ಜಗತ್ತು ಮರೆತು ಫೋನ್​ನಲ್ಲಿ ಮಾತನಾಡುತ್ತಿದ್ದವರ ಮೇಲೆ ಹರಿಯಿತು ರೈಲು; ಮಂಡ್ಯದಲ್ಲಿ ಇಬ್ಬರು ಮಹಿಳೆಯರ ದುರ್ಮರಣ

| Updated By: ಆಯೇಷಾ ಬಾನು

Updated on: Jan 25, 2023 | 11:42 AM

ಬಸರಾಳು ಮೂಲದ ಶಶಿ ಎಂಬ ಮಹಿಳೆ ಇಂದು ಬೆಳಗ್ಗೆಯಷ್ಟೇ ಬೆಂಗಳೂರಿನಿಂದ ಮಂಡ್ಯಕ್ಕೆ ಬಂದು ಇಳಿದಿದ್ದು ರೈಲ್ವೆ ಹಳಿ ದಾಟುವಾಗ ವೇಗವಾಗಿ ಬಂದ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಜಗತ್ತು ಮರೆತು ಫೋನ್​ನಲ್ಲಿ ಮಾತನಾಡುತ್ತಿದ್ದವರ ಮೇಲೆ ಹರಿಯಿತು ರೈಲು; ಮಂಡ್ಯದಲ್ಲಿ ಇಬ್ಬರು ಮಹಿಳೆಯರ ದುರ್ಮರಣ
ಮಂಡ್ಯ ರೈಲ್ವೆ ನಿಲ್ದಾಣ
Follow us on

ಮಂಡ್ಯ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟ ಭೀಕರ ಘಟನೆ ಮಂಡ್ಯ ನಗರದ ಪೇಟೆಬೀದಿ ರೈಲ್ವೆ ಗೇಟ್ ಬಳಿ ನಡೆದಿದೆ. ಫೋನ್​ನಲ್ಲಿ ಮಾತಾಡಿಕೊಂಡು ಹಳಿ ದಾಟುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಸರಾಳು ಮೂಲದ ಶಶಿ ಎಂಬ ಮಹಿಳೆ ಇಂದು ಬೆಳಗ್ಗೆಯಷ್ಟೇ ಬೆಂಗಳೂರಿನಿಂದ ಮಂಡ್ಯಕ್ಕೆ ಬಂದು ಇಳಿದಿದ್ದು ರೈಲ್ವೆ ಹಳಿ ದಾಟುವಾಗ ವೇಗವಾಗಿ ಬಂದ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಶಶಿ ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ತಾವು ಮಂಡ್ಯಕ್ಕೆ ಬಂದ ವಿಚಾರ ತಿಳಿಸಲು ಫೋನ್ ಮಾಡಿ ಮಾತನಾಡುತ್ತ ಹಳಿ ದಾಟಿದ್ದಾರೆ. ಈ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: Belagavi News: ಶಿವಾಜಿ ಮಹಾರಾಜರ ಚಿತ್ರದ ಅಶ್ಲೀಲ ಎಡಿಟ್; ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಅಭಯ್ ಪಾಟೀಲ್ ಆಗ್ರಹ

ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸಾವು

ರಾಯಚೂರಿನಲ್ಲಿ ಹಿಟ್​​ ಆ್ಯಂಡ್ ರನ್​ಗೆ ಬೈಕ್​​ ಸವಾರ ಬಲಿಯಾಗಿದ್ದಾನೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುರಗುಂಟಾ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಗಿರಣಿ ಬಸಯ್ಯ(45) ಮೃತಪಟ್ಟಿದ್ದಾರೆ. ಯರಜಂತಿಯಿಂದ ಜಲದುರ್ಗ ಮಾರ್ಗವಾಗಿ ತೆರಳುತ್ತಿದ್ದ ಬಸಯ್ಯನಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು ಡಿಕ್ಕಿ ರಭಸಕ್ಕೆ ಮೃತನ ಅಂಗಾಂಗಗಳು ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹದೇಶ್ವರ ಬೆಟ್ಟದ ಬಳಿ ಬಸ್ ಉರುಳಿ ಪ್ರಯಾಣಿಕರಿಗೆ ಗಾಯ

ಚಾಮರಾಜನಗರದ ಮಹದೇಶ್ವರ ಬೆಟ್ಟದ ಪಾಲಾರ್ ಬಳಿ ಪ್ರವಾಸಿ ಬಸ್ ಉರುಳಿ ಬಿದ್ದು 15 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗುಜರಾತ್‌ನಿಂದ ಹೊರಟಿದ್ದ ತಮಿಳುನಾಡು ಪ್ರವಾಸ ಮುಗಿಸಿ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಬಸ್ ಉರುಳಿದೆ. ಬಸ್‌ನಲ್ಲಿ 50 ಪ್ರವಾಸಿಗರ ಪೈಕಿ 15 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:42 am, Wed, 25 January 23