ನಾನು ಸಿಎಂ ಬಗ್ಗೆ ಮಾತಾಡಿದ್ರೆ ಬೆಂಕಿ ಹೊತ್ತಿಕೊಳ್ಳುತ್ತದೆ.. ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂಬ ಸಿಎಂ ಹೇಳಿಕೆಗೆ ಸಿ.ಪಿ.ಯೋಗೇಶ್ವರ್ ಉತ್ತರ

| Updated By: ಆಯೇಷಾ ಬಾನು

Updated on: Jun 06, 2021 | 12:32 PM

ನಾನು ಸಿಎಂ ಬಗ್ಗೆ ಮಾತಾಡಿದ್ರೆ ಬೆಂಕಿ ಹೊತ್ತಿಕೊಳ್ಳುತ್ತದೆ. ಒಂದು ವಾರದಿಂದ ಇದೇ ರೀತಿಯಾಗಿ ಆಗುತ್ತಿದೆ. ಸಿಎಂ ಏನು ಹೇಳಿದ್ದಾರೆಂದು ನನಗೆ ಸ್ಪಷ್ಟ ಮಾಹಿತಿ ಇಲ್ಲ. ಸಿಎಂ ಯಡಿಯೂರಪ್ಪ ಶಕ್ತಿ ಮೀರಿ ಕೊವಿಡ್ ನಿರ್ವಹಣೆ ಕೆಲಸ ಮಾಡುತ್ತಿದ್ದಾರೆ. -ಸಿ.ಪಿ.ಯೋಗೇಶ್ವರ್

ನಾನು ಸಿಎಂ ಬಗ್ಗೆ ಮಾತಾಡಿದ್ರೆ ಬೆಂಕಿ ಹೊತ್ತಿಕೊಳ್ಳುತ್ತದೆ.. ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂಬ ಸಿಎಂ ಹೇಳಿಕೆಗೆ ಸಿ.ಪಿ.ಯೋಗೇಶ್ವರ್ ಉತ್ತರ
ತಾನು ಯಡಿಯೂರಪ್ಪ ಪರ ಎಂದು ಘೋಷಿಸಿದ ಬಳಿಕ ಸಚಿವ ಯೋಗೇಶ್ವರ್ ಇಂದು ತಮ್ಮ ಪ್ರವಾಸೋದ್ಯಮ ಇಲಾಖೆ ಕಾರ್ಯಗಳಲ್ಲಿ ಫುಲ್​ ಬ್ಯುಸಿ!
Follow us on

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆ ನಡೆಯುತ್ತಿದ್ದ ಬೆನ್ನಲ್ಲೆ ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ನಾನು ಸಿಎಂ ಬಗ್ಗೆ ಮಾತಾಡಿದ್ರೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ರಾಮನಗರದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ನಾನು ಸಿಎಂ ಬಗ್ಗೆ ಮಾತಾಡಿದ್ರೆ ಬೆಂಕಿ ಹೊತ್ತಿಕೊಳ್ಳುತ್ತದೆ. ಒಂದು ವಾರದಿಂದ ಇದೇ ರೀತಿಯಾಗಿ ಆಗುತ್ತಿದೆ. ಸಿಎಂ ಏನು ಹೇಳಿದ್ದಾರೆಂದು ನನಗೆ ಸ್ಪಷ್ಟ ಮಾಹಿತಿ ಇಲ್ಲ. ಸಿಎಂ ಯಡಿಯೂರಪ್ಪ ಶಕ್ತಿ ಮೀರಿ ಕೊವಿಡ್ ನಿರ್ವಹಣೆ ಕೆಲಸ ಮಾಡುತ್ತಿದ್ದಾರೆ. ಈವರೆಗೆ ನಾನು ಸಿಎಂ ಬಗ್ಗೆ ಏನನ್ನೂ ಮಾತನಾಡಿಯೇ ಇಲ್ಲ. ಈಗಲೂ ಸಿಎಂ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ಹೀಗಾಗಿ ವರಿಷ್ಠರು ನಿರ್ಧರಿಸ್ತಾರೆ. ಯಾರು ಬೇಕು, ಯಾರು ಬೇಡವೆಂದು ವರಿಷ್ಠರಿಂದ ನಿರ್ಧಾರವಾಗುತ್ತೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ರು.

ಇನ್ನು ಇಂದು ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ. ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದೆ. ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ, ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಮುಂದುವರಿಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ. ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ದೆಹಲಿಗೆ ಹೋಗಿದ್ದರು. ಬಳಿಕ ದೆಹಲಿಯಿಂದ ಹಿಂದಿರುಗಿ ಮುಖ್ಯಮಂತ್ರಿಯ ಬದಲಾವಣೆ ನನ್ನ ಮೂಲ ಉದ್ದೇಶವಲ್ಲ. ಮುಖ್ಯಮಂತ್ರಿಯನ್ನು ಬದಲಿಸುವಷ್ಟು ಶಕ್ತಿ ನನಗೆ ಇಲ್ಲ. ನಾನು ದೆಹಲಿಗೆ ಹೋಗ್ತಾ ಇರುತ್ತೇನೆ ಬರ್ತಾ ಇರುತ್ತೇನೆ. ನಾನು ವೈಯಕ್ತಿಕ ವಿಚಾರಕ್ಕಾಗಿ ದೆಹಲಿಗೆ ಹೋಗಿದ್ದೇನೆ. ನನ್ನ ವಿಚಾರ ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ವರಿಷ್ಠರ ಮುಂದೆ ನನ್ನ ನೋವು ತೋಡಿಕೊಳ್ಳುತ್ತೇನೆ. ನನಗೂ ಒಂದಿಷ್ಟು ನೋವು, ಆತಂಕಗಳಿವೆ. ಅಪ್ಪನ ಅಧಿಕಾರವನ್ನು ಮಗ ಚಲಾಯಿಸೋದನ್ನು ನಾನು ಒಪ್ಪಲ್ಲ. ವರಿಷ್ಠರು ಸಿಗೋವರೆಗೂ ನಾನು ದೆಹಲಿ ಹೋಗುತ್ತಾ ಇರ್ತಿನಿ. ಆದರೆ ಅರವಿಂದ ಬೆಲ್ಲದ್ ಏಕೆ ದೆಹಲಿಗೆ ಹೋಗಿದ್ದರೆಂದು ಗೊತ್ತಿಲ್ಲ ಎಂದು ದೆಹಲಿಗೆ ಹೋಗಿದ್ದ ಬಗ್ಗೆ ಯೋಗೇಶ್ವರ್ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಸಚಿವಗಿರಿ ನನ್ನ ಮಗ ಚಲಾಯಿಸಿದರೆ ಒಪ್ಪಲ್ಲ.. ಪರೋಕ್ಷವಾಗಿ ಬಿ.ವೈ. ವಿಜಯೇಂದ್ರಗೆ ಟಾಂಗ್ ಕೊಟ್ಟ ಸಚಿವ ಸಿ.ಪಿ. ಯೋಗೇಶ್ವರ್