ಬೆಂಗಳೂರು: ಶ್ರೀರಂಗಪಟ್ಟಣ ದಸರಾ ಆಚರಣೆ ಕುರಿತು ವಿಧಾನಸೌಧದಲ್ಲಿ ಸಚಿವ ಕೆ.ಸಿ. ನಾರಾಯಣಗೌಡರಿಂದ ಸಭೆ ನಡೆಸಲಾಗಿದೆ. ಅಕ್ಟೋಬರ್ 9, 10, 11 ರಂದು ಶ್ರೀರಂಗಪಟ್ಟಣ ದಸರಾ ಆಚರಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಶ್ರೀರಂಗಪಟ್ಟಣ ದಸರಾ ನಡೆಸುವುದಕ್ಕೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜಂಬೂಸವಾರಿಗೆ ಅಂಬಾರಿ ಹೊರಲು ಆನೆ ತರಲು ಅರಣ್ಯ ಪಶುಸಂಗೋಪನಾ ಇಲಾಖೆ ಜೊತೆಗೆ ಚರ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕ್ರೀಡಾ ಇಲಾಖೆ ವತಿಯಿಂದ ಫಿಟ್ ಇಂಡಿಯಾ, ಕಬ್ಬಡ್ಡಿ, ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಶ್ರೀರಂಗಪಟ್ಟಣದ ಪ್ರಮುಖ ಬೀದಿ, ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಲು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಪಾಂಡವಪುರ ಕೆರೆ ತೊಣ್ಣೂರು, ಕೆಆರ್ಎಸ್ ಹಿನ್ನೀರಲ್ಲಿ ಬೋಟಿಂಗ್, ಜಲಕ್ರೀಡೆಗಳನ್ನು ಆಯೋಜಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಮೈಸೂರು: ಅರಮನೆ ಆವರಣದಲ್ಲಿ ಆನೆಯ ರಂಪಾಟ
ಮೈಸೂರು ಅರಮನೆ ಆವರಣದಲ್ಲಿ ಆನೆಯೊಂದು ರಂಪಾಟ ಮಾಡಿದ ಘಟನೆ ಇಂದು ನಡೆದಿದೆ. ಚೈನ್ ಕಿತ್ತುಕೊಂಡು ಅರಮನೆಯ ಹೆಣ್ಣಾನೆ ರಂಪಾಟ ಮಾಡಿದೆ. ಇದರಿಂದ ಅರಮನೆ ಆವರಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆನೆ ನಿಯಂತ್ರಿಸಲು ಮಾವುತರು, ಕಾವಾಡಿಗರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ದಸರಾ ಆನೆಗಳ ಕರೆತಂದು ನಿಯಂತ್ರಣ ಮಾಡಲಾಗಿದೆ. ಅಭಿಮನ್ಯು, ಧನಂಜಯ ಆನೆಗಳ ಮೂಲಕ ಹೆಣ್ಣಾನೆ ನಿಯಂತ್ರಣ ಮಾಡಲಾಗಿದೆ.
ಇದನ್ನೂ ಓದಿ: Mysuru Dasara 2021: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ, ಗಜಪಡೆಗೆ ತೂಕ ಹೊರಿಸಿ ತಾಲೀಮು
ಇದನ್ನೂ ಓದಿ: ಮೈಸೂರು: ರೆಡ್ ಬುಲ್ ಪಕ್ಷಿ ಮರಿಗಳಿಗೆ ಆಹಾರ ನೀಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್
Published On - 9:23 pm, Mon, 20 September 21