ಶಾಸಕರು ಮಾಡಬೇಕಾದ ಕೆಲಸಗಳನ್ನ ನಾನು ಮಾಡ್ತಿದ್ದೇನೆ: ಜೆಡಿಎಸ್ ಶಾಸಕರತ್ತ ಚಾಟಿ ಬೀಸಿದ ಸಂಸದೆ ಸುಮಲತಾ

| Updated By: ಆಯೇಷಾ ಬಾನು

Updated on: Mar 08, 2022 | 2:43 PM

ಸಂಸದೆಯಾಗಿ‌ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ‌. ಈ‌ ನಡುವೆ ನಾನು‌ ಮಾಡಿದ ಕೆಲಸಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಅವರುಗಳು ಮುಂದಾಗಿದ್ದಾರೆ. ಶಿಂಷಾ ನದಿಗೆ ಸೇತುವೆ ನಿರ್ಮಾಣ ವಿಚಾರವಾಗಿ ಸಂಸದೆಯಾಗಿ‌ ನಾನು ಕೆಲಸ ಮಾಡಿದ್ದೇನೆ. -ಸಂಸದೆ ಸುಮಲತಾ

ಶಾಸಕರು ಮಾಡಬೇಕಾದ ಕೆಲಸಗಳನ್ನ ನಾನು ಮಾಡ್ತಿದ್ದೇನೆ: ಜೆಡಿಎಸ್ ಶಾಸಕರತ್ತ ಚಾಟಿ ಬೀಸಿದ ಸಂಸದೆ ಸುಮಲತಾ
ಸಂಸದೆ ಸುಮಲತಾ
Follow us on

ಮಂಡ್ಯ: ವಿಶ್ವ ಮಹಿಳಾ ದಿನಾಚರಣೆಯಂದೆ ಸಕ್ಕರೆ ನಾಡು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಶಾಸಕರ ವಿರುದ್ಧ ಗುಡಗಿದ್ದಾರೆ. ಶಾಸಕರು ಮಾಡಬೇಕಾದ ಕೆಲಸಗಳನ್ನ ನಾನು ಮಾಡ್ತಿದ್ದೇನೆ. ಎಲ್ಲೇ ಹೋದರೂ ಸಾಕಷ್ಟು ಸಮಸ್ಯೆಗಳ ದೂರನ್ನು ಜನ ನನ್ನ ಬಳಿಗೆ ತೆಗೆದುಕೊಂಡು ಬರುತ್ತಿದ್ದಾರೆ ಎಂದು ತಮ್ಮಣ್ಣ ಸೇರಿ ಜೆಡಿಎಸ್ ಶಾಸಕರಿಗೆ ಸಂಸದೆ‌ ಸುಮಲತಾ ಟಾಂಗ್ ಕೊಟ್ಟಿದ್ದಾರೆ.

ಸಂಸದೆಯಾಗಿ‌ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ‌. ಈ‌ ನಡುವೆ ನಾನು‌ ಮಾಡಿದ ಕೆಲಸಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಅವರುಗಳು ಮುಂದಾಗಿದ್ದಾರೆ. ಶಿಂಷಾ ನದಿಗೆ ಸೇತುವೆ ನಿರ್ಮಾಣ ವಿಚಾರವಾಗಿ ಸಂಸದೆಯಾಗಿ‌ ನಾನು ಕೆಲಸ ಮಾಡಿದ್ದೇನೆ. ದೇವೇಗೌಡರು, ಪ್ರತಾಪ್ ಸಿಂಹ ಪ್ರಯತ್ನ ಪಟ್ಟಿಲ್ಲ ಎಂದು ಹೇಳುವುದ್ದಿಲ್ಲ. ನಾನು ನಿತಿನ್ ಗಡ್ಕರಿಯನ್ನು ಎಷ್ಟು ಬಾರಿ ಭೇಟಿಯಾಗಿದ್ದೇನೆ ಎಂಬುದನ್ನ ಅವರ ಸಚಿವಾಲಯದಿಂದ ತಿಳಿದುಕೊಳ್ಳಬಹುದು. ಬೇರೆ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಹೋದರೆ ನಿಮ್ಮ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಬಾ ಅನ್ನೋ ಉತ್ತರ ಬರುತ್ತೆ. ನನ್ನ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೇಳಿದಾಗ ಗಡ್ಕರಿಯವರು ಸ್ಪಂದಿಸಿದ್ದಾರೆ. ಈಗ ಸಂಸದರ ಕೆಲಸಕ್ಕು ಕ್ರೆಡಿಟ್ ತೆಗೆದುಕೊಳ್ಳಲು‌ ಮುಂದಾಗುತ್ತಿದ್ದಾರೆ. ಆದ್ರೆ ಅವರು ಮಾಡಬೇಕಾದ ಕೆಲಸ ಮಾಡುತ್ತಿಲ್ಲ. ಎಂಎಲ್‌ಎ ಗೆ ಎರಡು ಕೋಟಿ ಅನುದಾನ ಸಿಗುತ್ತೆ. ಆದ್ರೆ‌ ನನಗೆ ಒಂದು ತಾಲೂಕಿಗೆ ಸಿಗೋದು 40 ಲಕ್ಷ ಮಾತ್ರ. ಶಾಸಕರು ಕೆಲಸ ಮಾಡಿದ್ದರೆ ಜನರು ನನ್ನನ್ನು ಏಕೆ ಕೇಳುತ್ತಾರೆ. ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯುವ ಕಾಲ ಇತ್ತು. ಆದ್ರೆ ಈಗ ಜನರು ಎಚ್ಚೆತ್ತಕೊಂಡಿದ್ದಾರೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ಜನಗಣಮನ ಹೇಳಿ ಕಳುಹಿಸಲು ಜನರು ಕಾಯುತ್ತಿದ್ದಾರೆ ಎಂದು ಶಾಸಕರುಗಳು ಹೆಸರೇಳದೆ ಜೆಡಿಎಸ್ ಶಾಸಕರಿಗೆ ಸಂಸದೆ‌ ಸುಮಲತಾ ಟಾಂಗ್ ಕೊಟ್ಟಿದ್ದಾರೆ.

