ಮಂಗಳೂರಿನಲ್ಲಿ ಬೈಕ್​ಗಳ ನಡುವೆ ಅಪಘಾತ; 10 ಅಡಿ ಎತ್ತರ ಹಾರಿ ಬಿದ್ದ ಸವಾರನ ವಿಡಿಯೋ ವೈರಲ್

|

Updated on: May 07, 2021 | 4:55 PM

ಬೈಕ್ ಸವಾರನನ್ನು ಬೊಂದೇಲ್ ನಿವಾಸಿ ಪ್ರಶಾಂತ್ (30) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸಕ್ಷನ್ 304(A) ಅಡಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರಿನಲ್ಲಿ ಬೈಕ್​ಗಳ ನಡುವೆ ಅಪಘಾತ; 10 ಅಡಿ ಎತ್ತರ ಹಾರಿ ಬಿದ್ದ ಸವಾರನ ವಿಡಿಯೋ ವೈರಲ್
10 ಅಡಿ ಎತ್ತರ ಹಾರಿ ಬಿದ್ದ ಬೈಕ್ ಸವಾರ
Follow us on

ದಕ್ಷಿಣ ಕನ್ನಡ: ದೇಶದಾದ್ಯಂತ ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದೆ. ಹೀಗಾಗಿ ರಸ್ತೆಗಳು ಸಂಪೂರ್ಣವಾಗಿ ಖಾಲಿಯಾಗಿದೆ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡ ಕೆಲವು ವಾಹನ ಸವಾರರು ಅತಿ ವೇಗವಾಗಿ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಅತಿ ವೇಗದ ವಾಹನ ಸಂಚಾರಕ್ಕೆ ಇಂದು ಸಂಭವಿಸಿದ ರಸ್ತೆ ಅಪಘಾತವೇ ಸಾಕ್ಷಿಯಾಗಿದ್ದು, ದಕ್ಷಿಣ ಕನ್ನಡ ಜನರಲ್ಲಿ ನಡುಕ ಹುಟ್ಟಿಸಿದೆ.

ಬೈಕ್​ಗಳ ನಡುವೆ ಅಪಘಾತವಾಗಿದ್ದು, ಬೈಕ್ ಸವಾರ 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಘಟನೆ ಮಂಗಳೂರಿನ ಪದವಿನಂಗಡಿ ಬಳಿ ನಡೆದಿದೆ. ಖಾಲಿ ಇದ್ದ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಬೈಕ್ ಪಕ್ಕದ ಅಂಗಡಿಗೆ ಗುದ್ದಿದ್ದು, ಅಪಘಾತದ ತೀವ್ರತೆಗೆ ಬೈಕ್​ನಲ್ಲಿದ ಸವಾರ ಹಾರಿ ರಸ್ತೆಗೆ ಅಪ್ಪಳಿಸಿದ್ದಾರೆ. ವೇಗವಾಗಿ ಬರುತ್ತಿದ್ದ ಬೈಕ್​ಗೆ ಸ್ಕೂಟಿಯೊಂದು ಅಡ್ಡ ಬಂದಿದೆ ಇದನ್ನು ತಪ್ಪಿಸಲು ಹೊರಟ ಬೈಕ್ ಸವಾರ ಅಂಗಡಿಗೆ ಗುದ್ದಿದ್ದಾರೆ. ಇನ್ನು ಹಿಂದೆ ಬರುತ್ತಿದ್ದ ಸವಾರ ಕೂಡ ಬೈಕ್​ಗೆ ತಗುಲಿ ರಸ್ತೆಗೆ ಬಿದ್ದಿದ್ದಾರೆ.ಒಟ್ಟಾರೆ ಒಂದು ಅವಘಾತದಿಂದ ಎರಡು ಬೈಕ್ ಅಪಘಾತಕ್ಕೀಡಾಗಿವೆ.

ಬೈಕ್ ಸವಾರನನ್ನು ಬೊಂದೇಲ್ ನಿವಾಸಿ ಪ್ರಶಾಂತ್ (30) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸಕ್ಷನ್ 304(A) ಅಡಿ ಪ್ರಕರಣ ದಾಖಲಿಸಲಾಗಿದೆ.ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಂದು ಬೆಳಗ್ಗೆ ನಡೆದ ಈ ಅಪಘಾತದ ವಿಡಿಯೋ ಸದ್ಯ ವೈರಲ್ ಆಗಿದೆ.

ಇದನ್ನೂ ಓದಿ:

ಒಂದು ಬೈಕ್​, ಆರು ಜನ, ಸಕುಟುಂಬ ಸಮೇತರಾಗಿ ಮದುವೆಗೆ ಪಯಣ; ಚಾಲಕನಿಗೆ ನಡು ರಸ್ತೆಯಲ್ಲೇ ಕೈ ಮುಗಿದ ಪೊಲೀಸರು

ಮುಂಬೈನಲ್ಲಿ ಸ್ವಂತ ಪ್ರಾಣ ಪಣಕ್ಕಿಟ್ಟು ರೈಲು ಅಪಘಾತದಿಂದ ಮಗು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ 50 ಸಾವಿರ ಬಹುಮಾನ

 

Published On - 4:31 pm, Fri, 7 May 21