AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2022-23 ಸಾಲಿನಲ್ಲಿ ರಾಜ್ಯದಲ್ಲಿ 8805, ಬಳ್ಳಾರಿ ಜಿಲ್ಲೆ ಒಂದರಲ್ಲೇ 615 ಶಿಶುಗಳ ಸಾವು

2022-23ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 614 ಶಿಶುಗಳು ಮೃತಪಟ್ಟಿವೆ. ಅತಿಸಾರ, ತೀವ್ರ ಉಸಿರಾಟ ತೊಂದರೆ, ಅಪೌಷ್ಟಿಕತೆ, ಅವಧಿ ಪೂರ್ವ ಮಕ್ಕಳ ಜನನ, ಮನೆಯಲ್ಲಿ ಹೆರಿಗೆ ಸೇರಿದಂತೆ ಇತರೆ ಕಾರಣಗಳಿಂದ ಶಿಶುಗಳು ಮೃತಪಟ್ಟಿವೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2022-23 ಸಾಲಿನಲ್ಲಿ ರಾಜ್ಯದಲ್ಲಿ 8805, ಬಳ್ಳಾರಿ ಜಿಲ್ಲೆ ಒಂದರಲ್ಲೇ 615 ಶಿಶುಗಳ ಸಾವು
ಸಾಂದರ್ಭಿಕ ಚಿತ್ರ
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ವಿವೇಕ ಬಿರಾದಾರ|

Updated on:Feb 14, 2024 | 1:44 PM

Share

ಬಳ್ಳಾರಿ, ಫೆಬ್ರವರಿ 14: 2022-23ನೇ ಸಾಲಿನಲ್ಲಿ ಬಳ್ಳಾರಿ (Ballari) ಜಿಲ್ಲೆಯಲ್ಲಿ 614 ಶಿಶುಗಳು (Baby) ಮೃತಪಟ್ಟಿವೆ. ಅತಿಸಾರ, ತೀವ್ರ ಉಸಿರಾಟ ತೊಂದರೆ, ಅಪೌಷ್ಟಿಕತೆ, ಅವಧಿ ಪೂರ್ವ ಮಕ್ಕಳ ಜನನ, ಮನೆಯಲ್ಲಿ ಹೆರಿಗೆ ಸೇರಿದಂತೆ ಇತರೆ ಕಾರಣಗಳಿಂದ ಶಿಶುಗಳು ಮೃತಪಟ್ಟಿವೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಶಿಶುಗಳ ಸಾವಿನ ಪ್ರಮಾಣ‌ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇನ್ನು ಶಿಶುಗಳ ಸಾವಿಗೆ ತಾಯಂದಿರ ಆರೈಕೆಯಲ್ಲಿನ ವ್ಯತ್ಯಾಸವೂ ಒಂದು ಕಾರಣವಾಗಿದೆ. ಹಾಗೆ ಮಾತೃ ಪೂರ್ಣ ಯೋಜನೆ, ಮಾತೃವಂದನಾ, ಪೌಷ್ಟಿಕ ಆಹಾರ ವಿತರಣೆ ಇತರೆ ಯೋಜನೆಗಳು ಜಿಲ್ಲೆಯಲ್ಲಿ ವಿಫಲವಾಗಿವೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಹೆರಿಗೆ ವ್ಯವಸ್ಥೆ ಇಲ್ಲ ಎಂಬ ಆರೋಪವಿದೆ.

ರಾಜ್ಯದಲ್ಲಿನ ಶಿಶುಗಳ ಸಾವಿನ ಸಂಖ್ಯೆ

2022-23ರಲ್ಲಿ ರಾಜ್ಯದಲ್ಲಿ 8805 ಶಿಶುಗಳು ಮೃತಪಟ್ಟಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1371, ಮೈಸೂರು ಜಿಲ್ಲೆಯಲ್ಲಿ 669, ರಾಯಚೂರ ಜಿಲ್ಲೆಯಲ್ಲಿ 633, ಬಳ್ಳಾರಿ ಜಿಲ್ಲೆಯಲ್ಲಿ 614 ಶಿಶುಗಳು ಮೃತಪಟ್ಟಿವೆ.

ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಜಿಲ್ಲಾಡಳಿತ ಮುಂದಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತರ ಮೂಲಕ ತಾಯಂದಿರಿಗೆ ತಲುಪಬೇಕಾದ ಪ್ರೋಟೀನ್‌ಗಳನ್ನ ಮುಟ್ಟಿಸಲು ಕ್ರಮ ಕೈಗೊಳ್ಳುತ್ತವೆ. ಒಂದು ವೇಳೆ ಯೋಜನೆಗಳು ತಲುಪುವಲ್ಲಿ ವಿಫಲವಾಗಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:44 pm, Wed, 14 February 24