ಮಂಡ್ಯ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾದ ಅವಾಂತರ ಅಷ್ಟಿಷ್ಟಲ್ಲ. ಒಂದು ಕಡೆ ಭಾರಿ ಮಳೆಗೆ ಮನೆ ಕಳೆದುಕೊಂಡಿದ್ದರೆ ಇನ್ನೊಂದು ಕಡೆ ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹೆತ್ತವರ ಮುಂದೆ ಮಗ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಸಾರಂಗಿ ಗ್ರಾಮದ ಬಳಿ ನಡೆದಿದೆ. ನಿನ್ನೆ (ನ.3) ಸಂಜೆ ಸುರಿದ ಭಾರಿ ಮಳೆಯಿಂದ ಸಾರಂಗಿ ಬಳಿಯ ಸೇತುವೆ ತುಂಬಿ ಹರಿಯುತ್ತಿದೆ. ಈ ವೇಳೆ ಬೈಕ್ನಲ್ಲಿ ಬರುತ್ತಿದ್ದ ಕೈಗೋನಹಳ್ಳಿ ಗ್ರಾಮದ ಉದಯಕುಮಾರ್(35) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ರಾತ್ರಿ ಮನೆಯವರಿಗೆ ಫೋನ್ ಮಾಡಿ ಮನೆಗೆ ಬರುವುದಾಗಿ ಉದಯ್ ಹೇಳಿದ್ದರು. ಆದರೆ ಉದಯ್ ಬೆಳಗಾದರೂ ಬಾರದಿದ್ದರಿಂದ ಮನೆಯವರು ಹುಡುಕಾಡಿದ್ದಾರೆ. ಹುಡುಕಾಟದ ವೇಳೆ ಸಾರಂಗಿ ಸೇತುವೆ ಬಳಿ ಉದಯ್ ಬೈಕ್ ಪತ್ತೆಯಾಗಿದೆ.
ಕೈಗೋನಹಳ್ಳಿಯ ಶಿವಲಿಂಗೇಗೌಡ ಮತ್ತು ಜಯಮ್ಮ ದಂಪತಿಗೆ ಉದಯ್ ಒಬ್ಬನೇ ಮಗ. ಈತ ಹಲವು ವರ್ಷಗಳಿಂದ ಮುಂಬೈನಲ್ಲಿ ವಾಸವಿದ್ದರು. ಮುಂಬೈನಲ್ಲಿ ಇಂಜಿನಿಯರ್ ಆಗಿದ್ದರು. ಕಳೆದ ವರ್ಷ ಕೊರೊನಾ ಹೆಚ್ಚಳದಿಂದಾಗಿ ಕೆಲವು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರವಷ್ಟೆ ಊರಿಗೆ ಬಂದಿದ್ದರು. ನಿನ್ನೆ ರಾತ್ರಿ ಶ್ರವಣಬೆಳಗೊಳಕ್ಕೆ ಹೋಗಿದ್ದರು.
ರಾತ್ರಿ ಹತ್ತು ಗಂಟೆ ಸುಮಾರಿಗೆ ಮನೆಗೆ ಬರುತ್ತೇನೆ ಅಂತ ಉದಯ್ ಮನೆಯವರಿಗೆ ಹೇಳಿದ್ದರಂತೆ. ರಾತ್ರಿ11 ಗಂಟೆ ಕಳೆದರೂ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಹೆತ್ತವರು ಉದಯ್ನ ಹುಡುಕಿದ್ದಾರೆ. ಈ ವೇಳೆ ಸಾರಂಗಿ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಉದಯ್ ಸಿಲುಕಿಕೊಂಡಿದ್ದರು. ಮಗನನ್ನ ಕಾಪಾಡಲು ಉದಯ್ ತಂದೆ ಶಿವಲಿಂಗೇಗೌಡ ಹಳ್ಳಕ್ಕೆ ಧುಮುಕಿದ್ದರು. ಈ ವೇಳೆ ಹಳ್ಳದಲ್ಲಿ ಕೊಚ್ಚಿ ತಂದೆ ಮಗ ಕೊಚ್ಚಿ ಹೋಗಿದ್ದಾರೆ. ತಂದೆ ಈಜಿ ದಡ ಸೇರಿದರೆ, ಉದಯ್ ನೀರು ಪಾಲಾಗಿದ್ದಾರೆ. ಉದಯ್ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಡುತ್ತಿದೆ.
ಇದನ್ನೂ ಓದಿ
ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಶಿವರಾಂ ಮಾಡಿದ ಆ ಒಂದು ಕೆಲಸವೇ ಅವರ ಪ್ರಾಣಕ್ಕೆ ಮುಳುವಾಯ್ತಾ?