ಇಂದು ಚೂಡಾಮಣಿ ಸೂರ್ಯ ಗ್ರಹಣ, ಬಹುತೇಕ ದೇವಾಲಯಗಳು ಬಂದ್

ಬೆಂಗಳೂರು: ಇಂದು ಕಂಕಣ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಹೋಮಗಳನ್ನು ಮಾಡಿ ಬಾಗಿಲುಗಳ ಬಳಿ ದರ್ಬೆ ಇಟ್ಟು ಬಂದ್ ಮಾಡಲಾಗಿದೆ. ಬಾಗಲಕೋಟೆ ‌ಜಿಲ್ಲೆ ಬಾದಾಮಿ ‌ಸಮೀಪದ ಬನಶಂಕರಿದೇವಿ ದೇವಸ್ಥಾನದಲ್ಲಿ ಗ್ರಹಣದ ವೇಳೆ ಅರ್ಚಕರಿಂದ ಜಲಾಭಿಷೇಕ ನೆರವೇರಿದೆ. ಬೆಳಿಗ್ಗೆ 7 ರಿಂದ 9 ರವರೆಗೆ ಸರ್ವಾಂಗ ಅಭಿಷೇಕ ಪೂಜೆ ನಡೆದಿದೆ. ಗ್ರಹಣ ಮುಗಿದ ಬಳಿಕ ಅಭಿಷೇಕ ಅಲಂಕಾರ ಪೂಜೆ ನಡೆಸಿ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ ಎಂದು ಬನಶಂಕರಿ ದೇವಸ್ಥಾನದ ಟ್ರಸ್ಟ್ […]

ಇಂದು ಚೂಡಾಮಣಿ ಸೂರ್ಯ ಗ್ರಹಣ, ಬಹುತೇಕ ದೇವಾಲಯಗಳು ಬಂದ್
Follow us
ಆಯೇಷಾ ಬಾನು
|

Updated on:Jun 21, 2020 | 11:23 AM

ಬೆಂಗಳೂರು: ಇಂದು ಕಂಕಣ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಹೋಮಗಳನ್ನು ಮಾಡಿ ಬಾಗಿಲುಗಳ ಬಳಿ ದರ್ಬೆ ಇಟ್ಟು ಬಂದ್ ಮಾಡಲಾಗಿದೆ. ಬಾಗಲಕೋಟೆ ‌ಜಿಲ್ಲೆ ಬಾದಾಮಿ ‌ಸಮೀಪದ ಬನಶಂಕರಿದೇವಿ ದೇವಸ್ಥಾನದಲ್ಲಿ ಗ್ರಹಣದ ವೇಳೆ ಅರ್ಚಕರಿಂದ ಜಲಾಭಿಷೇಕ ನೆರವೇರಿದೆ. ಬೆಳಿಗ್ಗೆ 7 ರಿಂದ 9 ರವರೆಗೆ ಸರ್ವಾಂಗ ಅಭಿಷೇಕ ಪೂಜೆ ನಡೆದಿದೆ.

ಗ್ರಹಣ ಮುಗಿದ ಬಳಿಕ ಅಭಿಷೇಕ ಅಲಂಕಾರ ಪೂಜೆ ನಡೆಸಿ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ ಎಂದು ಬನಶಂಕರಿ ದೇವಸ್ಥಾನದ ಟ್ರಸ್ಟ್ ಮಂಡಳಿ ಸದಸ್ಯ ಮಹೇಶ್ ಪೂಜಾರಿ ತಿಳಿಸಿದ್ರು. ಇನ್ನು ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ಬೆಳಗ್ಗೆ 7ರಿಂದ 8ಗಂಟೆ ತನಕ ನವಗ್ರಹ ಹೋಮ ನಡೆದಿದೆ. ನಂತರ ದೇವಸ್ಥಾನದ ಬಾಗಿಲು ಮುಚ್ಚಲಾಗಿದೆ. ಗ್ರಹಣ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇವಾಲಯಗಳ ಬಾಗಿಲು ಮುಚ್ಚಾಗಿದೆ.

ಗ್ರಹಣ ಮೋಕ್ಷವಾದ ಬಳಿಕ ಮಧ್ಯಾಹ್ನ 1:35ರ ನಂತರ ದೇವಾಲಯದಲ್ಲಿ ಶುದ್ಧಿ ಕಾರ್ಯ ಮಾಡಲಾಗುತ್ತೆ. ನಂತರ ದೇವಾಲಯ ಸ್ವಚ್ಛಗೊಳಿಸಿ ಅಭಿಷೇಕ ಮಾಡಲಾಗುತ್ತೆ. ಸಂಜೆ 4 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕೊರೊನಾ ನಿಯಮಗಳ ಅನುಸಾರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ಸಾಮಾಜಿಕ ಅಂತರ, ಮಾಸ್ಕ್, ಮತ್ತು ಸೈನಿಟೈಸರ್ ಬಳಕೆ ಕಡ್ಡಾಯ.

ಇಂದು ವರ್ಷದ ಮೊದಲ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಸ್ವಾಮೀಜಿಗಳ ಜಪ ಆರಂಭವಾಗಿದೆ. ಕೃಷ್ಣಮಠದ ಗರ್ಭಗುಡಿ ಹೊರಭಾಗದಲ್ಲಿ ಸ್ವಾಮೀಜಿಗಳು ಸೂರ್ಯಗ್ರಹಣ ಮೋಕ್ಷದವರೆಗೆ ನಿರಂತರ ಜಪ ಮಾಡಲಿದ್ದಾರೆ.

Published On - 11:10 am, Sun, 21 June 20

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?