ಮಂಡ್ಯದಲ್ಲಿ 7 ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ: ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಸಿಎಂ ವಿಶ್ವಾಸ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2022 | 4:54 PM

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಗಾಳಿ ಬೀಸುತ್ತಿದೆ. ಜಿಲ್ಲೆಯ 7 ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ 7 ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ: ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಸಿಎಂ ವಿಶ್ವಾಸ
ಸಿಎಂ ಬೊಮ್ಮಾಯಿ
Follow us on

ಮಂಡ್ಯ: ಜಿಲ್ಲೆಯ 7 ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಜಿಲ್ಲೆಯ ಮದ್ದೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿ, ಮಂಡ್ಯ ಜಿಲ್ಲೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿದ್ರೆ ಇಂಡಿಯಾದಲ್ಲಿ ಹಾರಿದಂತೆ. ಹಿಂದು, ಹಿಂದುತ್ವ ಬಗ್ಗೆ ಮಾತಾಡಿದರೆ ಕಾಂಗ್ರೆಸ್ಸಿಗರಿಗೆ ಉರಿಯುತ್ತೆ. ನಮ್ಮ ಸಂಸ್ಕೃತಿ ಬಗ್ಗೆ ಮಾತನಾಡಿದ್ರೆ ತಪ್ಪೇನು. ಉಗ್ರರಿಗೆ ಸಹಾನುಭೂತಿ ತೋರುವ ಕಾಂಗ್ರೆಸ್​​​ಗೆ ಮತ ಹಾಕಬೇಡಿ. ಕನಕದಾಸರ ಜಯಂತಿ ಮಾಡಿದ್ದು ನಮ್ಮ ಬಿ.ಎಸ್​.ಯಡಿಯೂರಪ್ಪ ಅವರು. ಕಾಗಿನೆಲೆ ಅಭಿವೃದ್ಧಿ ಮಾಡಿದ್ದು ನಮ್ಮ ಯಡಿಯೂರಪ್ಪ ಸಾಹೇಬರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಗಾಳಿ ಬೀಸುತ್ತಿದೆ

ಹಳೇ ಮೈಸೂರು ಭಾಗದಲ್ಲಿ JDS, ಕಾಂಗ್ರೆಸ್​​ಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬಹುಮತಕ್ಕೆ ಹಳೇ ಮೈಸೂರು ಭಾಗದ ಜನ ಮಹತ್ವದ ಪಾತ್ರ ವಹಿಸುತ್ತಾರೆ. ಜಿಲ್ಲೆಯಲ್ಲಿ ಬಿಜೆಪಿ ಪರ ಗಾಳಿ ಬೀಸುತ್ತಿದೆ. ಜನರು ಕಾಂಗ್ರೆಸ್​, ಜೆಡಿಎಸ್​ ಆಡಳಿತ ನೋಡಿದ್ದಾರೆ.
ನೀರಾವರಿ ಸೇರಿದಂತೆ ಹಲವು ಸಮಸ್ಯೆಗಳು ಇತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ. ಕೇವಲ ಭಾವನಾತ್ಮಕವಾಗಿ ಜನರ ಮತ ಪಡೆದು ಕೆಲಸ ಮಾಡಿಲ್ಲ. ಕಾಂಗ್ರೆಸ್​, ಜೆಡಿಎಸ್​ ವಿಫಲ ನಾಯಕತ್ವ ಬಿಜೆಪಿಗೆ ಸಹಕಾರಿ ಆಗುತ್ತೆ. ಕೋಲಾರ, ಚಾಮರಾಜನಗರ, ಮೈಸೂರು, ಮಂಡ್ಯ ಪ್ರವಾಸ ಮಾಡಿದ್ದೇನೆ. ಜನರ ಉತ್ಸಾಹ ನೋಡಿ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಟಿವಿ9ಗೆ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದರು.

