ನಮೂದಿಸಲಾಗಿತ್ತು. ಬಾಲಕಿ ಬರೆದ ಡೆತ್ ನೋಟ್ ಆಧಾರದ ಮೇಲೆ ಅಶೋಕ್ ಪೈನನ್ನು ಪೊಲೀಸರು ಬಂಧಿಸಿದ್ದಾರೆ.
ಎಪ್ರಿಲ್ 15 ರಂದು ಬಾಲಕಿ ಪ್ರಿಯಕರನ ಕೊಲೆ ನಡೆದಿತ್ತು. ಆ ವೇಳೆ ಹಲ್ಲೆಗೊಳಗಾಗಿ ಪ್ರಾಣಭಯದಿಂದ ಪಾರಾದ ಬಾಲಕಿ ಬಾಲ ನ್ಯಾಯ ಮಂಡಳಿ ವಶದಲ್ಲಿದ್ದಳು. ಈ ವೇಳೆ ಬಾಲಕಿ ಅಪ್ಪ ಅಮ್ಮನ ವಿರುದ್ಧವೇ ಸಾಕ್ಷಿ ಹೇಳುವಂತೆ ಅಶೋಕ್ ಪೈ ಒತ್ತಡ ಹಾಕಿದ್ದನಂತೆ. ರೌಡಿ ಅಶೋಕ್ ಪೈ ಸೇರಿದಂತೆ ಮೂವರಿಂದ ಒತ್ತಡ ಎಂದು ಬಾಲಕಿ ತನ್ನ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ.
ಬಾಲಮಂದಿರಲ್ಲಿ ನನ್ನನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ಅಪ್ಪ ಅಮ್ಮ ಹಾಗೂ ಪ್ರಿಯಕರನನ್ನ ಮಿಸ್ ಮಾಡಿಕೊಳ್ತಿದ್ದೇನೆ. ಪ್ರಿಯಕರನೂ ಕೊಲೆಯಾಗಿ ಹೋದ, ಅಪ್ಪ ಅಮ್ಮನೂ ಜೈಲು ಪಾಲಾದ್ರು. ರಾಜಿಗೆ ರೌಡಿಗಳು ಅವಕಾಶ ನೀಡ್ತಿಲ್ಲ ಎಂದು ಸಾಯುವ ಮುನ್ನ ಡೆತ್‌ನೋಟ್‌ನಲ್ಲಿ ಬಾಲಕಿ ನೋವು ತೋಡಿಕೊಂಡಿದ್ದಾಳೆ. ಇನ್ನು ಬಾಲಕಿ ಇದೆಲ್ಲದ್ರಿಂದ ಮನನೊಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ್ಲಾ ಎಂಬ ಅನುಮಾನ ಮೂಡಿದ್ದು ಕೇಸ್ ಸಂಬಂಧ ಮೂವರನ್ನ ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಈ ಬಗ್ಗೆ ಮಂಡ್ಯದಲ್ಲಿ ಎಸ್ಪಿ ಡಾ ಅಶ್ವಿನಿ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ ಕಲ್ಲಹಳ್ಳಿಯಲ್ಲಿ ನಡೆದ ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣದ ನಂತರ ಬಾಲಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಪ್ರಾಪ್ತ ಬಾಲಕ ಮತ್ತು ಬಾಲಕಿ ಪ್ರೀತಿಸಿದ ವಿಷಯ ತಿಳಿದು ಬಾಲಕಿಯ ಪೋಷಕರು ಬಾಲಕನನ್ನು ಏಪ್ರಿಲ್ 15ರಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಾಲಕಿ ತಂದೆ ಸೇರಿ 17 ಜನರ ವಿರುದ್ಧ ದೂರು ದಾಖಲಾಗಿತ್ತು. ಕೊಲೆ ಆರೋಪದಡಿ ಬಾಲಕಿಯ ಪೋಷಕರು ಜೈಲಿನಲ್ಲಿದ್ದರು. ಹೀಗಾಗಿ ಬಾಲಕಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು. 4 ತಿಂಗಳಿನಿಂದ ಪೋಷಕರನ್ನು ನೋಡದೆ ಬಾಲಕಿಗೆ ಖಿನ್ನತೆ ಆಗಿತ್ತು ಎಂದು ಹೇಳಲಾಗಿತ್ತು. ಖಿನ್ನತೆಯಿಂದ ಬಾಲಕಿ ನೇಣು ಹಾಕಿಕೊಂಡಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿತ್ತು. ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಪ್ರಾಪ್ತರ ಪ್ರೀತಿ, ಬಾಲಕನ ಹತ್ಯೆ ಪ್ರಕರಣ; ನೇಣು ಬಿಗಿದುಕೊಂಡು ಬಾಲಕಿಯೂ ಸಾವು