ಶ್ರೀರಂಗಪಟ್ಟಣದ ದರಸಗುಪ್ಪೆ ಗೇಟ್ ಬಳಿ ಸ್ಕೂಟರ್ಗೆ ಏಕಾಏಕಿ ಬೆಂಕಿ, ಇಬ್ಬರಿಗೆ ತೀವ್ರ ಸುಟ್ಟ ಗಾಯ
ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗೇಟ್ ಬಳಿ ಸ್ಕೂಟರ್ ಒಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಘಟನೆಯಲ್ಲಿ ಮೈಸೂರು ಮೂಲದ ಶಿವರಾಮು, ಅನಂತರಾಮಯ್ಯ ಎಂಬುವರಿಗೆ ಗಾಯಗಳಾಗಿವೆ.
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗೇಟ್ ಬಳಿ ಸ್ಕೂಟರ್ ಒಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಘಟನೆಯಲ್ಲಿ ಮೈಸೂರು ಮೂಲದ ಶಿವರಾಮು, ಅನಂತರಾಮಯ್ಯ ಎಂಬುವರಿಗೆ ಗಾಯಗಳಾಗಿವೆ. ಆ ವೇಳೆ ಸ್ಥಳೀಯರು ಸುಟ್ಟ ಗಾಯಗಳಿಂದ ನರಳುತ್ತಿದ್ದ ಸವಾರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಾಸನ ಎಸ್ಪಿ ಸಮ್ಮುಖದಲ್ಲೇ ಕಾನ್ಸ್ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ, ಆಸ್ಪತ್ರೆಗೆ ದಾಖಲು
ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಾಸನ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಹಲ್ಲೆಯಿಂದ ಗಾಯಗೊಂಡ ಕಾನ್ಸ್ಟೇಬಲ್ ವೇಣುಗೋಪಾಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಹಾಸನ ನಗರ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಭೇಟಿ ವೇಳೆ, ಎಸ್ಪಿ ಸಮ್ಮುಖದಲ್ಲೇ ಹಲ್ಲೆ ನಡೆದಿದೆ.
ಹಾಸನ ಉಪವಿಭಾಗದ ಡಿವೈಎಸ್ಪಿ ಉದಯಭಾಸ್ಕರ್ ವಿರುದ್ದ ಹಲ್ಲೆ ಆರೋಪ ಕೇಳಿಬಂದಿದೆ. ಗುರುವಾರ ಸಂಜೆ ಹಾಸನ ನಗರ ಠಾಣೆಯಲ್ಲಿ ಘಟನೆ ನಡೆದಿದೆ. ಎಸ್ಪಿ ಠಾಣೆ ಭೇಟಿ ಬೇಳೆ, ರೈಫಲ್ ಕ್ಲೀನ್ ಮಾಡಿ ತೋರಿಸಲು ಕಾನ್ಸ್ಟೇಬಲ್ ವೇಣುಗೆ ಡಿವೈಎಸ್ಪಿ ಉದಯಭಾಸ್ಕರ್ ಹೇಳಿದ್ದಾರೆ. ಈ ವೇಳೆ ರೈಫಲ್ ಕ್ಲೀನ್ ಹಂತಗಳಲ್ಲಿ ವೇಣುಗೋಪಾಲ್ ತಪ್ಪು ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಡಿವೈಎಸ್ಪಿಯಿಂದ ಹಲ್ಲೆ ನಡೆದಿದೆ. ಹಲ್ಲೆಯಿಂದ ಕುಸಿದು ಬಿದ್ದಿದ್ದ ವೇಣುಗೋಪಾಲ್ ಅವರನ್ನು ತಕ್ಷಣ ಹಾಸನದ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಹಾಸನ ನಗರ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Also Read:
ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಸೂಚನೆ; ಶನಿವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
Also Read:
Gold- Silver Price: ದೇಶದ ಪ್ರಮುಖ ನಗರಗಳಲ್ಲಿ ಜೂನ್ 24ರ ಶುಕ್ರವಾರದ ಚಿನ್ನ- ಬೆಳ್ಳಿ ದರ ಇಲ್ಲಿದೆ
Published On - 7:35 pm, Fri, 24 June 22