ರಸ್ತೆ ನಿರ್ಮಿಸಿದ ವಾರಕ್ಕೇ ಕಿತ್ತು ಬರುತ್ತಿದೆ ಡಾಂಬರ್: ಆರೂವರೆ ಕೋಟಿ ಖರ್ಚು ಮಾಡಿ ಕಳಪೆ ಕಾಮಗಾರಿ, ಗ್ರಾಮಸ್ಥರ ಆಕ್ರೋಶ ಹೇಗಿದೆ?

| Updated By: ಆಯೇಷಾ ಬಾನು

Updated on: Feb 03, 2022 | 7:33 AM

ಹತ್ತು ದಿನದ ಹಿಂದೆ ನಿರ್ಮಾಣವಾಗಿದ್ದ ರಸ್ತೆಯ ಡಾಂಬರ್ ಕಿತ್ಕೊಂಡು ಬರ್ತಿದೆ. ಮಂಡ್ಯ ತಾಲೂಕಿನ ಗುನ್ನಾನಾಯಕಹಳ್ಳಿ, ಮಾರನಹಳ್ಳಿ, ಕೆಬ್ಬಳ್ಳಿ, ಗೊರವಾಲೆ, ಶಿವಳ್ಳಿ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು.

ರಸ್ತೆ ನಿರ್ಮಿಸಿದ ವಾರಕ್ಕೇ ಕಿತ್ತು ಬರುತ್ತಿದೆ ಡಾಂಬರ್: ಆರೂವರೆ ಕೋಟಿ ಖರ್ಚು ಮಾಡಿ ಕಳಪೆ ಕಾಮಗಾರಿ, ಗ್ರಾಮಸ್ಥರ ಆಕ್ರೋಶ ಹೇಗಿದೆ?
ರಸ್ತೆ ನಿರ್ಮಿಸಿದ ವಾರಕ್ಕೇ ಕಿತ್ತು ಬರುತ್ತಿದೆ ಡಾಂಬರ್: ಆರೂವರೆ ಕೋಟಿ ಖರ್ಚು ಮಾಡಿ ಕಳಪೆ ಕಾಮಗಾರಿ, ಗ್ರಾಮಸ್ಥರ ಆಕ್ರೋಶ ಹೇಗಿದೆ?
Follow us on

ಮಂಡ್ಯ: ಜಿಲ್ಲೆಯ ಆ ರಸ್ತೆ ನಾಲ್ಕೈದು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಹದಗೆಟ್ಟು ಬಹಳ ವರ್ಷಗಳೇ ಕಳೆದಿತ್ತು. ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಿಂದ ಕೊನೆಗೂ ರಸ್ತೆ ಅಭಿವೃದ್ಧಿಗೆ ಆರುವರೆ ಕೋಟಿ‌ ರೂಪಾಯಿ ಅನುದಾನ‌ ಬಿಡುಗಡೆಯಾಗಿತ್ತು.. ಆದ್ರಂತೆ ರಸ್ತೆ ಕೂಡ ನಿರ್ಮಾಣವಾಗಿದೆ. ಆದ್ರೀಗ ಆ ರಸ್ತೆ ಕಾಮಗಾರಿ ವಿಚಾರವಾಗಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹೊಸದಾಗಿ ನಿರ್ಮಾಣ ಆಗಿರೋ ರಸ್ತೆಯ ಕಳಪೆ ಕಾಮಗಾರಿ ನೋಡಿ ಶಾಕ್ ಆಗಿದ್ದಾರೆ. ಹೊಸ ರಸ್ತೆ ಸಿದ್ಧ ಆಯ್ತು ಇನ್ಮೆಲೆ ನೆಮ್ಮದಿಯಾಗಿ ಓಡಾಡ್ಬಹುದು ಅಂತ ನಿಟ್ಟುಸಿರು ಬಿಟ್ಟಿದ್ರು ಜನ. ಆದ್ರೆ ರಸ್ತೆ ಕಾಮಗಾರಿ ಮುಗಿದು ಒಂದು ವಾರ ಕಳೆದಿರಲಿಲ್ಲ. ಈಗ ಊರಿನ ಜನ್ರೇ ಶಾಕ್ ಆಗಿದ್ದಾರೆ. ಯಾಕಂದ್ರೆ ಹೊಳೆಯುತ್ತಿದ್ದ ರಸ್ತೆಯ ಬಣ್ಣ ಬಯಲಾಗಿದೆ.

