ಕೊರೊನಾ ಬೆಡ್​ಗಳು ಖಾಲಿ ಖಾಲಿ! ರಾಜಧಾನಿ ಬೆಂಗಳೂರಲ್ಲಿ ನಿಯಂತ್ರಣಕ್ಕೆ ಬಂದ ಸೋಂಕು, ನಿಯಂತ್ರಣಕ್ಕೆ ಬಂದ ಬೆಡ್ ಬೇಡಿಕೆ

ಕೊರೊನಾ ಬೆಡ್​ಗಳು ಖಾಲಿ ಖಾಲಿ! ರಾಜಧಾನಿ ಬೆಂಗಳೂರಲ್ಲಿ ನಿಯಂತ್ರಣಕ್ಕೆ ಬಂದ ಸೋಂಕು, ನಿಯಂತ್ರಣಕ್ಕೆ ಬಂದ ಬೆಡ್ ಬೇಡಿಕೆ
ಪ್ರಾತಿನಿಧಿಕ ಚಿತ್ರ

ಮೇ ತಿಂಗಳಲ್ಲಿ ಬೆಡ್ಗೆ ಹಾಹಾಕಾರ ಶುರುವಾಗಿತ್ತು. ಸದ್ಯ ಜೂನ್ನಲ್ಲಿ ಬೆಡ್ ಬೇಡಿಕೆ ಕಡಿಮೆಯಾಗಿದೆ. ಸರ್ಕಾರಿ ಕೋಟಾದ 13,383 ಬೆಡ್ ಪೈಕಿ 8,366 ಬೆಡ್ಗಳು ಖಾಲಿ ಉಳಿದಿವೆ. ನಗರದಲ್ಲಿ ಇನ್ನೂ 4920 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಒಟ್ಟು ಜನರಲ್ ಬೆಡ್ಗಳ ಸಂಖ್ಯೆ 7,191. ಈ ಪೈಕಿ ಜನರಲ್ ಬೆಡ್ನಲ್ಲಿ 1,304 ಸೋಂಕಿತರು ದಾಖಲಾಗಿದ್ದು 5,848 ಬೆಡ್ ಖಾಲಿ ಇದೆ.

TV9kannada Web Team

| Edited By: Ayesha Banu

Jun 02, 2021 | 3:41 PM


ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ರಾಜ್ಯದಲ್ಲಿ ಕೊರೊನಾ ಬೆಡ್​ಗಳ ಅಭಾವ ಎದುರಾಗಿ ಜನ ಬೆಡ್ ಇಲ್ಲದೆ ಆಂಬ್ಯುಲೆನ್ಸ್​​​ಗಳಲ್ಲೇ ನರಳಿ ನರಳಿ, ತಮ್ಮ ಪ್ರೀತಿಪಾತ್ರರ ಎದುರೇ ಪ್ರಾಣ ಬಿಡುತ್ತಿದ್ದರು. ಆದರೆ ಸದ್ಯ ಈಗ ಬೆಡ್ ಸಮಸ್ಯೆ ಬಗೆಹರಿದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಬೆಡ್ ಬೇಡಿಕೆ ತಗ್ಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಇಳಿಕೆಯಾದ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಕೊಂಚ ಮಟ್ಟಿಗೆ ಬೆಡ್​ಗಳು ಖಾಲಿಯಾಗಿವೆ.

ಮೇ ತಿಂಗಳ ಆರಂಭದಲ್ಲಿ ಬೆಡ್​ಗಳ ಹಾಹಾಕಾರ ಎದುರಾಗಿತ್ತು. ಸದ್ಯ ಜೂನ್​ ತಿಂಗಳು ಆರಂಭವಾಗಿದ್ದು, ಬೆಡ್ ಬೇಡಿಕೆ ಕಡಿಮೆಯಾಗಿದೆ. ಸರ್ಕಾರಿ ಕೋಟಾದ 13,383 ಬೆಡ್ ಪೈಕಿ 8,366 ಬೆಡ್ಗಳು ಖಾಲಿ ಉಳಿದಿವೆ. ನಗರದಲ್ಲಿ ಇನ್ನೂ 4920 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಒಟ್ಟು ಜನರಲ್ ಬೆಡ್​ಗಳ ಸಂಖ್ಯೆ 7,191. ಈ ಪೈಕಿ ಜನರಲ್ ಬೆಡ್ನಲ್ಲಿ 1,304 ಸೋಂಕಿತರು ದಾಖಲಾಗಿದ್ದು 5,848 ಬೆಡ್ ಖಾಲಿ ಇದೆ.

4,964 ಹೆಚ್ಡಿಯು ಬೆಡ್ ಪೈಕಿ 2475 HDU ಬೆಡ್ ಖಾಲಿ. 639 ICU ವೆಂಟಿಲೇಟರ್ ಬೆಡ್ ಪೈಕಿ 17 ಬೆಡ್ ಖಾಲಿ ಇದೆ. ಹಾಗೂ 589 ಐಸಿಯು ಬೆಡ್ ಪೈಕಿ 25 ಐಸಿಯು ಬೆಡ್ ಖಾಲಿ ಇದೆ. ಸದ್ಯ ನಗರದಲ್ಲಿ ಸೋಂಕು ಇಳಿಮುಖವಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಕಾಣಿಸುತ್ತಿವೆ ಖಾಲಿ ಬೆಡ್


Follow us on

Related Stories

Most Read Stories

Click on your DTH Provider to Add TV9 Kannada