ಬೆಂಗಳೂರಿಗರಿಗೆ ಗುಡ್ ನ್ಯೂಸ್! ಟಿಕೆ ಹಳ್ಳಿ ಜಲಮಂಡಳಿ ಅಧಿಕಾರಿಗಳು ಮಳೆ ನೀರು ತೆಗೆದು ಯಂತ್ರಗಳಿಗೆ ಚಾಲನೆ ಕೊಟ್ಟರು

ಕಾವೇರಿ ಜಲಮಂಡಳಿಯ 4 ನೇ ಹಂತಕ್ಕೆ ಮಳೆ ನೀರು ನುಗ್ಗಿದೆ. BWSSB ಅಧಿಕಾರಿಗಳು ಈಗಾಗ್ಲೆ ಒಂದು ಯಂತ್ರವನ್ನ ಪ್ರಾಯೋಗಿಕವಾಗಿ ಚಾಲನೆ ಕೊಟ್ಟಿದ್ದಾರೆ. ನಾಳೆ ಮಧ್ಯಾಹ್ನದ ವೇಳೆಗೆ ಎಲ್ಲಾ ಯಂತ್ರಗಳನ್ನೂ ಚಾಲನೆ ಮಾಡುವ ಭರವಸೆಯನ್ನು ನೀಡಿದ್ದಾರೆ.

ಬೆಂಗಳೂರಿಗರಿಗೆ ಗುಡ್ ನ್ಯೂಸ್! ಟಿಕೆ ಹಳ್ಳಿ ಜಲಮಂಡಳಿ ಅಧಿಕಾರಿಗಳು ಮಳೆ ನೀರು ತೆಗೆದು ಯಂತ್ರಗಳಿಗೆ ಚಾಲನೆ ಕೊಟ್ಟರು
ಟಿಕೆ ಹಳ್ಳಿ ಜಲಮಂಡಳಿ
Updated By: ಆಯೇಷಾ ಬಾನು

Updated on: Sep 06, 2022 | 5:18 PM

ಮಂಡ್ಯ: ಬಿಡಬ್ಲ್ಯೂಎಸ್ಎಸ್​ಬಿ(BWSSB) ಬೆಂಗಳೂರಿಗರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಟಿಕೆ ಹಳ್ಳಿ ಜಲ ಮಂಡಳಿಗೆ ನೀರು ನುಗ್ಗಿದ್ದು ಯಂತ್ರಗಳು ನೀರಲ್ಲಿ ಮುಳುಗಿದ್ದವು. ಸದ್ಯ ಸಿಬ್ಬಂದಿ ನೀರನ್ನು ತೆರವುಗೊಳಿಸಿ ಯಂತ್ರಗಳನ್ನು ಪರಿಶೀಲಿಸಿ ಮರು ಚಾಲನೆಗೆ ಸಿದ್ಧರಾಗಿದ್ದಾರೆ. ಈ ಮೂಲಕ ಕಾವೇರಿ ಜಲಾಯನ ಅಧಿಕಾರಿಗಳು ರಾಜಧಾನಿ ಮಂದಿಗೆ ರಿಲೀಫ್ ಕೊಟ್ಟಿದ್ದಾರೆ.

ನಿನ್ನೆ ಸುರಿದ ಭಾರೀ ಮಳೆಯಿಂದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿಕೆ ಹಳ್ಳಿ ಜಲ ಮಂಡಳಿಗೆ ನೀರು ನುಗ್ಗಿತ್ತು. ನೀರು ನುಗಿದ್ದ ಪರಿಣಾಮ ಸೆಕ್ಟರ್ 4 ರ ನೀರು ಸರಬರಾಜು ಕೇಂದ್ರಗಳು ಮುಳುಗಡೆಯಾಗಿದ್ದವು. ಟಿಕೆ ಹಳ್ಳಿಯ ಕಾವೇರಿ ಜಲಾಯನ ಕೇಂದ್ರ ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಕೆಲಸ ಮಾಡುತ್ತದೆ. ಸದ್ಯ ನೀರು ತಗಿಯುವಲ್ಲಿ ಸಿಬ್ಬಂದಿ ಭಾಗಶಃ ಯಶಸ್ವಿಯಾಗಿದ್ದಾರೆ. ಕಾವೇರಿ ಜಲಮಂಡಳಿಯ 4 ನೇ ಹಂತಕ್ಕೆ ಮಳೆ ನೀರು ನುಗ್ಗಿದೆ. BWSSB ಅಧಿಕಾರಿಗಳು ಈಗಾಗ್ಲೆ ಒಂದು ಯಂತ್ರವನ್ನ ಪ್ರಾಯೋಗಿಕವಾಗಿ ಚಾಲನೆ ಕೊಟ್ಟಿದ್ದಾರೆ. ನಾಳೆ ಮಧ್ಯಾಹ್ನದ ವೇಳೆಗೆ ಎಲ್ಲಾ ಯಂತ್ರಗಳನ್ನೂ ಚಾಲನೆ ಮಾಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದು ನಾಳೆ ಮಧ್ಯಾಹ್ನದಿಂದಲೇ ಯಂತ್ರಗಳು ಕೆಲಸ ಮಾಡಲಿವೆ.

ನಾಳೆಯಿಂದ ಕಾವೇರಿ ನೀರು ಪೂರೈಕೆ

ನಾಳೆಯಿಂದ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗಲಿದೆ. ಸದ್ಯ 4th ಸ್ಟೇಜ್ ಫೇಸ್ 2ರ ಪಂಪ್ ಸಿದ್ದಗೊಳಿಸಿ ಕಾರ್ಯಾರಂಭಗೊಂಡಿದೆ. ಫೇಸ್ 2ರ ಪಂಪ್ ಸೆಟ್ 110MLD ಸಾಮರ್ಥ್ಯ ಇದೆ. ಫೇಸ್ 2ರ ಕಾರ್ಯಾರಂಭ ಶುರು ಮಾಡಲಾಗಿದೆ. ಬಾಕಿ ಉಳಿದ ಕಾರ್ಯ ತ್ವರಿತಗತಿಯಲ್ಲಿ ಆಗುತ್ತೆ. ಇಂದು ತಡರಾತ್ರಿಯವರೆಗೆ ದುರಸ್ಥಿ ಕಾರ್ಯ ನಡೆಯಲಿದೆ. ನಾಳೆ ಬೆಳಗ್ಗೆ ಅಥವಾ ಮಧ್ಯಾಹ್ನದೊಳಗೆ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಇರಲಿದೆ. ನಾಳೆಯಿಂದ ಬೆಂಗಳೂರಿನಲ್ಲಿ ಎಂದಿನಂತೆ ಕಾವೇರಿ ನೀರು ಪೂರೈಸಲಾಗುತ್ತೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:27 pm, Tue, 6 September 22