ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ […]

ಒಂದು ನಿಮಿಷದ ಕೆಲಸ, ಆದರೆ ಮಾಜಿ ಸಚಿವರಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ ಬದಲಾಯಿಸಿಕೊಳ್ಳದ ಮಾಜಿ ಸಚಿವರು!
’ಶಿಕ್ಷಣ ಸಚಿವ’ ಸುರೇಶ್ ಕುಮಾರ್​
Updated By: ಸಾಧು ಶ್ರೀನಾಥ್​

Updated on: Jul 30, 2021 | 11:06 AM

ಬೆಂಗಳೂರು: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅದು ನಿಜಕ್ಕೂ ಒಂದು ನಿಮಿಷದ ಕೆಲಸ, ಆದರೆ ರಾಜ್ಯ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿನ ಅನೇಕ ಮಾಜಿ ಸಚಿವರು ತಾವು ಖಾತೆ ಕಳೆದುಕೊಂಡು, ಮಾಜಿಗಳಾಗಿ 4 ದಿನ ಕಳೆದರೂ ‘ಟ್ವಿಟರ್​​ ಖಾತೆ’ಯನ್ನು ಬದಲಾವಣೆ ಮಾಡಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ದಿನ 4 ಆದರೂ ಇನ್ನೂ ಸಚಿವರಾಗಿಯೇ ರಾರಾಜಿಸುತ್ತಿದ್ದಾರೆ. ಅಥವಾ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಅದಮ್ಯ ವಿಶ್ವಾಸವಿದ್ದು, ಮತ್ತೆ ಅದಅದೇ ಖಾತೆಗಳನ್ನು ತಮಗೆ ದಯಪಾಲಿಸುತ್ತಾರೆ ಎಂಬ ಅಪಾರ ನಂಬಿಕೆಯೋ ಅಂತೂ ಅವರಿನ್ನೂ ಹಾಲಿ ಸಚಿವರಾಗಿ, ಖಾತೆಗಳ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್​ ಆದಿಯಾಗಿ ಅನೇಕ ಮಾಜಿ ಸಚಿವರು ಇಂತಹ ಚಿಕ್ಕ ಪ್ರಯತ್ನಕ್ಕೂ ಕೈ ಹಾಕದೆ, ಖಾತೆ ಕೈ ತಪ್ಪುವ ಭೀತಿಯಲ್ಲಿದ್ದಾರೆ.

ಕೆಲವರು ಮಾತ್ರ ಪ್ರಾಂಪ್ಟ್​:
ಬಿ ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಬದಲಾದ ನಂತರವೂ ಟ್ವಿಟರ್​​ನಲ್ಲಿ ಅನೇಕ ಮಾಜಿ ಸಚಿವರು ಇನ್ನೂ ತಮ್ಮ ಡೆಸಿಗ್ನೇಷನ್​ ಬದಲಾಯಿಸಿಕೊಂಡಿಲ್ಲ. ತಮ್ಮ ತಮ್ಮ ಇಲಾಖೆಗಳ ಹೆಸರು ಸಮೇತ ಅವರು ಸಚಿವರಾಗಿಯೇ ಮುಂದುವರಿದಿದ್ದಾರೆ! ಕೆಲವರು ಮಾತ್ರ ಪ್ರಾಂಪ್ಟ್​ ಆಗಿ ಮಾಜಿ ಸಚಿವರೆಂದು ಬರೆದುಕೊಂಡಿದ್ದಾರೆ. ಬಹುತೇಕ ಮಾಜಿ ಸಚಿವರು 4 ದಿನ ಕಳೆದರೂ, ಈ ಕ್ಷಣದವರೆಗೂ ಬದಲಾಯಿಸಿಕೊಳ್ಳದೆ ಹಾಲಿ ಸಚಿವರು ಎಂದೇ ದಾಖಲಾಗಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಗಿರಿಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದರೂ ಸದ್ಯಕ್ಕೆ ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ.

ಆರೋಗ್ಯ ಸಚಿವ ಡಾ. ಆರ್​ ಸುಧಾಕರ್ ಅಂತಹವರು ಮಾಜಿಗಳಾಗಿ ಬದಲಾವಣೆ ಕಂಡಿದ್ದಾರೆ

 

ಕೆ ಎಸ್​ ಈಶ್ವರಪ್ಪ ಅವರು ಇನ್ನೂ ತಮ್ಮ ಗ್ರಾಮೀಣಾಭಿವೃದ್ಧಿ ಖಾತೆಯಲ್ಲೇ ಮುಂದುವರಿದಿದ್ದಾರೆ.

Published On - 5:01 pm, Thu, 29 July 21