ಇದನ್ನೂ ಓದಿ: ಸಾಹಿತಿಗಳ ಪ್ರತಿಮೆಗಳುಳ್ಳ ಬಯಲು ವಸ್ತುಸಂಗ್ರಹಾಲಯ ಸ್ಥಾಪನೆಗೆ ಸರ್ಕಾರದ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ

ಬದಲಾವಣೆಯ ಅವಶ್ಯಕತೆ ಇದೆ

ಜಿಲ್ಲೆಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ. KRS ಡ್ಯಾಂ ಶಿಥಿಲಗೊಂಡು 300 ಕ್ಯೂಸೆಕ್ ನೀರು ಪೋಲಾಗುತ್ತಿತ್ತು. ನಾವು ಕೆಆರ್​ಎಸ್​ ಕ್ರಸ್ಟ್​ ಗೇಟ್​ಗಳ ಬದಲಾವಣೆ ಮಾಡಿದ್ದೇವೆ. ಕೆಆರ್​ಎಸ್​ ಗೇಟ್​ ಮುಟ್ಟಬೇಡಿ ಶಾಪ ಇದೆ ಎಂದು ಹೆದರಿಸಿದ್ದರು. ರಾಜೀನಾಮೆ ಕೊಡಬೇಕಾಗುತ್ತೆ ಎಂದು ಪರೋಕ್ಷವಾಗಿ ಮಾತಾಡಿದ್ರು. ನಾನು ಚಾಲೆಂಜಿಂಗ್​ ಆಗಿ ಕೆಲಸ ಮಾಡಿದ್ದೇನೆ. ಈಗ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದರು.

ಇದನ್ನೂ ಓದಿ: ಬಿಜೆಪಿ ಮಾಜಿ, ಹಾಲಿ ಸಿಎಂಗಳ ನಡುವೆ ಮುನಿಸು ವಿಚಾರ: ಯಡಿಯೂರಪ್ಪ ಮುಕ್ತ ಬಿಜೆಪಿ ಎಂದು ಕಾಂಗ್ರೆಸ್ ವ್ಯಂಗ್ಯ

ಕಾಂಗ್ರೆಸ್ ದೇಶದಲ್ಲೇ ಧೂಳಿಪಟವಾಗಿದೆ

ಕಾಂಗ್ರೆಸ್ ಆಡಳಿತ ಕಾಲದಲ್ಲಿ ಮಂಡ್ಯದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ನಡೆದಿತ್ತು. ಅಧಿಕಾರ ಇದ್ದಾಗ ಮಜಾ ಮಾಡೋದು ಅಧಿಕಾರ ಇಲ್ಲದೆ ಇದ್ದಾಗ ಬಾಯಿ ಬಡೆದು ಕೊಳ್ಳೋದು. ಇದನ್ನ ಬಿಟ್ಟು ಕಾಂಗ್ರೆಸ್​ನವರು ಏನನ್ನು ಮಾಡಿಲ್ಲ. ಮಾತಿನ ಮದ್ಯೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಪ್ರಸ್ಥಾಪಿಸಿದ ಸಿಎಂ, ಮಾತಿನಲ್ಲೇ ಡಿ.ಕೆ ಶಿವಕುಮಾರ್​ಗೆ ಟಾಂಗ್​ ನೀಡಿದರು. ಕಾಂಗ್ರೆಸ್​ನ ಕರ್ಮಕಾಂಡ ಬಯಲಿಗೆ ಬರಲಿದೆ. ಕಾಂಗ್ರೆಸ್ ದೇಶದಲ್ಲೇ ಧೂಳಿಪಟವಾಗಿದೆ ಎಂದರು.

ಕನಕದಾಸರ ಜಯಂತಿ ಮತ್ತು ಕಾಗಿನೆಲೆ ಅಭಿವೃದ್ಧಿ ಪಡಿಸಿದ್ದು ನಮ್ಮ ಯಡಿಯೂರಪ್ಪ ಸಾಹೇಬ್ರು. ಸಿದ್ದರಾಮಯ್ಯರವರು ಏನು ಮಾಡಲೇ ಇಲ್ಲಾ. ಎಸ್.ಸಿ ಎಸ್.ಟಿಗೆ ಇವರು ಯಾಕೆ ಮೀಸಲಾತಿ ಕೊಡಲಿಲ್ಲ. ಬನ್ನಿ ಬದಲಾವಣೆ ತರೋಣ ಎಂದು ಜನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:52 pm, Fri, 16 December 22