ಆರೂವರೆ ಕೋಟಿ ಖರ್ಚು ಮಾಡಿದ್ರೂ ಕಳಪೆ ಕಾಮಗಾರಿ
ಹತ್ತು ದಿನದ ಹಿಂದೆ ನಿರ್ಮಾಣವಾಗಿದ್ದ ರಸ್ತೆಯ ಡಾಂಬರ್ ಕಿತ್ಕೊಂಡು ಬರ್ತಿದೆ. ಮಂಡ್ಯ ತಾಲೂಕಿನ ಗುನ್ನಾನಾಯಕಹಳ್ಳಿ, ಮಾರನಹಳ್ಳಿ, ಕೆಬ್ಬಳ್ಳಿ, ಗೊರವಾಲೆ, ಶಿವಳ್ಳಿ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು. ಈ ಭಾಗದ ಜನ ಹಲವು ವರ್ಷಗಳಿಂದ ತಮಗೊಂದು ರಸ್ತೆ ಮಾಡ್ಕೊಡಿ ಅಂತ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ರು. ಅದರಂತೆ ಇದೀಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಬರೋಬ್ಬರಿ ಆರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ 8 ಕಿಲೋ ಮೀಟರ್ ರಸ್ತೆ ಅಭಿವೃದ್ದಿಪಡಿಸಲಾಗಿದೆ. ಆದ್ರೆ ರಸ್ತೆಯಾಗಿ 10 ದಿನ ಕಳೆಯುವಷ್ಟ್ರಲ್ಲಿ ಕಳಪೆ ಕಾಮಗಾರಿಯ ನಿಜ ರೂಪ ಬಯಲಾಗಿದೆ. ಇದ್ರಿಂದ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ರಾಘವೇಂದ್ರನ ವಿರುದ್ಧ ಗ್ರಾಮಸ್ಥರು ಕೆರಳಿ ಕೆಂಡವಾಗಿದ್ದಾರೆ. ರಸ್ತೆ ಬಗ್ಗೆ ರಾಘವೇಂದ್ರನನ್ನು ಪ್ರಶ್ನಿಸಿದಾಗ ರಸ್ತೆ ಸರಿಪಡಿಸುವುದಾಗಿ ಹೇಳಿ ಹೋಗಿದ್ದ, ಆದ್ರೆ ಈವರೆಗೂ ಇತ್ತ ತಲೆಯನ್ನೇ ಹಾಕಿಲ್ಲ. ಇತ್ತ ಅಧಿಕಾರಿಗಳು ಮಾತ್ರ ತಮಗೆ ಗೊತ್ತೇ ಇರಲಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ತೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನಾದ್ರೂ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ರೆ ನುಂಗಣ್ಣರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ವರದಿ: ದಿಲೀಪ್ ಚೌಡಹಳ್ಳಿ, TV9, ಮಂಡ್ಯ

ಆರೂವರೆ ಕೋಟಿ ಖರ್ಚು ಮಾಡಿ ತಯಾರಿಸಿದ ರಸ್ತೆ

ಇದನ್ನೂ ಓದಿ: ಜೆಫ್ ಬಿಜೋಸ್ ಯಾಚ್ ಹಾದುಹೋಗಲು ನೆದರ್​ಲ್ಯಾಂಡ್ಸ್​​​​​​ ಐತಿಹಾಸಿಕ ಮತ್ತು ಐಕಾನಿಕ್ ಕೊನಿಂಗ್​ಶೇವನ್ ಸೇತುವೆ ಕೆಡವುತ್ತಿದೆ!!