ಮಂಡ್ಯ: ಆರ್ಟಿಒ ಅಧಿಕಾರಿಗಳಿಲ್ಲದಿದ್ರೂ ಅವರ ಜೀಪ್ ಚಾಲಕ(RTO Jeep Driver) ವಾಹನಗಳ ತಪಾಸಣೆ ಮಾಡಿ ಲಂಚಕ್ಕೆ(Bribe) ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆರ್ಟಿಒ ಅಧಿಕಾರಿಗಳ ಜೀಪ್ ಚಾಲಕ ಇಂತಹದೊಂದು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.
ಆರ್ಟಿಒ ಅಧಿಕಾರಿಗಳ ಜೀಪ್ ಚಾಲಕ ತಾನೇ ಅಧಿಕಾರಿ ಎಂಬಂತೆ ವಾಹನಗಳ ತಪಾಸಣೆ ಮಾಡುತ್ತಿದ್ದನಂತೆ. ಅದೇ ರೀತಿ ಕೆಲ ದಿನಗಳ ಹಿಂದೆ ಕೂಡ ಟಿಪ್ಪರ್ ಲಾರಿ ತಡೆದು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಜೀಪ್ ಚಾಲಕ ನಾಗರಾಜು ಟಿಪ್ಪರ್ ಚಾಲಕ ಕೃಷ್ಣನ ಬಳಿ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದ್ರೆ ಈ ವೇಳೆ ಲಂಚ ನೀಡುವುದಕ್ಕೆ ಟಿಪ್ಪರ್ ಚಾಲಕ ಕೃಷ್ಣ ನಿರಾಕರಿಸಿದ್ದ. ಹೀಗಾಗಿ ಜೀಪ್ ಚಾಲಕ ನಾಗರಾಜ್ ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.
ವಾಹನ ಬಿಡಬೇಕಾದ್ರೆ 6 ಸಾವಿರ ಲಂಚ ನೀಡಬೇಕೆಂದು ಟಿಪ್ಪರ್ ಚಾಲಕನಿಗೆ ಜೀಪ್ ಚಾಲಕ ತಿಳಿಸಿದ್ದಾನೆ. ಈ ವೇಳೆ ಟಿಪ್ಪರ್ ಚಾಲಕ ಕೃಷ್ಣ ಮೂರು ಸಾವಿರ ಕೊಡ್ತೀನಿ ಎಂದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಕೋಟ್ನಲ್ಲಿ ಆರ್ಟಿಒ ಅಧಿಕಾರಿ ಕುಳಿತಿದ್ದನ್ನು ನೋಡಿಕೊಂಡು ಬರುತ್ತಿದ್ದ ವ್ಯಕ್ತಿ ಮಧ್ಯ ಪ್ರವೇಶಿಸಿ ಅಧಿಕಾರಿ ಇಲ್ಲದೆ ಚಾಲಕನಾಗಿ ನೀವ್ಯಾಕೆ ತಪಾಸಣೆ ಮಾಡ್ತಿದ್ದೀರಿ ಎಂದು ಟಿಪ್ಪರ್ ಚಾಲಕನ ಸಹಾಯಕ್ಕೆ ಬಂದ ವ್ಯಕ್ತಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ತಬ್ಬಿಬ್ಬಾದ ಆರ್ಟಿಒ ಚಾಲಕ ಮೊಬೈಲ್ನಲ್ಲಿ ವಿಡಿಯೋ ಮಾಡ್ತಿರೋದನ್ನ ನೋಡಿ ಕೃಷ್ಣನ ಲಾರಿ ಬಿಟ್ಟು ಅಲ್ಲಿಂದ ಹೊರಟು ಹೋಗಿದ್ದಾರೆ.
ನಂತರ ಸ್ವಲ್ಪ ಸಮಯ ಬಿಟ್ಟು ಟಿಪ್ಪರ್ ಲಾರಿಯನ್ನ ವಶಕ್ಕೆ ಪಡೆದು ಪೊಲೀಸ್ ಠಾಣೆ ಮುಂದೆ ತಂದು ನಿಲ್ಲಿಸಿದ್ದಾರೆ. ನಂತರ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದ್ದಾಗಿ ಇನ್ಸ್‌ಪೆಕ್ಟರ್ ವರದಿ ಬರೆದಿದ್ದಾರೆ. ಹೀಗಾಗಿ ಟಿಪ್ಪರ್ ಚಾಲಕ, ಆರ್ಟಿಓ ಜೀಪ್ ಚಾಲಕ ನಾಗರಾಜ್ ಸೇರಿ ಮೂವರ ವಿರುದ್ಧ ಮಳವಳ್ಳಿ ಟೌನ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಕೋಲಾರ: ರೂಬಿಕ್ಸ್ ಕ್ಯೂಬ್ನಲ್ಲಿ ಸಾಧನೆಯ ದಾಖಲೆ ಬರೆದ ಬಾಲಕಿ; 14ನೇ ವಯಸ್ಸಿಗೆ 600 ಮಕ್ಕಳಿಗೆ ಶಿಕ್ಷಕಿ
Published On - 9:09 am, Wed, 22 September 21