ಕೊಡಗಿನ ಚೆಕ್​ಪೋಸ್ಟ್​​ಗಳಲ್ಲಿ ನಕಲಿ ಆರ್​ಟಿಪಿಸಿಆರ್​ ವರದಿ ತೋರಿಸಿ ಸಿಕ್ಕಿಬಿದ್ದ ಕೇರಳಿಗರು; ಅಲ್ಲಿಂದಲೇ ವಾಪಸ್ ಕಳಿಸಿದ ಪೊಲೀಸರು

ಕೇರಳದಿಂದ ದಿನವೊಂದಕ್ಕೆ ಏನಿಲ್ಲವೆಂದರೂ 500 ವಾಹನಗಳು ಸರಕುಹೊತ್ತು ಕರ್ನಾಟಕ ಪ್ರವೇಶಿಸುತ್ತವೆ. ಈ ವಾಹನಗಳ ಚಾಲಕರು, ಜತೆಗಿರುವ ಸಿಬ್ಬಂದಿ ತಮ್ಮ ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ನೆಗೆಟಿವ್​ ಬಂದ​ ವರದಿಯನ್ನು ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಮುನ್ನ ತೋರಿಸಬೇಕು.

ಕೊಡಗಿನ ಚೆಕ್​ಪೋಸ್ಟ್​​ಗಳಲ್ಲಿ ನಕಲಿ ಆರ್​ಟಿಪಿಸಿಆರ್​ ವರದಿ ತೋರಿಸಿ ಸಿಕ್ಕಿಬಿದ್ದ ಕೇರಳಿಗರು; ಅಲ್ಲಿಂದಲೇ ವಾಪಸ್ ಕಳಿಸಿದ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 21, 2021 | 1:45 PM

ಮಡಿಕೇರಿ: ದೇಶಾದ್ಯಂತ ಕೊರೊನಾ ಎರಡನೇ ಬಾರಿಗೆ ಅಬ್ಬರಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡುಗಳಲ್ಲಿಯೇ ಜಾಸ್ತಿ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲೂ ಕೂಡ ದಿನೇದಿನೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಎರಡನೇ ಅಲೆಯಲ್ಲಿ ಕೊರೊನಾ ಬಗ್ಗೆ ಜನರು ಅಷ್ಟೊಂದು ಹೆದರಿಕೆ ಇದ್ದಂತೆ ಕಾಣುತ್ತಿಲ್ಲ. ಮಾಸ್ಕ್​ ಸರಿಯಾಗಿ ಧರಿಸುತ್ತಿಲ್ಲ. ಸಾಮಾಜಿಕ ಅಂತರ, ದೈಹಿಕ ಅಂತರ ನಿಯಮ ಪಾಲನೆ ಆಗುತ್ತಿಲ್ಲ. ಈ ಮಧ್ಯೆ ರಾಜ್ಯಸರ್ಕಾರ, ಸ್ಥಳೀಯ ಆಡಳಿತಗಳು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿವೆ. ಬೇರೆ ರಾಜ್ಯಗಳಿಂದ ಬರುವವರು ಕೊವಿಡ್​-19 ನೆಗೆಟಿವ್​ ರಿಪೋರ್ಟ್ ತರುವುದನ್ನು ಕಡ್ಡಾಯ ಮಾಡಲಾಗಿದೆ.

ಆದರೆ ಕೇರಳದಿಂದ ಕರ್ನಾಟಕಕ್ಕೆ ಬಂದ ಹಲವರು ಈ ವಿಚಾರದಲ್ಲಿ ವಂಚನೆ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹಲವರು ನಕಲಿ ಕೊವಿಡ್​-19 ಸರ್ಟಿಫಿಕೇಟ್​ ತೋರಿಸಿ ಗಡಿದಾಟಲು ಪ್ರಯತ್ನಿಸುತ್ತಿರುವುದಾಗಿ ಕೊಡಗು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ನಕಲಿ ಕೊವಿಡ್​-19 ವರದಿ ತೋರಿಸಿ ಹಲವರು ಸಿಕ್ಕಿಬಿದ್ದ ನಂತರ ಹೆಚ್ಚು ಜಾಗರೂಕರಾಗಿರುವುದಾಗಿಯೂ ತಿಳಿಸಿದ್ದಾರೆ.

