ಬೆಂಗಳೂರು: ಟ್ರಯಾಜ್ ಸೆಂಟರ್ಗಳಿಂದ ಆಸ್ಪತ್ರೆಗಳ ಬೆಡ್ ಬುಕ್ ಮಾಡುವ ನೂತನ ತಂತ್ರಾಂಶಕ್ಕೆ ಸಚಿವ ಅರವಿಂದ ಲಿಂಬಾವಳಿ ಗುರುವಾರ ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ಚಾಲನೆ ನೀಡಿದರು. ಕೊವಿಡ್ ವಾರ್ ರೂಂ ಉಸ್ತುವಾರಿ ಹೊಣೆಯೂ ಈಗ ಸಚಿವ ಅರವಿಂದ ಲಿಂಬಾವಳಿ ಅವರ ಮೇಲಿದೆ. ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ಕಾರ್ಯಕ್ರಮ ನಡೆಯಿತು. ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ, ಪಾಲಿಕೆ ವಿಶೇಷ ಆಯುಕ್ತ ರಂದೀಪ್ ಮತ್ತು ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಡ್ ಬುಕಿಂಗ್ ವೇಳೆ ಬಿಬಿಎಂಪಿ ಅಧಿಕಾರಿಗಳು ಮತ್ತು ವಾರ್ ರೂಂ ಸಿಬ್ಬಂದಿ ಭಾಗಿಯಾಗಿ ಅಕ್ರಮ ನಡೆಸುತ್ತಿದ್ದರು. ಈ ವಿಚಾರವನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್, ಸತೀಶ್ ರೆಡ್ಡಿ ಇತರರು ಬಯಲಿಗೆಳೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದರು.
ಈ ಕಾರ್ಯಾಚರಣೆಯ ನಂತರ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ಆರೋಪ ಸಂಬಂಧ 17 ವಾರ್ ರೂಮ್ ನೌಕರರನ್ನು ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಯುವ ಕಾಂಗ್ರೆಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿತು.
ಏನಿದು ಬೆಡ್ ಬ್ಲಾಕಿಂಗ್ ಪ್ರಕರಣ?
ಕೆಲವು ದಿನಗಳ ಮುನ್ನ ಬೆಂಗಳೂರು ದಕ್ಷಿಣ ವಲಯದ ಕೊವಿಡ್ ವಾರ್ ರೂಂಗೆ ಹಠಾತ್ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ಸಂಗಡಿಗರು, ಬೆಡ್ ಬ್ಲಾಕಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದರು.
ಎ ಸಿಂಪ್ಟಮ್ಯಾಟಿಕ್ ಬಂದಿರುವ ವ್ಯಕ್ತಿಯ ಹೆಸರಿನಲ್ಲಿ ಬೆಡ್ ಬುಕ್ ಮಾಡಲಾಗುತ್ತೆ. 12 ಗಂಟೆಗಳ ನಡುವೆ ಯಾರ ಹೆಸರಲ್ಲಿ ಬೆಡ್ ಬುಕ್ ಆಗಿದೆಯೋ ಅವರು ಆಸ್ಪತ್ರೆಗೆ ದಾಖಲಾಗದಿದ್ದರೆ ಆ ಬೆಡ್ ಅವರ ಹೆಸರಿಂದ ಅನ್ ಬ್ಲಾಕ್ ಆಗುತ್ತೆ. ಆದರೆ 12 ಗಂಟೆಯ ಒಳಗೆ ವಾರ್ ರೂಂನಲ್ಲಿ ಕುಳಿತವರು ಹೊರಗಿನ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿ ಅಂಥವರಿಗೆ ಬೆಡ್ ಕೊಡ್ತಾರೆ. ಎ ಸಿಂಪ್ಟಮ್ಯಾಟಿಕ್ ಇರುವ ವ್ಯಕ್ತಿಯ ಹೆಸರಲ್ಲಿ ಬೆಡ್ ಬುಕ್ ಆಗಿರುವ ಕುರಿತು ಅಂತಹ ವ್ಯಕ್ತಿಗೇ ತಿಳಿದಿರುವುದಿಲ್ಲ. ಅಂತಹ ಹಲವು ದಾಖಲೆಗಳು ನಮ್ಮಲ್ಲಿವೆ. ಓರ್ವ ವ್ಯಕ್ತಿಗೆ ಕೊರೊನಾ ಬಂದು 20 ದಿನಗಳ ನಂತರ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವಾರ್ ರೂಂ ಏಜೆನ್ಸಿಗಳು ಬೆಡ್ಗಲ ಕೃತಕ ಅಭಾವ ಸೃಷ್ಟಿಸುತ್ತಿವೆ ಎಂದು ಅವರು ದೂರಿದ್ದರು
ಬಿಬಿಎಂಪಿಯ ಅಧಿಕಾರಿಗಳ ಈ ಅವ್ಯವಹಾರದ ಬಗ್ಗೆ ರಾತ್ರಿ 2 ಗಂಟೆ 3 ಗಂಟೆ ವರೆಗೆ ಬೆನ್ನು ಬಿದ್ದು ಈ ಡೇಟಾ ಸಂಗ್ರಹಿಸಿದ್ದೇವೆ. ಯಾವ ಅಧಿಕಾರಿಗಳು ಸರಿಯಾದ ವಿವರ ಕೊಡುತ್ತಿಲ್ಲ. 5,000 ಬೆಡ್ಗಳ ಮಾಹಿತಿ ಸಿಗುತ್ತಿಲ್ಲ. ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗಿ 12 ಗಂಟೆ ಒಂದು ನಿಮಿಷಕ್ಕೆ ರೋಗಿ ದಾಖಲಾಗುತ್ತಾನೆ. ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದರು. ಆ ನಂತರ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೆಸರೂ ಕೇಳಿಬಂದಿತ್ತು. ಈ ಎಲ್ಲ ಆಯಾಮದ ಕುರಿತು ತನಿಖೆ ನಡೆಯುತ್ತಿದೆ.
(Minister Arvind Limbavali Opens New Software for bed Blocking)
ಇದನ್ನೂ ಓದಿ: ಕೊರೊನಾ ಬೆಡ್ಗಳು ಖಾಲಿ ಖಾಲಿ! ರಾಜಧಾನಿ ಬೆಂಗಳೂರಲ್ಲಿ ನಿಯಂತ್ರಣಕ್ಕೆ ಬಂದ ಸೋಂಕು, ನಿಯಂತ್ರಣಕ್ಕೆ ಬಂದ ಬೆಡ್ ಬೇಡಿಕೆ
ಇದನ್ನೂ ಓದಿ: ಕಾಂಗ್ರೆಸ್ನ ಕೆಲ ಬುದ್ಧಿಜೀವಿಗಳು ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ: ಸಂಸದ ತೇಜಸ್ವಿ ಸೂರ್ಯ
Published On - 3:23 pm, Thu, 3 June 21