ಎಲ್ಲೆಡೆ ದೀಪಾವಳಿ ಸಂಭ್ರಮ: ಇತ್ತ ಮೇಲುಕೋಟೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಕರಾಳ ದಿನಾಚರಣೆ
ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ರೆ ಇತ್ತ ಮೇಲುಕೋಟೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕರಾಳ ದಿನಾಚರಣೆ ಆಚರಿಸಿದ್ದಾರೆ.
ಮಂಡ್ಯ: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆಮಾಡಿದೆ. ಮನೆ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡಿ ಪಟಾಕಿ ಸಿಡಿಸಿ, ಸಿಹಿ ತಿಂದು ಸಂಭ್ರಮಿಸುತ್ತಿದ್ದಾರೆ. ಭಾರತೀಯ ಹಬ್ಬಗಳಲ್ಲಿ ದೀಪಾವಳಿ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಯುಗ-ಯುಗಗಳಿಂದಲೂ ಆಚರಿಸಲಾಗುತ್ತಿದೆ. ಇತ್ತ ಮಂಡ್ಯದ ಮೇಲುಕೋಟೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಕರಾಳ ದಿನಾಚರಣೆ ಆಚರಿಸಲಾಗಿದೆ.
ಮತಾಂತರಕ್ಕೆ ಒಪ್ಪದ ಹಿಂದೂಗಳನ್ನು ಟಿಪ್ಪು ಸುಲ್ತಾನ್ ಮಾರಣಹೋಮ ನಡೆಸಿದ್ದ . ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬದಂದು ಇಲ್ಲಿ ಕರಾಳ ದಿನಾಚರಣೆ ಆಚರಿಸಲಾಗುತ್ತದೆ. ಅದರಂತೆ ಬಿಜೆಪಿ ಯುವ ಮೋರ್ಚಾದಿಂದ ಇಂದು(ಅಕ್ಟೋಬರ್ 24) ಕರಾಳ ದಿನಾಚರಣೆ ಮಾಡಲಾಗಿದೆ. ಮೇಲುಕೋಟೆ ಪೊಲೀಸ್ ಠಾಣೆ ಮುಂಭಾಗದಿಂದ ಚೆಲುವನಾರಾಯಣಸ್ವಾಮಿ ದೇವಸ್ಥಾನದವರೆಗೆ ಪಂಜಿನ ಮೆರವಣಿಗೆ ಮಾಡಿ ಟಿಪ್ಪು ಮತಾಂಧ ಎಂದು ಘೋಷಣೆ ಕೂಗಿದರು. ಬಳಿಕ ವೇದಿಕೆ ಮೇಲೆ ಭಾಷಣ ಮಾಡಿ ಬಿಜೆಪಿ ಕಾರ್ಯಕರ್ತರ, ಟಿಪ್ಪು ಸುಲ್ತಾನ್ ಹಾಗೂ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು,
ಟಿಪ್ಪು ಓರ್ವ ಮತಾಂಧ ಆತ ಯಾವ ಸ್ವಾತಂತ್ರ ಹೋರಾಟಗಾರನೂ ಅಲ್ಲ, ಟಿಪ್ಪುವನ್ನ ಕತ್ತರಿಸಿ ಎಸೆದಿದ್ದು ಇದೆ ಮಂಡ್ಯದ ಹುರಿ ಗೌಡ ಹಾಗೂ ಬೆಂಕಿ ಗೌಡರು. ಯಾವ ಬ್ರಿಟೀಷರು ಟಿಪ್ಪುವನ್ನ ಕೊಂದಿಲ್ಲ. ಕೊಂದಿದ್ದು ನಮ್ಮ ಸೇನಾನಿಗಳು. ಸಿದ್ದರಾಮಯ್ಯ ಮುಸ್ಲಿಂ ಮತವನ್ನ ಓಲೈಸೋ ಕೆಲಸ ಮಾಡ್ತಾರೆ. ಕಾಂಗ್ರೆಸ್ ನವರದ್ದು ಏನಿದ್ರು ಓಟ್ ಬ್ಯಾಂಕ್ ರಾಜಕಾರಣ. ಟಿಪ್ಪು ಓರ್ವ ಹೇಡಿ ಹಾಗೂ ಮತಾಂಧ ಎಂದು ವಾಗ್ದಾಳಿ ನಡೆಸಿದರು.
ಮೇಲುಕೋಟೆ ಪೊಲೀಸ್ ಠಾಣೆಯಿಂದ ಆರಂಭಗೊಂಡ ಮೆರವಣಿಗೆ ಚಲುಶನಾರಾಯಣ ದೇವಾಲಯದ ಬಳಿ ಅಂತ್ಯಗೊಂಡಿದ್ದು, ಪಂಜಿನ ಮೆರವಣಿಗೆಯಲ್ಲಿ ಸಹಸ್ರಾರುವ ಹಿಂದೂ ಕಾರ್ಯಕರ್ತರು, ಬಿಜೆಪಿ ಮುಖಂಡರು ಭಾಗವಹಿಸಿದ್ರು.