ಇನ್ನು ಇದೇ ವೇಳೆ ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುತ್ತಾರೆ ಎಂಬ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಬಗ್ಗೆ ನಾನು ಏನನ್ನು ಹೇಳುವುದಿಲ್ಲ. ಸದ್ಯಕ್ಕೆ ಎಂಪಿಯಾಗಿದ್ದರು ಎಂಎಲ್ಎ ಕೆಲಸಗಳನ್ನು ಹೊತ್ತುಕೊಂಡು ಮಾಡುತ್ತಿದ್ದೇನೆ. ರಾಜ್ಯ ರಾಜಕಾರಣಿ ಬಂದು ಮಾಡಬೇಕು ಎಂಬುದೇನು ಇಲ್ಲ. ಮಂಡ್ಯ ಜಿಲ್ಲೆಗೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಬೇರೆಯವರು ಮಾಡಿದ್ದಾರೆ. ಆದ್ರೆ ನಾನು ಪ್ರಯತ್ನ ಪಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಾನು ಸಚಿವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜಿಲ್ಲೆ ಅಭಿವೃದ್ಧಿ ಮಾಡುವಂತೆ ಮನವಿ‌ ಮಾಡಿದ್ದೇನೆ‌ ಎಂದು ತಿಳಿಸಿದ್ದಾರೆ.

ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ಬಜೆಟ್ನಲ್ಲಿ 50 ಕೋಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಮೂರು ವರ್ಷಗಳ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಎಲ್ಲರ ಶ್ರಮದ ಜೊತೆಗೆ ನನ್ನ ಶ್ರಮವು ಇದೆ. ಹಿಂದೆ 400 ಕೋಟಿ ಬಿಡುಗಡೆಯಾಗಿತ್ತು ಆ ಹಣವೆಲ್ಲ ಎಲ್ಲೊಯ್ತು ಎಂದು ಎಲ್ಲರಿಗೂ ಗೊತ್ತಿದೆ. ಈ ಹಣ ಭ್ರಷ್ಟಾಚಾರ ಎಂಬ ಇಲಾಖೆಗೆ ಸೇರಿತ್ತು. ಇದರಿಂದ ಏನು ಕಾರ್ಖಾನೆ ಉದ್ದಾರ ಆಗಲಿಲ್ಲ. ಎರಡು ವರ್ಷ ಸರ್ಕಾರವೆ ಕಾರ್ಖಾನೆ ನಡೆಸುತ್ತೆ ಎಂದು ಹೇಳಿದೆ. ಅದು ಯಾವ ರೀತಿಯಲ್ಲಾದರು ಪ್ರಾರಂಭವಾಗಲಿ. ಅಥವಾ ಎಷ್ಟು‌ ಕೋಟಿಯಾದರೂ ಹಾಕಲಿ. ಆದ್ರೆ‌ ಚಾಲನೆ ಮಾಡುತ್ತಾರೋ ಇಲ್ಲವೋ ಎಂಬುದಷ್ಟೆ ನಾವು ಕೇಳಬೇಕು. ನಮ್ಮ ಬೇಡಿಕೆಯು ಕಾರ್ಖಾನೆ ಆರಂಭವಾಗಬೇಕಿರೋದು ಎಂಬುದಷ್ಟೆ ಇರೋದು ಎಂದರು.

ಇದನ್ನೂ ಓದಿ: ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ರೈತ ಮಹಿಳೆ ಆತ್ಮಹತ್ಯೆ ಪ್ರಕರಣ; ಗದಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣ

ಮಹಿಳೆಯರಿಗೆ ಸ್ಪೂರ್ತಿಯಾದ ರಾಯಚೂರಿನ ಮೊದಲ ಮಹಿಳಾ ಆಟೋ ಚಾಲಕಿ; ಇಲ್ಲಿದೆ ಸ್ವಾವಲಂಬಿ ಬದುಕಿನ ಯಶೋಗಾಥೆ

Published On - 2:42 pm, Tue, 8 March 22