ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರೆಲ್ಲ ಕನ್ನಡಿಗರು, ಅವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ: ಡಿಕೆ ಶಿವಕುಮಾರ್
ಬೆಳಗಾವಿಯಲ್ಲಿ ವಾಸವಾಗಿರುವ ಮರಾಠಿ ಜನರ ಮಾತೃಭಾಷೆ ಮರಾಠಿಯಾದರೂ ಅವರೆಲ್ಲ ಕನ್ನಡಿಗರು, ಬೆಳಗಾವಿ ನಮ್ಮ ಭೂಮಿ, ನಮ್ಮ ನಾಡು, ಅಲ್ಲಿ ಹರಿಯೋದು ನಮ್ಮ ಜಲ, ಅಲ್ಲಿ ವಾಸವಾಗಿರುವ ಜನ ಮರಾಠಿಗರಾಗಿರಬಹುದು ಅಥವಾ ಕನ್ನಡಿಗರು ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಬಾಧ್ಯತೆ ಮತ್ತು ಕರ್ತವ್ಯವಾಗಿದೆ ಎಂದು ಶಿವಕುಮಾರ್ ಹೇಳಿದರು,
ಬೆಂಗಳೂರು: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಕಚೇರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ಜೊತೆ ಸಭೆ ನಡೆಸಲು ಆಗಮಿಸಿದ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬೆಳಗಾವಿಯಲ್ಲಿ ವಾಸವಾಗಿರುವ ಮರಾಠಿ ಭಾಷಿಕ ಕುಟುಂಬಗಳ ರಕ್ಷಣೆ ಮತ್ತು ಅವರಿಗೆ ಕನ್ನಡಿಗರಂತೆಯೇ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಬೆಳಗಾವಿ ಗಡಿಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕಚೇರಿಯೊಂದನ್ನು ಸ್ಥಾಪಿಸಲು ಉದ್ದೇಶಿಸಿರುವುದನ್ನು ಅವರ ಗಮನಕ್ಕೆ ತಂದಾಗ ಶಿವಕುಮಾರ್ ಶಾಂತರಾಗಿಯೇ; ಬೆಳಗಾವಿಯಲ್ಲಿ ವಾಸವಾಗಿರುವ ಮರಾಠಿ ಜನರ ಮಾತೃಭಾಷೆ ಮರಾಠಿಯಾದರೂ ಅವರೆಲ್ಲ ಕನ್ನಡಿಗರು, ಬೆಳಗಾವಿ ನಮ್ಮ ಭೂಮಿ, ನಮ್ಮ ನಾಡು, ಅಲ್ಲಿ ಹರಿಯೋದು ನಮ್ಮ ಜಲ, ಅಲ್ಲಿ ವಾಸವಾಗಿರುವ ಜನ ಮರಾಠಿಗರಾಗಿರಬಹುದು ಅಥವಾ ಕನ್ನಡಿಗರು ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಬಾಧ್ಯತೆ ಮತ್ತು ಕರ್ತವ್ಯವಾಗಿದೆ, ಬೆಳಗಾವಿ ಭಾಗದ ಕೆರೆಗಳಿಗೆ ನೀರು ತುಂಬಿಸುವ 900 ಕೋಟಿ ವೆಚ್ಚದ ಯೋಜನೆ ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗಲಿದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