ಕೇರಳದಿಂದ ದಿನವೊಂದಕ್ಕೆ ಏನಿಲ್ಲವೆಂದರೂ 500 ವಾಹನಗಳು ಸರಕುಹೊತ್ತು ಕರ್ನಾಟಕ ಪ್ರವೇಶಿಸುತ್ತವೆ. ಈ ವಾಹನಗಳ ಚಾಲಕರು, ಜತೆಗಿರುವ ಸಿಬ್ಬಂದಿ ತಮ್ಮ ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ನೆಗೆಟಿವ್​ ಬಂದ​ ವರದಿಯನ್ನು ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಮುನ್ನ ತೋರಿಸಬೇಕು. ಅದೂ ಇತ್ತೀಚೆಗಷ್ಟೇ ಪರೀಕ್ಷೆ ಮಾಡಿಸಿದ್ದಾಗಿರಬೇಕು. ಆದರೆ ಕೆಲವರು ವಾಹನಗಳ ಚಾಲಕರು, ಸಿಬ್ಬಂದಿ ಇದನ್ನು ನಕಲಿಯಾಗಿ ಸಿದ್ಧಪಡಿಸಿಕೊಂಡು ಬರುತ್ತಾರೆ. ಸಾಮಾನ್ಯವಾಗಿ ವರದಿಯಲ್ಲಿ ಒಂದು QR ಕೋಡ್​ ಇರುತ್ತದೆ. ಅದನ್ನು ಸ್ಕ್ಯಾನ್​ ಮಾಡಿದರೆ ನೆಗೆಟಿವ್​ ಎಂಬುದು ತಿಳಿಯುತ್ತದೆ. ಆದರೆ ನಕಲಿ ಸರ್ಟಿಫಿಕೇಟ್​ಗಳಲ್ಲಿನ QR ಕೋಡ್​ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಅದರ ಹೊರತಾಗಿಯೂ ಕೆಲವು ವ್ಯತ್ಯಾಸಗಳು ಕಂಡುಬಂದವು ಎಂದು ಕೊಡಗು ಎಸ್​​ಪಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ. ಇಂಥ ಪ್ರಕರಣಗಳು ಕಂಡು ಬಂದಾಗ ಅವರಿಗೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಕೊವಿಡ್​ ಟೆಸ್ಟ್​​ನಲ್ಲಿ ನಿರ್ಲಕ್ಷ್ಯ ಇನ್ನು ಕೊವಿಡ್​ 19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬೇರೆ ರಾಜ್ಯಗಳಿಂದ ಬರುವವರ ಕೊರೊನಾ ಟೆಸ್ಟ್​ ವರದಿಯನ್ನು ಪರಿಶೀಲಿಸಲು ಅಂತಾರಾಜ್ಯ ಗಡಿಗಳಲ್ಲಿ ಇರುವ ಚೆಕ್​ಪೋಸ್ಟ್​ನಲ್ಲಿ ಆರೋಗ್ಯ ಅಧಿಕಾರಿಗಳ ನೇಮಕ ಕಡ್ಡಾಯ ಮಾಡಲಾಗಿದೆ. ಆದರೆ ಮೈಸೂರು, ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 212ರ ಮೂಲೆಹೊಳೆ ಚೆಕ್​ಪೋಸ್ಟ್​ನಲ್ಲಿ ಯಾವುದೇ ಅಧಿಕಾರಿಗಳೂ ಇಲ್ಲ. ರಾತ್ರಿ 9ರಿಂದ ಮುಂಜಾನೆ 6ರವರೆಗೆ ಹೆದ್ದಾರಿ ಬಂದ್​ ಇದ್ದು, ಬೆಳಗ್ಗೆ 6ಕ್ಕೆ ತೆರೆದರೂ ಚೆಕ್ಕಿಂಗ್​ಗೆ ಯಾರೂ ಬರುತ್ತಿಲ್ಲ. ಇದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾಗಬೇಕು.. ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ -ಬಸನಗೌಡ ಪಾಟೀಲ್​ ಯತ್ನಾಳ್

Published On - 1:45 pm, Sun, 21 March 21

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು