ಮೈಸೂರು: ಹೋಂ ಐಸೋಲೇಷನ್ನಲ್ಲಿರೊ ಸೋಂಕಿತರಿಗೆ ವೈದ್ಯಕೀಯ ನೆರವು; ವಿದ್ಯಾರ್ಥಿಗಳಿಂದ ಶ್ಲಾಘನೀಯ ಕಾರ್ಯ
ಅನೇಕ ರೋಗಿಗಳಿಗೆ ಟೆಲಿಮೆಡಿಸಿನ್ ಸೌಲಭ್ಯಗಳ ಬಗ್ಗೆ ತಿಳಿದಿಲ್ಲ. ಮತ್ತೊಂದೆಡೆ ಅವರಿಗೆ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಐಸೋಲೇಷನ್ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎನ್ನುವ ಜ್ಞಾನದ ಕೊರತೆ ಇದ್ದರಿಗೆ ಸಹಾಯ ಮಾಡಲು ವೈದ್ಯಕೀಯ ವಿದ್ಯಾರ್ಥಿಗಳ ತಂಡ ಸಹಾಯಕವಾಗಿದೆ.
ಮೈಸೂರು: ಜಿಲ್ಲೆಯಲ್ಲೊಂದು ಅಪರೂಪದ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರಿಗೆ ವೈದ್ಯಕೀಯ ನೆರವು ನೀಡುತ್ತಿದೆ. ವೈದ್ಯಕೀಯ ವಿದ್ಯಾರ್ಥಿಗಳ ತಂಡ ಕೊರೊನಾ ಸೋಂಕಿತ ವೃದ್ಧರ ಆರೈಕೆ ಮಾಡುತ್ತಿದೆ. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಮಹಮ್ಮದ್ ಮಾಜ್ ತಂಡದಿಂದ ವೈದ್ಯಕೀಯ ಸೇವೆ ನಡೆಯುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಮಾಜ್ ತಮ್ಮ ಸ್ನೇಹಿತರೊಂದಿಗೆ ವಾಟ್ಸ್ ಆಪ್ ಗ್ರೂಪ್ ಮಾಡಿ ಅಗತ್ಯವಿದ್ದವರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.
ಈ ವಿದ್ಯಾರ್ಥಿಗಳ ವೈದ್ಯಕೀಯ ತಂಡ ಹೋಂ ಐಸೋಲೇಷನ್ ಆದವರ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುತ್ತದೆ. ಸೋಂಕಿತನ ಆರೋಗ್ಯ ಸ್ಥಿತಿ ಗಮನಿಸಿ ಟೆಲಿಮೆಡಿಸನ್ ಬಗ್ಗೆ ಅರಿವು ಮೂಡಿಸುತ್ತದೆ. ಸೋಂಕಿತನಿಗೆ ಆಸ್ಪತ್ರೆಯ ಅವಶ್ಯಕತೆ ಇದ್ದಲ್ಲಿ ವಾರ್ ರೂಂಗೆ ರಿಜಿಸ್ಟರ್ ಮಾಡಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನು ವೈದ್ಯಕೀಯ ವಿದ್ಯಾರ್ಥಿಗಳ ಈ ಅಪರೂಪದ ತಂಡ ಮಾಡುತ್ತಿದೆ.
ಅನೇಕ ರೋಗಿಗಳಿಗೆ ಟೆಲಿಮೆಡಿಸಿನ್ ಸೌಲಭ್ಯಗಳ ಬಗ್ಗೆ ತಿಳಿದಿಲ್ಲ. ಮತ್ತೊಂದೆಡೆ ಅವರಿಗೆ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಐಸೋಲೇಷನ್ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎನ್ನುವ ಜ್ಞಾನದ ಕೊರತೆ ಇದ್ದರಿಗೆ ಸಹಾಯ ಮಾಡಲು ವೈದ್ಯಕೀಯ ವಿದ್ಯಾರ್ಥಿಗಳ ತಂಡ ಸಹಾಯಕವಾಗಿದೆ. ಈಗಾಗಲೇ ತಂಡದ ಸದಸ್ಯರು ನೂರಾರು ಮನೆಗಳಿಗೆ ಭೇಟಿ ನೀಡಿ ಬಿ.ಪಿ, ಶುಗರ್, ಆಕ್ಸಿಜನ್ ಪರೀಕ್ಷಿಸಿ ಸೂಕ್ತ ಸಲಹೆ ನೀಡಿದೆ. ಈ ನಿಸ್ವಾರ್ಥ ಸೇವೆಗೆ ಮುಂದಾದ ಮೆಡಿಕಲ್ ವಿದ್ಯಾರ್ಥಿಗಳ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಗಿಗಳಿಗೆ ಹಾಡು ಹೇಳಿ ರಂಜಿಸಿದ ವೈದ್ಯರು ಬೆಳಗಾವಿ: ಕೊವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಡು ಹೇಳಿ ವೈದ್ಯರು ರಂಜಿಸಿದ್ದಾರೆ. ಜಿಲ್ಲೆಯ ನಿಪ್ಪಾಣಿ ಪಟ್ಟಣದ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಮನರಂಜನೆ ನೀಡಿದ್ದಾರೆ. ಕೊರೊನಾ ರೋಗಿಗಳನ್ನು ಆವರಣದಲ್ಲಿ ಕೂರಿಸಿ ವೈದ್ಯಾಧಿಕಾರಿ ಗಣೇಶ್, ವೈದ್ಯೆ ಸೀಮಾ ಗುಂಜಾಳ ಹಾಡು ಹೇಳಿ ರಂಜಿಸಿದ್ದಾರೆ.
ಇದನ್ನೂ ಓದಿ
(Medical students help to corona infected in mysuru)
Published On - 2:30 pm, Sun, 16 May 21