ಸಿಎಂ ಬೊಮ್ಮಾಯಿ ಜೊತೆ ಸಮಾಧಾನಕರ ಭೇಟಿ ಬಳಿಕ, ಖಾತೆ ಅಧಿಕಾರ ಸ್ವೀಕರಿಸಿದ ಸಚಿವ ಆನಂದ್ ಸಿಂಗ್

| Updated By: ಸಾಧು ಶ್ರೀನಾಥ್​

Updated on: Aug 24, 2021 | 1:09 PM

ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ಖಾತೆಯನ್ನು ನಿಭಾಯಿಸಿ ಎಂದು ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ ಜೊತೆ ಸಮಾಧಾನಕರ ಭೇಟಿ ಬಳಿಕ, ಖಾತೆ ಅಧಿಕಾರ ಸ್ವೀಕರಿಸಿದ ಸಚಿವ ಆನಂದ್ ಸಿಂಗ್
ಬಸವರಾಜ ಬೊಮ್ಮಾಯಿ ಮತ್ತು ಆನಂದ್ ಸಿಂಗ್
Follow us on

ಬೆಂಗಳೂರು: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ 18 ದಿನಗಳು ಕಳೆದರೂ ಆನಂದ್ ಸಿಂಗ್ ಅವರು ರಾಜೀನಾಮೆ ವಿಚಾರ ಸದ್ಯಕ್ಕೆ ಇತ್ಯರ್ಥವಾಗಿದೆ. ನಾಳೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದು ಅದಕ್ಕೂ ಮುನ್ನ ಆನಂದ್​ ಸಿಂಗ್​ ಸಿಎಂ ಜೊತೆ ಸಮಾಧಾನಕರ ಭೇಟಿ ನಡೆಸಿದ್ದಾರೆ. ಈ ಮಧ್ಯೆ, ಸಚಿವರಾಗಿ ಖಾತೆ ಜವಾಬ್ದಾರಿ ನಿರ್ವಹಿಸುವುದಾಗಿ ಆನಂದ್​ ಸಿಂಗ್​ ಹೇಳಿದ್ದಾರೆ.

ಬೊಮ್ಮಾಯಿ-ಕಟೀಲು ಕಿವಿಮಾತು:
ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ಖಾತೆಯನ್ನು ನಿಭಾಯಿಸಿ ಎಂದು ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಅವರ ಆದೇಶದಂತೆ ನಾನು ಇಂದು ಕೆಲಸಕ್ಕೆ ಬಂದಿದ್ದೇನೆ. ಆದಾಗ್ಯೂ, ಈ ಹಿಂದೆ ಸಲ್ಲಿಸಿದ್ದ ಮನವಿಯನ್ನೇ ಇಂದೂ ಸಲ್ಲಿಸಿರುವೆ. ನನ್ನ ಮನವಿಯನ್ನು ಪರಿಗಣಿಸುವುದಾಗಿ ಸಿಎಂ ಹೇಳಿದ್ದಾರೆ. ವರಿಷ್ಠರ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಇಂದು ನಾನು ನನ್ನ ಖಾತೆಯನ್ನ ವಹಿಸಿಕೊಳ್ಳುತ್ತೇನೆ ಎಂದು ವಿಕಾಸಸೌಧದಲ್ಲಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಭೇಟಿ ನನ್ನ ಮನವಿಗಳನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ. ಮೊದಲು ಖಾತೆಯನ್ನು ನಿಭಾಯಿಸಿ ಎಂದು ಹೇಳಿರುವುದಾಗಿ ಸಚಿವ ಆನಂದ್ ಸಿಂಗ್ ಹೇಳಿದರು.

ಇನ್ನು, ನಾಳೆ ಸಂಜೆ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ. ದೆಹಲಿ ಭೇಟಿ ವೇಳೆ ಎಲ್ಲವನ್ನು ಸರಿ ಮಾಡುವ ಭರವಸೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತುಕತೆಯ ವೇಳೆ ಸಚಿವ ಆರ್.ಅಶೋಕ್ ಮತ್ತು ಶಾಸಕ ರಾಜೂ ಗೌಡ ಸಹ ಉಪಸ್ಥಿತರಿದ್ದರು. ಹಾಗಾಗಿ ನನ್ನ ಬೇಡಿಕೆ ಈಡೇರುವ ಭರವಸೆ ಇದೆ ಎಂದು ಆನಂದ್​ ಸಿಂಗ್​ ತಿಳಿಸಿದರು.

ಅಧಿಕಾರಿಗಳ ಜೊತೆ ಸಚಿವ ಆನಂದ್ ಸಿಂಗ್ ಸಭೆ
ನಿರಂತರ ರಾಜಕೀಯ ಬೆಳವಣಿಗೆಗಳ ಬಳಿಕ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ವಿಕಾಸಸೌಧದಲ್ಲಿ ಅಧಿಕಾರಿಗಳ ಜೊತೆ  ಸಭೆ ನಡೆಸಿದರು. ಈ ವೇಳೆ ಸಭೆಯಲ್ಲಿ ಸಚಿವ ಅಶೋಕ್ ಮತ್ತು ಶಾಸಕ ರಾಜುಗೌಡ ಉಪಸ್ಥಿತಿತರಿದ್ದರು.

ಮುಂದಿನ ದಿನಗಳಲ್ಲಿ 24 ಗಂಟೆಯೂ ಕೆಲಸ ಮಾಡ್ತಾರೆ
ಸಚಿವ ಆನಂದ್ ಸಿಂಗ್ ಯಾವುದೇ ಬ್ಲ್ಯಾಕ್‌ಮೇಲ್ ಮಾಡಿಲ್ಲ. ಆನಂದ್ ಸಿಂಗ್ ತಮ್ಮ ಖಾತೆಯನ್ನು ವಹಿಸಿಕೊಂಡಿದ್ದಾರೆ. ಸಚಿವ ಆನಂದ್ ಸಿಂಗ್ ದೆಹಲಿಗೆ ಹೋಗಲ್ಲ. 18 ದಿನಗಳ ಕಾಲ ಖಾತೆಯನ್ನು ವಹಿಸಿಕೊಳ್ಳದ ಹಿನ್ನೆಲೆ ಮುಂದಿನ ದಿನಗಳಲ್ಲಿ 24 ಗಂಟೆಯೂ ಕೆಲಸ ಮಾಡ್ತಾರೆ ಎಂದು ವಿಕಾಸಸೌಧದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸುತ್ತಾ ಬಿಜೆಪಿ ಶಾಸಕ ರಾಜುಗೌಡ ತಿಳಿಸಿದರು.

(minister anand singh to take charge of ministership in vikasa soudha today)

Published On - 12:47 pm, Tue, 24 August 21