ಬೆಂಗಳೂರು : ಸಜ್ಜನ ರಾಜಕಾರಣಿ, ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿದ್ದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ನಿಧನರಾಗಿ ಇಂದಿಗೆ ಎರಡು ವರ್ಷ ಸಂದಿದೆ. ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅನಂತ್ ಕುಮಾರ್ 2018ರ ನವೆಂಬರ್ 12ರಂದು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು. ಅನಂತ್ ಕುಮಾರ್ ನೆನಪಿಗಾಗಿ ನಗರದ ಲಾಲ್ಬಾಗ್ ಸಮೀಪ ನಿರ್ಮಿಸಲಾಗಿರುವ ಅನಂತ ಸ್ಮೃತಿ ಸ್ಮಾರಕಕ್ಕೆ ಇಂದು ಭೇಟಿ ನೀಡಿದ ಅವರ ಮಡದಿ ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಪತಿಯ ಎರಡನೇ ಪುಣ್ಯಸ್ಮರಣೆಯ ನಿಮಿತ್ತ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
We paid floral tributes to Shri @AnanthKumar_BJP on his second Punya Tithi at Ananth Smriti , opp lalbagh west gate. pic.twitter.com/Ix9GxZEsv6
— Tejaswini AnanthKumar (@Tej_AnanthKumar) November 12, 2020
‘ಅನಂತ’ ನೆನಪುಗಳನ್ನು ಹಂಚಿಕೊಂಡ ನಾಯಕರು!
ಅನಂತ್ ಕುಮಾರ್ರ ಎರಡನೇ ಪುಣ್ಯಸ್ಮರಣೆಯ ಪ್ರಯುಕ್ತ ಅನೇಕ ನಾಯಕರು ಟ್ವೀಟ್ ಮಾಡುವ ಮೂಲಕ ಮಾಜಿ ಕೇಂದ್ರ ಸಚಿವರನ್ನು ಸ್ಮರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ವೈಯಕ್ತಿಕ ಖಾತೆಯಲ್ಲಿ ಅನಂತ್ ಕುಮಾರ್ ಅವರೊಂದಿಗಿರುವ ಫೋಟೋ ಹಂಚಿಕೊಂಡಿದ್ದು ಅನಂತ್ ಕುಮಾರ್ ಅವರ ಸೇವೆ ಸದಾ ನೆನಪಿನಲ್ಲಿ ಉಳಿಯುತ್ತವೆ ಎಂದಿದ್ದಾರೆ.
ಆತ್ಮೀಯ ಸ್ನೇಹಿತ ಶ್ರೀ ಅನಂತಕುಮಾರ್ ಇಂದಿಗೆ ನಮ್ಮನ್ನು ಅಗಲಿ 2 ವರ್ಷ. ಆದರೆ ಜನಮಾನಸದಲ್ಲಿ ಅವರ ಸಾಧನೆ ಮತ್ತು ನೆನಪುಗಳು ಸದಾ ಹಸಿರಾಗಿವೆ. ಪಕ್ಷಕ್ಕಾಗಿ, ದೇಶಕ್ಕಾಗಿ ನಿರಂತರ ಶ್ರಮಿಸಿದ ಅವರ ಸಾರ್ಥಕ ಬದುಕು ಆದರ್ಶಪ್ರಾಯವಾಗಿದೆ. pic.twitter.com/ElAs62roAL
— B.S. Yediyurappa (@BSYBJP) November 12, 2020
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸದಾನಂದ ಗೌಡ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಸಂಸದ ಪ್ರತಾಪ್ ಸಿಂಹ, ಪೂನಂ ಮಹಾಜನ್ ಸೇರಿದಂತೆ ಅನೇಕ ನಾಯಕರು ಅನಂತ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡರಾಗಿದ್ದ, ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್ ರವರ ಪುಣ್ಯತಿಥಿಯಂದು ನನ್ನ ಗೌರವಪೂರ್ಣ ನಮನಗಳು.
ಸರಳ ಸಜ್ಜನಿಕೆಯ ನಡೆನುಡಿ, ಸಂಘಟನಾ ಚತುರತೆ, ಜನಸೇವೆ ಮೂಲಕ ಅವರ 'ಅದಮ್ಯ ಚೇತನ' ನಮ್ಮಲ್ಲಿ ಅಮರವಾಗಿದೆ.
