ಮಂಗಳೂರು ಕುಕ್ಕರ್ ಸ್ಫೋಟದ ರೂವಾರಿ ಅರಾಫತ್ ಅಲಿ ಬಂಧನ‌ ಪ್ರಕರಣ: ತನಿಖೆಯಲ್ಲಿ‌ ಮತ್ತೊಂದು ವಿಧ್ವಂಸಕ ಮಾಹಿತಿ ಬಹಿರಂಗ

| Updated By: ರಮೇಶ್ ಬಿ. ಜವಳಗೇರಾ

Updated on: Sep 19, 2023 | 8:35 AM

ಮಂಗಳೂರು ಕುಕ್ಕರ್ ಸ್ಫೋಟದ ರೂವಾರಿ ಐಸಿಸ್ ಉಗ್ರ ಅರಾಫತ್ ಅಲಿ ನನ್ನು ಎನ್​ಐಎ ಬಂಧಿಸಿ ತೀವ್ರ ವಿಚಾರಣೆಗೊಳಪಿಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ‌ ಮತ್ತೊಂದು ವಿಧ್ವಂಸಕ ಮಾಹಿತಿ ಬಹಿರಂಗವಾಗಿದೆ.

ಮಂಗಳೂರು ಕುಕ್ಕರ್ ಸ್ಫೋಟದ ರೂವಾರಿ ಅರಾಫತ್ ಅಲಿ ಬಂಧನ‌ ಪ್ರಕರಣ: ತನಿಖೆಯಲ್ಲಿ‌ ಮತ್ತೊಂದು ವಿಧ್ವಂಸಕ ಮಾಹಿತಿ ಬಹಿರಂಗ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, (ಸೆಪ್ಟೆಂಬರ್ 19): ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕುಕ್ಕರ್ ಬ್ಲಾಸ್ಟ್ (mangaluru cooker blast case) ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ (Shivamogga Blast) ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ, ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಶಂಕಿತ ಐಸಿಸ್ ಉಗ್ರ ಅರಾಫತ್ ಅಲಿ(Arafat Ali) ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾದ ಈತ 2020 ರಲ್ಲಿ ದೇಶಬಿಟ್ಟು ತಲೆಮರೆಸಿಕೊಂಡಿದ್ದ. ಇದೀಗ ಕೀನ್ಯಾದ ನೈರೋಬಿಯಿಂದ ವಾಪಾಸಾಗುತ್ತಿದ್ದಾಗ ದೆಹಲಿ ಏರ್ಪೋರ್ಟ್ ನಲ್ಲಿ ಎನ್ಐಎ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯಲ್ಲಿ‌ ಮತ್ತೊಂದು ವಿಧ್ವಂಸಕ ಮಾಹಿತಿ ಬಹಿರಂಗವಾಗಿದೆ.

ತೀರ್ಥಹಳ್ಳಿ ಬರ್ದರ್ಸ್ ಕಾನ್ಸೆಪ್ಟ್ ಹುಟ್ಟು ಹಾಕಿದ್ದೆ ಅಬ್ದುಲ್ ಮತೀನ್. ಎನ್​ಐಎ ಮೋಸ್ಟ್ ವಾಂಟೇಡ್ ನಲ್ಲಿರುವ ಅಬ್ದುಲ್ ಮತೀನ್, 2014 ರಲ್ಲೇ ಉಗ್ರವಾದದ ನಂಟು ಅಂಟಿಸಿಕೊಂಡಿದ್ದ. ಬಳಿಕ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ಈ ವೇಳೆ 2020 ರಲ್ಲಿ ಮಾಜ್ ಮುನೀರ್, ಶಾರೀಕ್ ಹಾಗೂ ಅರಾಫತ್ ಅಲಿ ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಇವರನ್ನು ಅಬ್ದುಲ್ ಮತೀನ್ ಸಂಪರ್ಕ ಮಾಡಿದ್ದ. ಅಬ್ದುಲ್ ಮತೀನ್ ಸೂಚನೆಯಂತೆ ಅರಾಫತ್ ಅಲಿಯೂ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ನಂತರ ಅಲ್ಲಿಂದ ಶಾರೀಕ್ ಹಾಗೂ ಮಾಜ್ ಮುನೀರ್ ಗೆ ಉಗ್ರವಾದದ ಪಾಠ ಮಾಡುತ್ತಿದ್ದ. ಇವರಿಗೆ ಮೊದಲು ಟ್ರೈನಿಂಗ್ ಆಗಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದ.

ಇದನ್ನೂ ಓದಿ: NIA ಪೊಲೀಸರ ಕಾರ್ಯಚರಣೆ; ಕರ್ನಾಟಕದ ಭಯೋತ್ಪಾದನಾ ಚಟುವಟಿಕೆಯ ಕಿಂಗ್ ಪಿನ್ ಅರಾಫತ್ ಅಲಿ ಬಂಧನ

ಬಳಿಕ ನೀಡಿದ ಮೊದಲ ಟಾರ್ಗೇಟ್ ಕದ್ರಿ ದೇವಸ್ಥಾನದಲ್ಲಿ ಸ್ಫೋಟ. ಆದ್ರೆ ಮೊದಲ‌ ಯತ್ನವೇ ವಿಫಲವಾಗಿತ್ತು. ದಾರಿ ಮಧ್ಯೆಯೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ತೀರ್ಥಹಳ್ಳಿ ಬ್ರದರ್ಸ್ ಆಗುವ ಕನಸು ಆರಂಭದಲ್ಲಿ ದಾರಿ ತಪ್ಪಿತ್ತು. ಹೀಗಾಗಿಯೇ ಅರಾಫತ್ ಅಲಿ ವಾಪಸ್ಸು ಇಂಡಿಯಾಗೆ ಬಂದಿದ್ದ ಎನ್ನುವ ಅಂಶ ಎನ್​ಐಎ ತನಿಖೆಯಿಂದ ಬೆಳಕಿಗೆ ಬಂದಿದೆ.

ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಭಯೋತ್ಪಾದನಾ ಸಂಚು ಪ್ರಕರಣದ ಪ್ರಮುಖ ಆರೋಪಿ ಅರಾಫತ್ ಅಲಿಯನ್ನು ಎನ್ಐಎ ಸೆಪ್ಟೆಂಬರ್ 14ರಂದು ಬಂಧಿಸಿತ್ತು. ಮಂಗಳೂರಿನ‌ ಕದ್ರಿ ಮಂಜುನಾಥ ದೇಗುಲದ ಬಳಿ ಸ್ಫೋಟ ನಡೆಸುವ ಸಲುವಾಗಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗಿದ್ದ ಮೊಹಮ್ಮದ್ ಶಾರೀಕ್ ಜತೆಯೂ ಸಂಪರ್ಕದಲ್ಲಿದ್ದ ಈತ, ಮೂಲತಃ ತೀರ್ಥಹಳ್ಳಿ ಪಟ್ಟಣದ ಇಂದಿರಾನಗರದ ನಿವಾಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