@AnanthKumar_BJP pic.twitter.com/2y9dKYzAMp— Dr. Ashwathnarayan C. N. (@drashwathcn) November 12, 2020
भाजपा के वरिष्ठ नेता और पूर्व केंद्रीय मंत्री अनंत कुमार जी को पुण्यतिथि पर विनम्र अभिवादन।
— Nitin Gadkari (@nitin_gadkari) November 12, 2020
ಪಕ್ಷದ @BJP4India ಹಿರಿಯ ನಾಯಕ ಆತ್ಮೀಯ ಸ್ನೇಹಿತರಾಗಿದ್ದ ಶ್ರೀ ಅನಂತಕುಮಾರ್ ಅವರ ಎರಡನೇ ಪುಣ್ಯತಿಥಿ ಇಂದು. ಅವರನ್ನು ಗೌರವಾದರದಿಂದ ಸ್ಮರಿಸೋಣ. ಹಲವು ಸಲ ಸಂಸದರಾಗಿ, ಸಚಿವರಾಗಿ ಅವರು ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಅವರನ್ನು ನಾವೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.@Tej_AnanthKumar @BJP4Karnataka@BSYBJP pic.twitter.com/GTCChIG6Ft
— Sadananda Gowda (@DVSadanandGowda) November 12, 2020
पूर्व केंद्रीय मंत्री एवं भाजपा के वरिष्ठ नेता स्व. अनंत कुमार जी की पुण्यतिथि पर सादर श्रद्धासुमन। मृदुभाषी व अपने सौम्य स्वभाव के चलते वे प्रत्येक कार्यकर्ता के लिए नैतिकता की मिसाल थे। राष्ट्रसेवा एवं समाज हित में किए गए आपके कार्य सदैव स्मरणीय हैं।#AnanthKumar
— Vasundhara Raje (@VasundharaBJP) November 12, 2020
ಧೀಮಂತ ರಾಜಕಾರಣಿ, ದೇಶ ಕಂಡ ಅಪ್ರತಿಮ ಸಂಸದೀಯ ಪಟು, ಮಾಜಿ ಕೇಂದ್ರ ಸಚಿವ ಶ್ರೀ ಅನಂತ್ ಕುಮಾರ್ ಅವರ ಪುಣ್ಯತಿಥಿಯಂದು ಗೌರವ ನಮನಗಳು. pic.twitter.com/DmST8uvRWb
— Pratap Simha (@mepratap) November 12, 2020
Tributes to former Union Minister and our senior leader late Shri Ananthkumar ji on his death anniversary. His words of wisdom and guidance to young karyakartas will always inspire many, including me as we work for the party.
— Poonam Mahajan (@poonam_mahajan) November 12, 2020
ಬಾಲ್ಯದ ಫೋಟೋ ಹಂಚಿಕೊಂಡು ಅಪ್ಪನನ್ನು ನೆನೆದ ಮಗಳು
ಅಪ್ಪನ ಎರಡನೇ ವರ್ಷದ ಪುಣ್ಯ ತಿಥಿಯ ದಿನ ನಮ್ಮ ಕುಟುಂಬದ ಹಳೆಯ ಫೋಟೋವೊಂದನ್ನು ಹಂಚಿಕೊಳ್ಳುತ್ತಿರುವೆ ಎಂದು ತಮ್ಮ ಬಾಲ್ಯದ ಫೋಟೋವನ್ನು ಟ್ವೀಟ್ ಮಾಡಿರುವ ಪುತ್ರಿ ಐಶ್ವರ್ಯಾ ಅನಂತ್ ಕುಮಾರ್ ಅಪ್ಪನಿಲ್ಲದೆ ನಮ್ಮ ಕುಟುಂಬ ಅಪೂರ್ಣವಾಗಿದೆ. ಆದರೆ, ಅವರು ಕಲಿಸಿಕೊಟ್ಟ ಪಾಠ ನಮ್ಮನ್ನು ಸದಾ ದೇಶಸೇವೆ ಹಾಗೂ ಸಮಾಜಸೇವೆಗೆ ಪ್ರೇರೇಪಿಸುತ್ತದೆ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
Sharing an old family photo on Appa's 2nd punya tithi
Our family is incomplete. But Appa taught us not to mope but to get up and continue to serve our nation and our ppl in our own capacities. Join us for a silent march today evening to mark this day – https://t.co/LGPcAJxuPY pic.twitter.com/gO73P5fDLP
— Aishwarya Ananthkumar (@Aishwarya_A_K) November 12, 2020
Published On - 6:00 pm, Thu, 12 November 20